ಪಾಟ್ನಾ: ರೈಲು ಹಳಿ ತಪ್ಪಿ (North East Express Train Derails) ಉರುಳಿದ ಪರಿಣಾಮ ನಾಲ್ವರು ಸಾವನ್ನಪ್ಪಿ, ಸುಮಾರು 80ಕ್ಕೂ ಅಧಿಕ ಮಂದಿ ಗಾಯಗೊಂಡಿರುವ ಘಟನೆ ಬಿಹಾರದ ಬಾಸ್ಕರನಳ್ಳಿ ನಡೆದಿದೆ. ಬುಧವಾರ ರಾತ್ರಿ 10 ಗಂಟೆ ಸುಮಾರಿಗೆ ರೈಲು ಹಳಿ ತಪ್ಪಿ 6 ಕ್ಕೂ ಹೆಚ್ಚು ಭೋಗಿಗಳು ಉರುಳಿಬಿದ್ದಿದೆ. ದೆಹಲಿಯ ಆನಂದ್ ವಿಹಾರ್ ಟರ್ಮಿನಲ್ನಿಂದ ಅಸ್ಸಾಂನ ಕಾಮಾಖ್ಯಕ್ಕೆ ತೆರಳುತ್ತಿದ್ದ ಈಶಾನ್ಯ ಎಕ್ಸ್ಪ್ರೆಸ್ ರೈಲು ಬಾಸ್ಕರನ ರಘುನಾಥಪುರ (Raghunathpur station) ಬಳಿ ಹಳಿ ತಪ್ಪಿದೆ. ದುರಂತದಲ್ಲಿ 80ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿದ್ದು ಸ್ಥಳೀಯ ಅಸ್ಪತ್ರೆಗೆ ದಾಖಲಿಸಲಾಗಿದೆ.
ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಡಿಸಿಎಂ ತೇಜಸ್ವಿ ಯಾದವ್ (Tejashwi Yadav) ಆಸ್ಪತ್ರೆಗೆಳು ಅಲರ್ಟ್ ಆಗಿರುವಂತೆ ಹೇಳಿದ್ದಾರೆ. ಹೆಲ್ಪ್ಲೈನ್ ಸಹ ನೀಡಲಾಗಿದೆ. ಈ ಸಂಬಂಧ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಪ್ರತಿಕ್ರಿಯಿಸಿ, ರಕ್ಷಣಾ ಕಾರ್ಯಾಚರಣೆ ಪೂರ್ಣ ತೆರವು ಮತ್ತು ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದೆ. ಎಲ್ಲಾ ಕೋಚ್ಗಳನ್ನು ಪರಿಶೀಲಿಸಲಾಗಿದೆ. ಪ್ರಯಾಣಿಕರನ್ನು ಅವರ ಮುಂದಿನ ಪ್ರಯಾಣಕ್ಕಾಗಿ ಶೀಘ್ರದಲ್ಲೇ ವಿಶೇಷ ರೈಲಿಗೆ ಸ್ಥಳಾಂತರಿಸಲಾಗುವುದು ಎಂದು ವೈಷ್ಣವ್ ಎಕ್ಸ್ ನಲ್ಲಿ ಮಾಹಿತಿ ನೀಡಿದ್ದಾರೆ.