ನವದೆಹಲಿ/ಟೆಲ್ ಅವಿವ್: ಹಮಾಸ್ ಬಂಡುಕೋರರ (Hamas Militants) ಗುಂಪಿನ ಹಿರಿಯ ಸದಸ್ಯ, ಹಮಾಸ್ನ ವೈಮಾನಿಕ ಶ್ರೇಣಿಯ ಮುಖ್ಯಸ್ಥ (Senior Military Commander) ಅಬು ಮುರಾದ್ನನ್ನು (Abu Murad) ಇಸ್ರೇಲ್ (Israel) ಭದ್ರತಾ ಪಡೆಗಳು ಹತ್ಯೆ ಮಾಡಿವೆ. ಜಾವ ಗಾಜಾ ಪಟ್ಟಿಯಲ್ಲಿ ಇಸ್ರೇಲ್ ವಾಯುಸೇನೆ ನಡೆಸಿದ ಏರ್ಸ್ಟ್ರೈಕ್ನಲ್ಲಿ (Air Strike) ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದೆ.
ಇಸ್ರೇಲ್ ರಕ್ಷಣಾ ಪಡೆಗಳು ಗಾಜಾ ಪಟ್ಟಿಯಲ್ಲಿ ರಾತ್ರಿಯಿಡೀ ವೈಮಾನಿಕ ದಾಳಿ ನಡೆಸಿತು. ದಾಳಿಯು ಭಯೋತ್ಪಾದಕ ಗುಂಪು ತನ್ನ ವೈಮಾನಿಕ ಚಟುವಟಿಕೆಯನ್ನು ನಿರ್ವಹಿಸುತ್ತಿದ್ದ ಪ್ರಧಾನ ಕಚೇರಿಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತು. ಈ ದಾಳಿಯಲ್ಲಿ ಅಬು ಮುರಾದ್ನನ್ನು ಹತ್ಯೆಗೈಯಲಾಗಿದೆ ಎಂದು ವರದಿ ಮಾಡಿದೆ. ಅಬು ಮುರಾದ್ ಕಳೆದ ನಡೆದ ರಾಕೆಟ್ ದಾಳಿ ಮತ್ತು ಇಸ್ರೇಲಿ ಪ್ರಜೆಗಳ ಹತ್ಯಾಕಾಂಡದ ಸಮಯದಲ್ಲಿ ಬಂಡುಕೋರರನ್ನು ನಿರ್ದೇಶಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸಿದರು.
ಅಕ್ಟೋಬರ್ 7ರಂದು ಇಸ್ರೇಲ್ಗೆ ಒಳನುಸುಳುವಿಕೆಗೆ ಕಾರಣವಾದ ಹಮಾಸ್ನ ಕಮಾಂಡೋ ಪಡೆಗಳಿಗೆ ಸೇರಿದ ಹತ್ತಾರು ಸೈಟ್ಗಳನ್ನು ಪ್ರತ್ಯೇಕ ದಾಳಿಗಳಲ್ಲಿ ಹೊಡೆದಿದೆ ಎಂದು ಐಡಿಎಫ್ ಹೇಳಿದೆ. ಹಮಾಸ್ ಶನಿವಾರ ಇಸ್ರೇಲ್ ಮೇಲೆ ದಾಳಿ ಅರಂಭಿಸಿದ ಬಳಿಕ ದಶಕಗಳಲ್ಲೇ ಸಂಘರ್ಷದ ಅತಿದೊಡ್ಡ ಸಂಘರ್ಷ ಉಲ್ಬಣವಾಗಿದೆ. ದಾಳಿಯಲ್ಲಿ ಇಸ್ರೇಲ್ನಲ್ಲಿ 1,300 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇಸ್ರೇಲ್ ಪ್ರತಿ-ವೈಮಾನಿಕ ದಾಳಿಯಲ್ಲಿ ಗಾಜಾದಲ್ಲಿ 1,530ಕ್ಕೂ ಹೆಚ್ಚು ಜನರನ್ನು ಕೊಂದಿದೆ. ಇಸ್ರೇಲ್ನಲ್ಲಿ ಸುಮಾರು 1,500 ಹಮಾಸ್ ಉಗ್ರಗಾಮಿಗಳು ಕೊಲ್ಲಲ್ಪಟ್ಟರು ಎಂದು ಇಸ್ರೇಲ್ ಹೇಳಿಕೊಂಡಿದೆ.