ಬಾಲಿವುಡ್ ನಟಿ ರಾಖಿ ಸಾವಂತ್, ಬಂದೂಕು (Gun) ಹಿಡಿದುಕೊಂಡು ಬೀದಿಗೆ ಬಂದಿದ್ದಾರೆ. ಸೈನಿಕರ ವೇಷದಲ್ಲಿ ಬಂದೂಕು ಹಿಡಿದುಕೊಂಡು ಬೀದಿಗೆ ಬಂದ ರಾಖಿ, ದೇಶ ಸೇವೆಗಾಗಿ ನಾನು ಸದಾ ಸಿದ್ಧ ಎಂದು ಹೇಳಿಕೊಂಡಿದ್ದಾರೆ. ಪ್ಯಾಲೇಸ್ತೀನ್ (Palestine) ಮತ್ತು ಇಸ್ರೇಲ್ ನಡುವೆ ಯುದ್ದ ನಡೆದಿರುವ ಈ ಸಂದರ್ಭದಲ್ಲಿ ರಾಖಿ ಹುಚ್ಚಾಟ ಕಂಡು ಕೆಲವರು ಈಕೆಯನ್ನು ಪ್ಯಾಲೇಸ್ತೀನ್ ಗೆ ಕಳುಹಿಸಿ ಎಂದು ಕಾಮೆಂಟ್ ಮಾಡಿದ್ದಾರೆ.
ಪ್ರಚಾರಕ್ಕಾಗಿ ನಾನಾ ವೇಷಗಳನ್ನು ಹಾಕುತ್ತಲೇ ಇರುತ್ತಾರೆ ರಾಖಿ ಸಾವಂತ್. ಈವರೆಗೂ ನಾನಾ ರೀತಿಯ ಕಾಸ್ಟ್ಯೂಮ್ ಹಾಕಿಕೊಂಡು ಬಂದಿದ್ದಾರೆ. ಇದೇ ಮೊದಲ ಬಾರಿಗೆ ಸೈನಿಕನ ವೇಷದಲ್ಲಿ ರಾಖಿ ಕಾಣಿಸಿಕೊಂಡಿದ್ದಾರೆ. ಸೈನಿಕರ ಸಮವಸ್ತ್ರ ತೊಟ್ಟು ಅವರನ್ನು ಅವಮಾನ ಮಾಡಬೇಡ ಎಂದು ಹಲವರು ನಟಿಯ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಪಾಕಿಸ್ತಾನಕ್ಕೆ ಹೋಗುವೆ ಅಂದಿದ್ರಲ್ಲ, ಅಲ್ಲಿಂದ ನೇರವಾಗಿ ಪ್ಯಾಲಿಸ್ತೀನ್ಗೆ ಹೋಗಿ ನಿನ್ನವರ ಜೊತೆ ಸೇರಿಕೋ. ಅಲ್ಲಿ ಜೀವ ಕೊಡು ಎಂದು ಸಾಕಷ್ಟು ಜನರು ಈ ವೇಷ ಮತ್ತು ಅವಳ ಡ್ರಾಮಾಗೆ ನೆಗೆಟಿವ್ ಕಾಮೆಂಟ್ ಗಳನ್ನೇ ಹಾಕಿದ್ದಾರೆ.