ಹೈದರಾಬಾದ್: ಭಾರತದಲ್ಲಿ ವಾಸಿಸಲು ಬಯಸುವವರು ‘ಭಾರತ್ ಮಾತಾ ಕಿ ಜೈ’ ಎಂದು ಹೇಳಬೇಕು ಎಂದು ಕೇಂದ್ರ ಸಚಿವ ಕೈಲಾಶ್ ಚೌಧರಿ ಹೇಳಿಕೆ ನೀಡಿದ್ದಾರೆ. ನಗರದಲ್ಲಿ ಬಿಜೆಪಿ ಆಯೋಜಿಸಿದ್ದ ರೈತರ ಸಮಾವೇಶದಲ್ಲಿ ಮಾತನಾಡಿದ ಅವರು, ಹೈದರಾಬಾದ್ನಲ್ಲಿ ಸಾರ್ವಜನಿಕ ಪ್ರತಿನಿಧಿಗಳು ಬಳಸುವ ಭಾಷೆಯ ಬಗ್ಗೆ ಪ್ರಸ್ತಾಪಿಸಿದರು.
ಮುಂದಿನ ದಿನಗಳಲ್ಲಿ ಅವರಿಗೆ ತಕ್ಕ ಪಾಠ ಕಲಿಸಬೇಕು ಮತ್ತು ರಾಜ್ಯದಲ್ಲಿ ರಾಷ್ಟ್ರೀಯ ಚಿಂತನೆಯ ಸರ್ಕಾರ ರಚನೆಯಾಗಬೇಕು ಎಂದರು. ಭಾರತದಲ್ಲಿ ಯಾರು ಭಾರತ್ ಮಾತಾ ಕಿ ಜೈ ಎಂದು ಘೋಷಣೆ ಕೂಗುವುದಿಲ್ಲ ಎನ್ನುತ್ತಾರೋ ಅವರು ನರಕಕ್ಕೆ ಹೋಗುತ್ತಾರೆ. ನೀವು ಭಾರತದಲ್ಲಿ ವಾಸಿಸಲು ಬಯಸುತ್ತೀರಾದರೆ ನೀವು ಭಾರತ್ ಮಾತಾ ಕಿ ಜೈ ಎಂದು ಹೇಳಲೇಬೇಕು ಎಂದು ಒತ್ತಾಯಿಸಿದರು.
ಭಾರತದಲ್ಲಿ ನೆಲೆಸಿರುವ ನೀವು ಪಾಕಿಸ್ತಾನ್ ಜಿಂದಾಬಾದ್ ಎಂದು ಹೇಳುತ್ತೀರಾ? ವಂದೇ ಮಾತರಂ ಮತ್ತು ಭಾರತ್ ಮಾತಾ ಕಿ ಜೈ ಎಂದು ಹೇಳುವವರಿಗೆ ಮಾತ್ರ ದೇಶದಲ್ಲಿ ಜಾಗವಿದೆ. ಅದಕ್ಕಾಗಿಯೇ ನಾನು ಹೇಳಲು ಬಯಸುತ್ತೇನೆಂದರೆ, ಭಾರತ್ ಮಾತಾ ಕಿ ಜೈ ಎಂದು ಹೇಳದ, ಹಿಂದೂಸ್ತಾನ್ ಮತ್ತು ಭಾರತದ ಬಗ್ಗೆ ನಂಬಿಕೆಯಿಲ್ಲದ, ಮತ್ತು ಪಾಕಿಸ್ತಾನ್ ಜಿಂದಾಬಾದ್ ಎಂದು ಹೇಳುವ ಯಾರೇ ಇದ್ದರೂ ಅವರು ಪಾಕಿಸ್ತಾನಕ್ಕೆ ಹೋಗಲಿ. ಅವರ ಅಗತ್ಯ ಇಲ್ಲಿ ಇಲ್ಲ ಎಂದರು.