ಧಾರವಾಡ ನಗರದ ಜಿಲ್ಲಾ ಟೆನಿಸ್ (Tennis) ಕ್ರೀಡಾಂಗಣದಲ್ಲಿ ಜಿಲ್ಲಾ ಟೆನಿಸ್ ಅಸೋಸಿಯೇಶನ್ ವತಿಯಿಂದ ಹಮ್ಮಿಕೊಂಡಿರುವ ಅಂತಾರಾಷ್ಟ್ರೀಯ ಪುರುಷರ ಟೆನಿಸ್ ಪಂದ್ಯಾವಳಿಗೆ ಮಾಜಿ ಟೀಂ ಇಂಡಿಯಾ ನಾಯಕ ಮೊಹಮ್ಮದ್ ಅಜರುದ್ದೀನ್ (Mohammad Azharuddin) ಚಾಲನೆ ನೀಡಿದರು.
ಈ ವೇಳೆ ಮಾಜಿ ಕ್ರಿಕೆಟ್ ಆಟಗಾರ ಅಜರುದ್ದೀನ್ ಅವರು ಟೆನಿಸ್ ಆಡುವ ಮೂಲಕ ಈ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಇವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ (Santosh Lad) ಜೊತೆಯಾದರು. ಇಬ್ಬರೂ ಕೆಲ ಹೊತ್ತು ಟೆನ್ನಿಸ್ ಆಡಿ, ಅಜರುದ್ದೀನ್ಗೆ ಲಾಡ್ ಅವರು ಹುರಿದುಂಬಿಸಿದರು.
ಈ ವೇಳೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಗೋಪಾಲ ಬ್ಯಾಕೋಡ್ ಸಾಥ್ ನೀಡಿದರು. ಇಂದಿನಿಂದ 5 ದಿನಗಳ ಕಾಲ ಈ ಟೆನಿಸ್ ಟೂರ್ನಿಮೆಂಟ್ ನಡೆಯಲಿದೆ. ವಿಶ್ವದ ಅಗ್ರಮಾನ್ಯ ಕ್ರೀಡಾಪಟುಗಳು ಈ ಟೂರ್ನಿಯಲ್ಲಿ ಭಾಗವಹಿಸುತ್ತಿದ್ದಾರೆ