ಬಾಲಿವುಡ್ ನಟಿ ಕಿಯಾರಾ ಅಡ್ವಾನಿ ಇತ್ತೀಚೆಗೆ ಬೇಬಿ ಪಿಂಕ್ ಡ್ರಸ್ ನಲ್ಲಿ ಮಿಂಚಿದ್ದಾರೆ. ನಟಿಯ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದು ಮಾರ್ಡನ್ ಬೇಬಿ ಡಾಲ್ ಎಂದು ಮೆಚ್ಚುಗೆ ಸೂಚಿಸಿದ್ದಾರೆ.
ಇತ್ತೀಚೆಗೆ ಫ್ಯಾಷನ್ ಷೋ ಒಂದರಲ್ಲಿ ಹೆಜ್ಜೆ ಹಾಕಿದ್ದ ನಟಿ ಕಿಯಾರಾ ಬೇಬಿ ಪಿಂಕ್ ಡ್ರಸ್ ನಲ್ಲಿ ಕಾಣಿಸಿಕೊಂಡು ಸಖತ್ ಮೆಚ್ಚುಗೆ ಪಡೆದುಕೊಂಡಿದ್ದಾರೆ. ಬೇಬಿ ಪಿಂಕ್ ಬಣ್ಣದ ಲೆಹೆಂಗ ತೊಟ್ಟು ರ್ಯಾಂಪ್ ಮೇಲೆ ಬೆಕ್ಕಿನ ನಡುಗೆಯಲ್ಲಿ ಬಳುಕಿದ್ದಾರೆ.
ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ವಿವಾಹದ ನಂತರ ನಟಿ ಕಿಯಾರಾ ಅಡ್ವಾಣಿ ಮತ್ತೆ ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿ ಆಗಿದ್ದಾರೆ.
ಸೂಪರ್ ಸ್ಟಾರ್ ಮಹೇಶ್ ಬಾಬು ಮತ್ತು ಕೊರಟಾಲ ಶಿವ ಕಾಂಬಿನೇಷನ್ನಲ್ಲಿ ಬಂದ ‘ಭರತ್ ಅನು ನೇನು’ ಸಿನಿಮಾ ಮೂಲಕ ಕಿಯಾರಾ ಟಾಲಿವುಡ್ನಲ್ಲಿ ಫೇಮಸ್ ಆದ್ರು. ರಾಮ್ ಚರಣ್ ಜೊತೆ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
ತೆಲುಗಿನಲ್ಲಿ ಕಿಯಾರಾ ಮಾಡಿದ್ದು ಒಂದೇ ಸಿನಿಮಾ ಆದ್ರು ಸ್ಟಾರ್ ಹೀರೋಯಿನ್ ಸ್ಥಾನ ಗಳಿಸಿದ್ದಾರೆ. ಇತ್ತೀಚೆಗೆ ರಾಮ್ ಚರಣ್ ಜೊತೆ ‘ವಿನಯ ವಿಧೇಯ ರಾಮ’ ಚಿತ್ರದಲ್ಲಿ ಕಾಣಿಸಿಕೊಂಡಿದ್ರು . ಆದರೆ ಸಿನಿಮಾ ನಿರೀಕ್ಷಿತ ಗಳಿಕೆ ಮಾಡಿಲ್ಲ.