ಬೆಂಗಳೂರು: ಆಗಸದಲ್ಲಿ ಖಗೋಳ ವಿಸ್ಮಯ ನಡೆಯಲಿದೆ. ಇತ್ತೀಚೆಗಷ್ಟೇ ಸೂರ್ಯ ಗ್ರಹಣವಾಯ್ತು. ಅಕ್ಟೋಬರ್ 28ಕ್ಕೆ ಚಂದ್ರಗ್ರಹಣ ವಿಸ್ಮಯ ನಡೆಯಲಿದೆ
ಅಕ್ಟೋಬರ್ 28 ರಂದು ಚಂದ್ರಗ್ರಹಣ ಇರಲಿದೆ. ಅಕ್ಟೋಬರ್ 29ಕ್ಕೂ ಇದರ ಪ್ರಭಾವ ತಟ್ಟಲಿದೆ. ಜ್ಯೋತಿಷ್ಯದ ಪ್ರಕಾರ ಗ್ರಹಣ ಅಮಂಗಳ, ಸೂತಕದ ಛಾಯೆ ಎನ್ನುವ ನಂಬಿಕೆ ಇದೆ. ಈ ವರ್ಷದ ಕೊನೆಯ ಚಂದ್ರಗ್ರಹಣ ಇದಾಗಿದ್ದು ಭಾರತದಲ್ಲಿಯೂ ಗೋಚರಿಸಲಿದೆ. ಹಾಗಾದ್ರೆ ಈ ಚಂದ್ರಗ್ರಹಣದ ವಿಶೇಷತೆ ಏನು ಯಾವ ಸಮಯಕ್ಕೆ ಆರಂಭವಾಗುತ್ತೆ ಗ್ರಹಣ ಮೋಕ್ಷ ಕಾಲದ ಸಂಪೂರ್ಣ ವಿವರ ಇಲ್ಲಿದೆ.
ಗ್ರಹಣದ ಅವಧಿ (ವಿಜ್ಞಾನಿಗಳ ಪ್ರಕಾರ): ಅಕ್ಟೋಬರ್ -28ರ ರಾತ್ರಿ 11.30ಕ್ಕೆ ಸಂಭವಿಸಿ ಅಕ್ಟೋಬರ್ 29 ರ 2.30ರವರೆಗೆ ಇರಲಿದೆ.
ಗ್ರಹಣದ ಅವಧಿ (ಜ್ಯೋತಿಷಿಗಳ ಪ್ರಕಾರ): ಮಧ್ಯರಾತ್ರಿ 1.04 ಕ್ಕೆ ಆರಂಭ. 2:22ಕ್ಕೆ ಅಂತ್ಯ.
ವಿಶೇಷತೆ ಏನು..?: ರಾಹುಗ್ರಸ್ಥ ಚಂದ್ರಗ್ರಹಣವಿದು. ಭಾರತದಲ್ಲಿ ಪಾಶ್ರ್ವವಾಗಿ ಗೋಚರಿಸಲಿದೆ. ಶರದ್ ಪೂರ್ಣಿಮೆಯ ರಾತ್ರಿಯಲ್ಲಿ ಈ ಗ್ರಹಣ ಸಂಭವಿಸಲಿದೆ. ಗಜಕೇಸರಿ ಯೋಗದಲ್ಲಿ ಈ ಬಾರಿ ಚಂದ್ರಗ್ರಹಣ ಸಂಭವಿಸಲಿದ್ದು, ಸಾಮಾನ್ಯವಾಗಿ ಗಜಕೇಸರಿ ಯೋಗದಲ್ಲಿ ಗ್ರಹಣ ಬಹಳ ಅಪರೂಪವಾಗಿದೆ. 30 ವರ್ಷಗಳಿಗೊಮ್ಮೆ ಸಂಭವಿಸುವ ಅಪರೂಪದ ಗ್ರಹಣ ಇದಾಗಿದೆ. ಈ ರೀತಿಯ ಗ್ರಹಣ ಬಂದಾಗ ಕೆಲವೊಮ್ಮೆ ಮಹಾ ಅಪತ್ತು ಬರುವ ಸಾಧ್ಯತೆಯೂ ಇರಲಿದೆ. ಪ್ರಾಕೃತಿಕ ವಿಕೋಪ, ಧರ್ಮ ಸಂಘರ್ಷಗಳು ನಡೆಯುವ ಸಾಧ್ಯತೆಯೂ ಇದೆ.