ಬೆಂಗಳೂರು: ಇಂದು ಚಂದ್ರಗ್ರಹಣ ಹಿನ್ನೆಲೆಯಲ್ಲಿ ನಗರದ ದೊಡ್ಡಗಣಪತಿ ದೇಗುಲ ಇಂದು ಸಂಜೆ ಬಂದ್ ಆಗಲಿದೆ. ಇಂದು ಸಂಜೆಯಿಂದ ರವಿವಾರ ಬೆಳಗ್ಗೆವರೆಗೂ ದರ್ಶನಕ್ಕೆ ಅವಕಾಶವಿಲ್ಲ. ನಾಳೆ ಬೆಳಗ್ಗೆ ದೇಗುಲದ ಶುದ್ಧಿ ಕಾರ್ಯ ಮುಗಿಸಿ ವಿಶೇಷ ಪೂಜೆ ಬಳಿಕ ದೇವರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.
ವರ್ಷದ ಕೊನೆಯ ಗ್ರಹಣ ಇದು. ಈ ವರ್ಷದ ಚಂದ್ರಗ್ರಹಣ 30 ವರ್ಷಗಳ ನಂತರ ಸಂಭವಿಸಿದೆ. ಈ ಭಾರಿ ಮಧ್ಯರಾತ್ರಿ ಸಂಭವಿಸಿರುವುದೇ ವಿಶೇಷ. ಇಂದು ಸಂಜೆ 4 ಗಂಟೆಯ ಒಳಗೆ ಊಟ ಮುಗಿಸಿಕೊಳ್ಳಬೇಕು. 4 ಗಂಟೆಯ ನಂತರ ಪೂಜೆಯಲ್ಲಿ ತೊಡಗಿಕೊಕಳಬೇಕು.
ಮೇಷರಾಶಿ, ಕುಂಬ, ತುಲಾ ರಾಶಿಗೆ ಸಮಸ್ಯೆ ಇದೆ. ಮೇಷ ರಾಶಿಯವರು ಸ್ನಾನ ಮಾಡಿ ಶಿವನ ದೇವಸ್ಥಾನಕ್ಜೆ ಅಕ್ಕಿ, ಮೊಸರು, ಹಾಲನನ್ನು ದಾನ ನೀಡಬೇಕು. ಯಾವ ರಾಶಿಯ ಮೇಲೆ ಗ್ರಹಣ ಸಂಭವಿಸೊತ್ತೋ, ಆ ವೇಳೆ ದಾನ ಮಾಡಿದರೆ ಒಳ್ಖೆಯದು. ಹೀಗಾಗಿ ಇಂದು ಗಂಗಾಧರನಿಗೆ ವಿಶೇಷ ಪೂಜೆ ಆಗಿದೆ. ನಂತರ ದರ್ಬೆಯಿಂದ ಬಂದನ ಮಾಡ್ತೀವಿ.
ನಾಳೆ ಬೆಳ್ಳಗ್ಗೆಯವರೆಗೂ ದೇವಸ್ಥಾನ ತೆರೆಯವುದಿಲ್ಲ. ನಾಳೆ ಸೂರ್ಯ ಉದಯಕ್ಕು ಮೊದಲೇ ದೇವಸ್ಥಾನವನ್ನ ಶುದ್ದಿಗೊಳಿಸಿ. ನಾಳೆ ಬೆಳ್ಳಗ್ಗೆ ವಿಶೇಷ ಪೂಜೆಯನ್ನ ಮಾಡಲಾಗುತ್ತೆ ಎಂದು ಗವಿ ಗಂಗಾಧರ ದೇವಸ್ಥಾನದ ಮುಖ್ಯ ಅರ್ಚಕರಾದ ಸೋಮ ಸುಂದರ್ ದೀಕ್ಷಿತ್ ಹೇಳಿದರು.