ಈ ವರ್ಷದ ಎರಡನೇ ಮತ್ತು ಕೊನೆಯ ಚಂಗ್ರಹಣಕ್ಕೆ ಕ್ಷಣಗಣನೆ ಆರಂಭವಾಗಿದೆ. 30 ವರ್ಷದ ಬಳಿಕ ಶರದ್ ಹುಣ್ಣಿಮೆಯಂದೇ ಚಂದ್ರಗ್ರಹಣಕ್ಕೆ ಬಾನು ಸಾಕ್ಷಿಯಾಗಲಿದೆ. ಇಂದು ಅಂದ್ರೆ ಅ.28 ಮತ್ತು 29 ರ ಮಧ್ಯರಾತ್ರಿ ಚಂದ್ರ ಗ್ರಹಣ ಸಂಭವಿಸಲಿದೆ.
ಚಂದ್ರ ಗ್ರಹಣ ಸಮಯ
ಅಕ್ಟೋಬರ್ 28ರ ರಾತ್ರಿ 11.31ಕ್ಕೆ ಚಂದ್ರಗ್ರಹಣ ಆರಂಭ ಅಕ್ಟೋಬರ್ 29ರ ಮಧ್ಯರಾತ್ರಿ 3.36ಕ್ಕೆ ಚಂದ್ರಗ್ರಹಣ ಅಂತ್ಯ
ಈ ಭಾರಿ ಭಾರತದಲ್ಲಿ ಭಾಗಶಃ ಚಂದ್ರಗ್ರಹಣ ಸಂಭವಿಸಲಿದೆ
ಇಂದು ರಾತ್ರಿ 11.30ರಿಂದ ಚಂದ್ರಗ್ರಹಣ ಆರಂಭವಾಗಲಿದೆ. ಇಂದು ಮಧ್ಯರಾತ್ರಿ ವೇಳೆಗೆ ಭಾರತದ ಎಲ್ಲಾ ಸ್ಥಳಗಳಲ್ಲಿ ಭಾಗಶಃ ಚಂದ್ರಗ್ರಹಣ ಗೋಚರಿಸಲಿದೆ. ರಾತ್ರಿ 11.30ಕ್ಕೆ ಆರಂಭವಾಗುವ ಚಂದ್ರಗ್ರಹಣ ನಾಳೆ ಬೆಳಗಿನ ಜಾವ 3.36 ನಿಮಿಷಕ್ಕೆ ಕೊನೆಗೊಳ್ಳುತ್ತದೆ. ಈ ಸಮಯದಲ್ಲಿ ಭಾರತದಲ್ಲಿ ಚಂದ್ರಗ್ರಹಣವನ್ನು ಸ್ಪಷ್ಟವಾಗಿ ವೀಕ್ಷಿಸಿಬಹುದಾಗಿದೆ. ಇನ್ನೂ ಇಂದು ಸಂಭವಿಸುತ್ತಿರುವ ರಾಹುಗ್ರಸ್ತ ಚಂದ್ರಗ್ರಹಣದ ಸಮಯವಾದ್ರೂ ಏನು ಅಂದ್ರೆ.́
ಗ್ರಹಣ ಗೋಚರ ಸಮಯ
ಗ್ರಹಣ ಸ್ಪರ್ಶಕಾಲ – ರಾತ್ರಿ 11.30 ಗ್ರಹಣ ಮಧ್ಯಕಾಲ – ಮಧ್ಯರಾತ್ರಿ 1.42 ಗ್ರಹಣ ಮೋಕ್ಷಕಾಲ – ಬೆಳಗಿನ ಜಾವ 3.30
ಚಂದ್ರಗ್ರಹಣ ಎಲ್ಲೆಲ್ಲಿ ಗೋಚರಿಸಲಿದೆ
ಭಾರತ, ಬೆಲ್ಜಿಯಂ, ಗ್ರೀಸ್, ಫಿನ್ಲ್ಯಾಂಡ್, ಪೋರ್ಚುಗಲ್, ಥೈಲ್ಯಾಂಡ್, ಹಂಗೇರಿ, ಈಜಿಪ್ಟ್, ಟರ್ಕಿ, ಇಂಡೋನೇಷ್ಯಾ, ಇಟಲಿ, ಮಯನ್ಮಾರ್, ಸ್ಪೇನ್ ಸೇರಿ ಹಲವು ದೇಶಗಳಲ್ಲಿ ಚಂದ್ರ ಗ್ರಹಣ ಗೋಚರಿಸಲಿದೆ.
ಸೂರ್ಯ ಚಂದ್ರನ ನಡುವೆ ಬರಲಿದೆ ಭೂಮಿ
ಚಂದ್ರಗ್ರಹಣ ಹುಣ್ಣಿಮೆಯ ದಿನ ಸಂಭವಿಸುತ್ತದೆ. ಭೂಮಿಯು ಚಂದ್ರ ಮತ್ತು ಸೂರ್ಯನ ನಡುವೆ ನಿಖರವಾಗಿ ಸ್ಥಾನ ಪಡೆದಾಗ ಭೂಮಿಯ ನೆರಳು ಚಂದ್ರನ ಮೇಲ್ಮೈ ಮೇಲೆ ಬೀಳುತ್ತದೆ. ಆಗ ಚಂದ್ರ ಕೆಲ ಸಮಯ ಮರೆಯಾಗುತ್ತಾನೆ. ಚಂದ್ರನ ಮೇಲ್ಮೈ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಅಂದರೆ ಭೂಮಿ ಸೂರ್ಯ ಮತ್ತು ಚಂದ್ರನ ನಡುವೆ ಬಂದಾಗ ಗೋಲ್ಡನ್ ರಿಂಗ್ನಂತೆ ಚಂದ್ರ ಕಾಣಿಸುತ್ತದೆ.