ಬೆಂಗಳೂರು: ರಾಜ್ಯದಲ್ಲಿ ಬರಗಾಲ ಭೀತಿ ಎದ್ದು ಕಾಣುತ್ತಿದ್ದು ರಾಜ್ಯ ಸರ್ಕಾರದ ವಿರುದ್ಧ ಕುರುಬೂರ ಶಾಂತಕುಮಾರ ಕಿಡಿ ಕಾರಿದ್ದಾರೆ.
ನಗರದಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿದ ಅವರು, ಬರಗಾಲ, ಮಳೆ ಕಡಿಮೆ ವಿದ್ಯುತ್ ಉತ್ಪಾದನೆ ಕುಂಠಿತ ಕಾರಣ ರೈತರಿಗೆ ವಿದ್ಯುತ್ ವ್ಯತ್ಯಯಾಗ್ತಿದೆ ಇದೇ ಸರ್ಕಾರ ಕೈಗಾರಿಕೆಗಳಿಗೆ ಉದ್ಯಮಿಗಳಿಗೆ ಸಮರ್ಪಕ 24 ಗಂಟೆ ವಿದ್ಯುತ್ ಪೂರೈಕೆ ಮಾಡ್ತಿದ ಸರ್ಕಾರದ ಇಬ್ಬಗೆ ನೀತಿ ಸರಿ ಅಲ್ಲ, ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣೆ ಯಾವ ನ್ಯಾಯ ಎಂದು ಪ್ರಶ್ನೆ ಮಾಡಿದರು.
10 ಗಂಟೆಗಳ ವಿದ್ಯುತ್ ನೀಡದಿದ್ದರೆ 45 ಲಕ್ಷ ಕೃಷಿ ಪಂಪ್ ಶೆಟ್ ರೈತರ ಜೊತೆಗೂಡಿ ವಿಧಾನಸೌಧ ಮುತ್ತಿಗೆ ಹಾಕುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್
ರಾಜ್ಯ ಸರ್ಕಾರ 225 ತಾಲೂಕು ಬರಗಾಲ ಘೋಷಣೆ ಮಾಡಿದೆ ಬರಗಾಲ ಸಂಕಷ್ಟದ ನೆರವು ಕಾರ್ಯ ಆರಂಭ ಆಗಿಲ್ಲ
ದನಕರುಗಳಿಗೆ ಮೇವು, ಕುಡಿಯುವ ನೀರು ಬೆಳೆ ನಷ್ಟ ಪರಿಹಾರ, ನೀಡಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.