ಬೆಂಗಳೂರು: ಹುಲಿ ಉಗುರಿನ ವಿವಾದ ರಾಜ್ಯದಲ್ಲಿ ಸಾಕಷ್ಟು ಚರ್ಚೆ ಹುಟ್ಟುಹಾಕಿದ್ದು ಸೆಲೆಬ್ರೆಟಿಗಳು, ಅರ್ಚಕರು, ಪ್ರಭಾವಿಗಳು ಹುಲಿ ಉಗುರು ಧರಿಸಿ ವಿವಾದಕ್ಕೆ ಗುರಿಯಾಗಿದ್ದಾರೆ. ಈ ಬಗ್ಗೆ ವಿಧಾನ ಪರಿಷತ್ ನಾಯಕ ಟಿ.ಎ.ಶರವಣ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಹುಲಿ ಉಗುರು ವಿವಾದ ಮುಂದಿಟ್ಟುಕೊಂಡು ಅಮಾಯಕ ಚಿನ್ನಾಭರಣ ವ್ಯಾಪಾರಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಹಿಂಸಿಸುತ್ತಿರುವ ಪ್ರಕರಣಗಳು ವರದಿಯಾಗುತ್ತಿದ್ದು, ಇದು ಮುಂದುವರೆದರೆ ಅರಣ್ಯ ಇಲಾಖೆ ಅಧಿಕಾರಿಗಳ ದೌರ್ಜನ್ಯದ ವಿರುದ್ಧ ಉಗ್ರ ಪ್ರತಿಭಟನೆ ಮಾಡಲಾಗುವುದು ಚಿನ್ನಾಭರಣ ವ್ಯಾಪಾರಿಗಳಿಗೂ ಅನಗತ್ಯವಾಗಿ ಮಾಹಿತಿ ಪಡೆಯುವ ಹೆಸರಿನಲ್ಲಿ ಟಾರ್ಚಾರ್ ಕೊಟ್ತಿದ್ದಾರೆ ಎಂದು ಕರ್ನಾಟಕ ಜುವೆಲ್ಲರಿ ಅಸೋಸಿಯೇಷನ್ ಅಧ್ಯಕ್ಷ ಟಿ ಎ ಶರವಣ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿ ವೇಳೆ ಕೆಂಡ ಕಾರಿದ್ದಾರೆ.
ಹುಲಿ ಉಗುರು, ಚರ್ಮ, ಜಿಂಕೆ ಕೊಂಬು, ಚರ್ಮ ಸೇರಿ ವನ್ಯ ಜೀವಿ ಉತ್ಪನ್ನಗಳನ್ನು ಹೊಂದುವುದು ಅಪಾರಾಧ ಎಂಬ ಕಾಯಿದೆ ಬಗ್ಗೆ ಜನಸಾಮಾನ್ಯರಿಗೆ ಅರಿವಿಲ್ಲ ಎಂದು ಖುದ್ದು ಅರಣ್ಯ ಮಂತ್ರಿಯೆ ಹೇಳುತ್ತಾರೆ. ಈ ಬಗ್ಗೆ ಅರಿವು ಮೂಡಿಸುವ ಮುನ್ನವೇ ಅಧಿಕಾರಿಗಳು ಕೆಲವು ರಾಜಕಾರಣಿಗಳು, ಸೆಲೆಬ್ರಿಟಿಗಳ ಮನೆ ಮೇಲೆ ದಾಳಿ ನಡೆಸುವ ರೀತಿಯಲ್ಲಿ ಶೋಧ ನಡೆಸಿ ಭಯ ಹುಟ್ಟಿಸುತ್ತಾರೆ. ಇದು ಎಂಥ ಸರಕಾರ ಎಂದು ಹಿಗ್ಗಾಮುಗಾ ಪ್ರಹಾರ ನಡೆಸಿದರು.
ಹುಲಿ ಉಗುರು ಮುಂದಿಟ್ಟುಕೊಂಡು ದಾಳಿ ನಡೆಸಿದರೆ ಪ್ರಚಾರ ಸಿಗುತ್ತದೆ ಎನ್ನುವ ಪ್ರಚಾರದ ತೆವಲೀನಿಂದ ಈ ದಾಳಿ ನಡೆಸಲಾಗುತ್ತಿದೆ ಎಂದು ಶರವಣ ಆಕ್ರೋಶ ವ್ಯಕ್ತ ಪಡಿಸಿದರು.
ಚಿನ್ನಾಭರಣ ವ್ಯಾಪಾರಿಗಳ ಮೇಲೂ ಅರಣ್ಯ ಇಲಾಖೆ ಅಧಿಕಾರಿಗಳು ದೌರ್ಜನ್ಯ ನಡೆಸಿದ್ದಾರೆ. ತುಮಕೂರಿನಲ್ಲಿ ಅಂಗಡಿ ಸಿಬ್ಬಂದಿಯನ್ನು ಬಲವಂತವಾಗಿ ಎಳೆದೊಯ್ದು ಹಿಂಸಿಸಿದ್ದಾರೆ. ಇದು ಖಂಡನಾರ್ಹ ಎಂದು ಟೀಕಿಸಿದರು.
ಕಾಯಿದೆ ಎಲ್ಲರಿಗೂ ಒಂದೇ. ಬಡಪಾಯಿ ಬಿಗ್ ಬಾಸ್ ಸಂತೋಷ್ ರನ್ನು ಬಂಧಿಸಿ ಜೈಲಿಗೆ ಹಾಕಿದ ಸರಕಾರ, ಕೆಲವು ಪ್ರಭಾವಿಗಳು ದೊಡ್ಡ ದೊಡ್ಡ ನವಿಲುಗರಿ ಹಾರ ಹಾಕಿದ್ದರೂ ಬಿಟ್ಟಿದ್ದೇಕೆ? ಒಬ್ಬರಿಗೆ ಒಂದು ನ್ಯಾಯ, ಇನ್ನೊಬ್ಬರಿಗೆ ಇನ್ನೊಂದು ನ್ಯಾಯ ಎಂದಿದ್ದಾರೆ.
ಯಾವುದೇ ನೊಟೀಸ್ ಕೂಡ ನೀಡದೆ, ನಕಲಿ ಹುಲಿ ಉಗುರು ಆಗಿದ್ದರೂ ಅದನ್ನು ಪರಿಶೀಲಿಸದೆ ದಾಳಿ ನಡೆಸಲಾಗಿದೆ. ಕೆಲವು ಪ್ರಕರಣಗಳಲ್ಲಿ ಮನೆಯ ಪೂರ್ವಿಕರು ಹುಲಿ ಉಗುರು ನೀಡಿದ್ದಾರೆ ಎನ್ನುವ ಸಮಜಾಯಿಷಿ ನೀಡಿದರೂ ಅದನ್ನು ಕೊಂಡೊಯ್ಯಲಾಗಿದೆ . ಇದು ಹೇಯ ಎಂದು ದುಷಿಸಿದರು.
ಮುಖ್ಯಮಂತ್ರಿಗಳು ತಕ್ಷಣ ಮದ್ಯ ಪ್ರವೇಶಿಸಿ, ಚಿನ್ನಾಭರಣ ವ್ಯಾಪಾರಿಗಳಿಗೆ ಆಗುತ್ತಿರುವ ಕಿರುಕುಳ ನಿಲ್ಲಿಸಬೇಕು. ಯಾರಾದರೂ ಹುಲಿ ಉಗುರು ಹೊಂದಿದ್ದರೆ ಕಾನೂನು ರೀತ್ಯಾ ಅದು ತಪ್ಪಾಗಲೀದ್ದು, ಕಾನೂನಿನ ಅರಿವು ಮೂಡಿಸಿ ಅದನ್ನು ವಾಪಸ್ ನೀಡಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹ ಪಡಿಸಿದರು.
ಸಿಕ್ಕ ಹುಲಿ ಉಗುರು ನಕಲಿಯೋ , ಅಸಲಿಯೋ ಎಂದು ಎಫ್.ಎಸ್.ಎಲ್ ಪ್ರಯೋಗಾಲಯದ ವರದಿ ನೀಡುವ ಮೊದಲೇ ಕಿರುಕುಳ, ಬಂಧನ ಮಾಡಲಾಗುತ್ತಿದೆ. ಇದು ಆಕ್ಷೇಪಾರ್ಹ. ಇದನ್ನು ಚಿನ್ನಾಭರಣ ವ್ಯಾಪಾರಿಗಳ ಸಂಘಟನೆ ಬಲವಾಗಿ ಖಂಡಿಸುತ್ತದೆ ಎಂದು ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ಸುಮೇಶ್ ಗನ್ನಾ, ಚೇತನ್ ಕುಮಾರ್, ಸುರೇಶ್ ಹಾಜರಿದ್ದರು.