ಬೆಂಗಳೂರು:- ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕರ್ನಾಟಕ ಆಂಟಿ ಬಯೋಟಿಕ್ಸ್ ಮತ್ತು ಫಾರ್ಮಸಿಟಿಕಲ್ಸ್ ಲಿಮಿಟೆಡ್ ಕಾರ್ಖಾನೆಯ ಕಪಿಲ ಕನ್ನಡ ಸಂಘದ ಸಹಯೋಗದೊಂದಿಗೆ ಮನರಂಜನಾತ್ಮಕ ಕ್ರೀಡೆಗಳನ್ನು ಆಯೋಜಿಸಲಾಗಿತ್ತು.
ಕಂಪನಿಯು ಪ್ರತಿ ವರ್ಷ
ಕಾರ್ಮಿಕರಲ್ಲಿ ಕ್ರೀಡಾ ಮನೋಭಾವ ಹೆಚ್ಚಿಸಲು ಮನೋರಂಜನೆ ನೀಡುವ ಮುಖ್ಯ ಉದ್ದೇಶ ಹೊಂದಿದ್ದು, ಈ ವರ್ಷವೂ ಕೂಡ ಕ್ರಿಕೆಟ್, ಚೆಸ್, ಇಂಡೋರ್ ಗೇಮ್ಸ್, ರಂಗೋಲಿ ಸ್ಪರ್ಧೆ ಸೇರಿದಂತೆ ಹಲವು ಕ್ರೀಡಾಕೂಟವನ್ನು ಬೆಂಗಳೂರು ಉತ್ತರ ತಾಲೂಕು ಪೀಣ್ಯದ ಎಸ್ಆರ್ಎಸ್ ಅರ್ ರಾಜಣ್ಣ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿತ್ತು.ಕ್ರೀಡಾಕೂಟದ ಎರಡನೇ ದಿನವಾದ ಇಂದು ಕ್ರಿಕೆಟ್ ಪಂದ್ಯಾವಳಿಗಳು ಜರುಗಿದ್ದು ಎಂಟು ತಂಡಗಳು ಪ್ರಶಸ್ತಿಗಾಗಿ ಸೆಣೆಸಾಟ ನಡೆಸಿದವು. ಫ್ಯಾನ್ಸ್ ಕ್ರಿಕೆಟ್ ಲೀಗ್ ಪಂದ್ಯಗಳಲ್ಲಿ ಕ್ರೀಡಾಂಗಣದಲ್ಲಿ ದಾಡಿಗರು ಸಿಡಿಸಿದ ಫೋರ್, ಸಿಕ್ಸ್ಗಳ ಸುರಿಮಳೆ ಬೌಲರ್ಗಳ ಉತ್ತಮ ಪ್ರದರ್ಶನ ಹುರುಪಿನಿಂದಿದ್ದು ಅಖಾಡದಲ್ಲಿ ತಮ್ಮ ಚಾಪು ಮೂಡಿಸಿದರು. ವಿಜೇತ ತಂಡಗಳಿಗೆ ಕನ್ನಡ ರಾಜ್ಯೋತ್ಸವದ ದಿನದಂದು ಸೂಕ್ತ ಬಹುಮಾನವನ್ನು ನೀಡಿ ಗೌರವಿಸಲಾಗುವುದು ಎಂದು ಅಧ್ಯಕ್ಷ ಎನ್.ಎಚ್. ಬಸವರಾಜು ತಿಳಿಸಿದರು.
ನಬೆಂಬರ್ 1 ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಉದ್ಘಾಟಣೆಯನ್ನ ಸಾಹಿತಿ ಚಟ್ನಳ್ಳಿ ಮಹೇಶ್, ಮುಖ್ಯ ಅತಿಥಿಗಳಾಗಿ ಮಕ್ಕಳ ತಜ್ಞರು ಹಾಗೂ ಬರಹಗಾರು ಆದ ವಿಜಯಲಕ್ಷ್ಮಿ ಬಾಳೆಕುಂದ್ರಿ, ಖ್ಯಾತ ಚಲನಚಿತ್ರ ನಟ ಡಾಲಿ ಧನಂಜಯ ಭಾಗವಹಿಸಲಿದ್ದು
ವಿಶೇಷವಾಗಿ ಸಾಂಸ್ಕೃತಿಕ ರಂಗ, ಆರೋಗ್ಯ ಕ್ಷೇತ್ರ, ಕಲಾವಿಭಾಗ ಹೀಗೆ ಹಲವು ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರನ್ನ ಗುರುತಿಸಿದ್ದು, ಅವರೊಂದಿಗೆ ಹಲವು ಗಣ್ಯರಿಗೆ ವಿಶೇಷ ಆಹ್ವಾನಿಸಿದ್ದು ಸನ್ಮಾನ ಮಾಡಲಾಗುವುದು. ಅಲ್ಲದೆ ಎಂದು ರಂಗರಾಜು ತಿಳಿಸಿದರು.
ಇದೇ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಬಿ. ಶ್ರೀನಿವಾಸ್, ಉಪಾಧ್ಯಕ್ಷ ಎಚ್. ಪ್ರಕಾಶ್, ಸಹ ಕಾರ್ಯದರ್ಶಿ ಎಂ.ಕೆ. ಜಗದೀಶ್, ಖಜಾಂಚಿ ಎ.ಎನ್. ರೆಡ್ಡಿ ಸೇರಿದಂತೆ ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.