ಬೆಂಗಳೂರು: ವಿಧಾನಸೌಧವನ್ನು ವ್ಯಾಪಾರಸೌಧ ಮಾಡಿದ್ದು ಬಿಜೆಪಿಯವರು ಎಂದು ಬೆಂಗಳೂರಿನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿಜೆಪಿಯವರು ಪ್ರವಚನ ಮಾಡುವುದನ್ನು ನಿಲ್ಲಿಸಲಿ. ಪರೀಕ್ಷಾ ಅಕ್ರಮಗಳನ್ನು ನಾವು ಸಮರ್ಥವಾಗಿ ತಡೆದಿದ್ದೇವೆ. ಬಿಜೆಪಿಯವರ ಬಲಗೈ ಬಂಟರೇ ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಪಿಎಸ್ಐ ಅಕ್ರಮ ನಡೆದಾಗ ಬಿಜೆಪಿಯವರಿಗೆ ಅಧಿಕಾರ ಇತ್ತು. ಆಗ ಯಾಕೆ ಯಾವುದನ್ನೂ ಪತ್ತೆ ಹಚ್ಚಲಿಲ್ಲ ಎಂದಿದ್ದಾರೆ.
ಹಾಗೆ ಮಾಜಿ ಸಚಿವರ ಮಕ್ಕಳೇ ಅಧಿಕಾರ ಅನುಭವಿಸ್ತಿದ್ದಾರೆ ಅಂತ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿಕೆ ವಿಚಾರ ಬಗ್ಗೆ ಮಾತನಾಡಿ, ಪಟ್ಟಿ ತೆಗೆಯಿರಿ ಯಾರ್ಯಾರು ಮಂತ್ರಿಯಾಗಿದ್ದಾರೆ. ಎಲ್ಲರಿಗೂ ಅವಕಾಶ ಸಿಗಲಿದೆ. ನೀವು ಪಟ್ಟಿ ತೆಗೆಯಿರಿ. ಎಲ್ಲರ ಕೊಡುಗೆ ಇದೆ. ವಿಪಪಕ್ಷದಲ್ಲಿ ಇದ್ದಾಗ ಅವರವರ ಕ್ಷೇತ್ರಕ್ಕೆ ಕೊಡುಗೆ ಇರಲಿದೆ, ರಾಜ್ಯಕ್ಕೆ ಇರಲಿದೆ. ಎಲ್ಲರೂ ಜನರಿಗೆ ಕೆಲಸ ಮಾಡಿದ್ದಾರೆ. ನಾವು ಬಸವ ತತ್ವವನ್ನ ನಂಬಿರೋದು. ಎಲ್ಲರಿಗೂ ಸಮಪಾಲು, ಸಮ ಬಾಳಿದೆ ಎಲ್ಲರೂ ಅವಕಾಶಕ್ಕೆ ಸ್ವಲ್ಪ ಕಾಯಬೇಕಷ್ಟೇ. ಬೇಳೂರು ಗೋಪಾಲಕೃಷ್ಣಗೆ ತಾಳ್ಮೆ ಇರಲಿ ಅಂತ ಸಲಹೆ ನೀಡಿದ ಪ್ರಿಯಾಂಕ್ ಖರ್ಗೆ
ಹಾಗೆ ಹುಲಿ ಉಗುರಿನ ಹಿಂದೆ ಸರ್ಕಾರ ಬಿದ್ದಿದೆ ಅನ್ನೋ ವಿಚಾರ ಬಗ್ಗೆನೂ ಮಾತನಾಡಿ ಬಿಜೆಪಿ ಅವರು ಅವರ ಮನೆ ನೋಡಿಕೊಳ್ಳಲಿ. ಹುಲಿ ಉಗುರು ಇಟ್ಟುಕೊಳ್ಳೋದು ಆಸ್ಪರ್ ಆಕ್ಟ್ ತಪ್ಪಲ್ವಾ.? ನಿಮ್ಮವರೇ ನಿಮಗೆ ಪರಚುತ್ತಿದ್ದಾರೆ. ಮೊದಲು ಅದನ್ನ ನೋಡಿಕೊಳ್ಳಿ. ಹುಲಿ ಉಗುರು ನೋಡಿಕೊಳ್ಳಲು ಕಾನೂನಿದೆ. ಈಶ್ವರ್ ಖಂಡ್ರೆ ಅವರಿದ್ದಾರೆ. ನಿಮ್ಮವರು ಪರಚೋದ್ರಿಂದ ಹೊರಗೆ ಬನ್ನಿ. ಅದರ ಬಗ್ಗೆ ಮೊದಲು ಮಾತಾಡಲಿ ಎಂದು ಗುಡುಗಿದರು.