ಒತ್ತಡ, ಆಯಾಸ, ನಿದ್ರೆಯ ಕೊರತೆ ಹೀಗೆ ಹಲವು ಕಾರಣಗಳಿರಬಹುದು. ಇದರಿಂದ ಪರಿಹಾರ ಪಡೆಯಲು ಹೆಚ್ಚಿನವರು ನೋವು ನಿವಾರಕ ಮಾತ್ರೆಗಳನ್ನು ಸೇವಿಸುತ್ತಲೇ ಇರುತ್ತಾರೆ. ಆದರೆ ನಿಮಗೊತ್ತಾ ಆಗಾಗ್ಗೆ ಕಾಣಿಸಿಕೊಳ್ಳುವ ತಲೆನೋವು ಮೈಗ್ರೇನ್ ನ ಲಕ್ಷಣವಾಗುವ ಸಾಧ್ಯತೆಯಿದೆ.
ಇದು ಮೈಗ್ರೇನ್ನ ಅತ್ಯಂತ ಸಾಮಾನ್ಯ ವಿಧವಾಗಿದೆ. ಇದು ತಲೆಯ ಒಂದು ಬದಿಯಲ್ಲಿ ಹಠಾತ್ ತಲೆನೋವು, ವಾಕರಿಕೆ, ಗೊಂದಲ, ಮಸುಕಾದ ದೃಷ್ಟಿ, ಮನಸ್ಥಿತಿ ಬದಲಾವಣೆಗಳು ಉಂಟಾಗುತ್ತದೆ. ಇದರಲ್ಲೂ ಕೂಡ ಆಯಾಸ ಮತ್ತು ಬೆಳಕು ಅಥವಾ ಶಬ್ದದಿಂದ ಉಲ್ಬಣಗೊಳ್ಳುವ ನೋವು ಮುಂತಾದ ಲಕ್ಷಣಗಳು ಉಂಟಾಗಬಹುದು.
ನೆನೆಸಿದ ಒಣದ್ರಾಕ್ಷಿ!
10-15 ಒಣದ್ರಾಕ್ಷಿಗಳನ್ನು ರಾತ್ರಿಯಿಡೀ ನೆನೆಸಿಡಿ. ನಂತರ ಇದನ್ನು ಬೆಳಿಗ್ ತಿಂದರೆಗೆ ಮೈಗ್ರೇನ್ ತಲೆನೋವನ್ನು ನಿವಾರಿಸುವಲ್ಲಿ ಸಹಕರಿಸುತ್ತದೆ.
ಜೀರಿಗೆ-ಏಲಕ್ಕಿ ಚಹಾ ಕುಡಿಯಿರಿ!
ಊಟದ ನಂತರ ಅಥವಾ ರಾತ್ರಿಯ ಊಟದ ನಂತರ ಅಥವಾ ಮೈಗ್ರೇನ್ ಲಕ್ಷಣಗಳು ಕಂಡುಬಂದಾಗಲೆಲ್ಲಾ ಇದನ್ನು ತೆಗೆದುಕೊಳ್ಳಬಹುದು.
ಹಸುವಿನ ತುಪ್ಪ ಸೇವಿಸಿ!
ದೇಹ ಮತ್ತು ಮನಸ್ಸಿನಲ್ಲಿರುವ ಹೆಚ್ಚುವರಿ ಪಿಷ್ಠಾವನ್ನು ಸಮತೋಲನಗೊಳಿಸಲು ಹಸುವಿನ ತುಪ್ಪಕ್ಕಿಂತ ಉತ್ತಮವಾಗಿ ಬೇರೇನೂ ಇಲ್ಲ.