ಕೋಲ್ಕತ್ತಾ: ಇಲ್ಲಿನ ಈಡನ್ ಗಾರ್ಡನ್ನಲ್ಲಿ ನೆದರ್ಲೆಂಡ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ಬಲಿಷ್ಠ ಬ್ಯಾಟಿಂಗ್, ಬೌಲಿಂಗ್ ಪಡೆ ಹೊಂದಿದ್ದರೂ ಹೀನಾಯ ಸೋಲನುಭವಿಸಿತು. ನೆದರ್ಲೆಂಡ್ಸ್ ತಂಡವು ಬಾಂಗ್ಲಾದೇಶದ ವಿರುದ್ಧ 87 ರನ್ಗಳ ಭರ್ಜರಿ ಜಯ ಸಾಧಿಸಿತು.
ಬಾಂಗ್ಲಾದೇಶ, ನೆದರ್ಲೆಂಡ್ಸ್ಗೆ ಶರಣಾಗುತ್ತಿದ್ದಂತೆ ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಬಾಂಗ್ಲಾದೇಶದ ಅಭಿಮಾನಿಯೊಬ್ಬ ಬಾಯಿಗೆ ಬಂದಂತೆ ಬೈದುಕೊಂಡು, ತನ್ನ ಶೂನಿಂದ ತಾನೇ ಹೊಡೆದುಕೊಂಡಿದ್ದಾನೆ. ಈ ಮೂಲಕ ತನ್ನ ಆಕ್ರೋಶ ಹೊರಹಾಕಿದ್ದು, ಈ ದೃಶ್ಯದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ
ಈ ವೀಡಿಯೋವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಅಭಿಮಾನಿ, ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾನೆ. ನಿಜವಾಗಿಯೂ ಇದು ದುಃಖಕರ ಮತ್ತು ನಾಚಿಗೇಡಿನ ಸಂಗತಿ. ಬಲಿಷ್ಠ ತಂಡಗಳೊಂದಿಗೆ ಆಡುವಾಗ ಸೋಲುವುದರಲ್ಲಿ ಸಮಸ್ಯೆಯಿಲ್ಲ. ಆದ್ರೆ ನೆದರ್ಲೆಂಡ್ಸ್ ವಿರುದ್ಧವೂ ಸೋಲುತ್ತೀರಿ ಅಂದ್ರೆ ನಾಚಿಕೆ ಆಗಬೇಕು. ಅಷ್ಟು ದೂರದಿಂದ ಬಂದು, ಮುಂಚಿತವಾಗಿಯೇ ದುಪ್ಪಟ್ಟು ದರ ನೋಡಿ ಹೋಟೆಲ್ ಬುಕ್ಕಿಂಗ್ ಮಾಡಿಕೊಂಡು ಬಂದಿದ್ದೇವೆ. ಆದ್ರೆ ಈ ರೀತಿ ಹೀನಾಯ ಸೋಲು ನೋಡುವುದಕ್ಕಿಂತ ನಮ್ಮ ಶೂನಲ್ಲಿ ನಾವೇ ಹೊಡೆದುಕೊಳ್ಳುವುದು ಉತ್ತಮ ಎಂದು ಕಿಡಿ ಕಾರಿದ್ದಾರೆ. ಬಳಿಕ ಶೂನಿಂದ ಹೊಡೆದುಕೊಂಡು ತಮ್ಮ ಆಕ್ರೋಶ ಹೊರಹಾಕಿದ್ದಾರೆ.