ಏಷ್ಯನ್ ಜ್ಯೂನಿಯರ್ ಗರ್ಲ್ಸ್ ಸ್ಕೇಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾರತಕ್ಕೆ ಕಂಚು ಪದಕ ಸಿಕ್ಕಿದೆ. ಕಂಚಿನ ಪದಕ್ಕೆ ಭಾರತದ ಯುವತಿಯರ ತಂಡ ಕೊರಳೊಡ್ಡಿದೆ.
ಅಕ್ಟೋಬರ್ 22ರಿಂದ 28ರವರೆಗೆ ಚೀನಾದ ಬಿಧಾಯಿನಲ್ಲಿ ನಡೆದ 19ನೇ ಏಷಿಯನ್ ಸ್ಕೇಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕದ 11ಜನ ಅಟಗಾರ್ತಿಯರು ಭಾರತ ದೇಶವನ್ನು ಪ್ರತಿನಿಧಿಸಿದ್ದರು. ಏಷ್ಯಾದ 8ವಿವಿಧ ದೇಶಗಳ ಜೊತೆಗಿನ ಸ್ಪರ್ಧೆಯಲ್ಲಿ ಭಾರತಕ್ಕೆ 3ನೇ ಸ್ಥಾನ ಲಭಿಸಿದೆ.
ಇದೀಗ ತಾಯ್ನಾಡಿಗೆ ಮರಳಿದ ಜ್ಯೂನಿಯರ್ ಗರ್ಲ್ಸ್ ತಂಡಕ್ಕೆ ಏರ್ಪೋರ್ಟ್ನಲ್ಲಿ ಭವ್ಯ ಸ್ವಾಗತ ಕೊರಲಾಗಿದೆ. ದೇವನಹಳ್ಳಿಯ ಕೆಂಪೇಗೌಡ ಇಂಟರ್ನ್ಯಾಷನಲ್ ಏರ್ಪೋರ್ಟ್ನಲ್ಲಿ ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ನಿಂದ ಮೈಸೂರು ಪೇಟ ತೊಡಿಸಿ, ಸಿಹಿ ನೀಡಿ ಸನ್ಮಾನ ಮಾಡಲಾಗಿದೆ.
ಸತತ 5 ವರ್ಷಗಳ ಪರಿಶ್ರಮದ ಫಲ ಭಾರತಕ್ಕೆ ಕಂಚಿನ ಪಧಕ ಲಭಿಸಿದೆ. ಮುಂದಿನ ಚಾಂಪಿಯನ್ ಶಿಪ್ ನಲ್ಲಿ ಬಂಗಾರದ ಪದಕ ಗೆಲ್ಲುವ ಗುರಿ ಹೊಂದಲಾಗಿದೆ. ಕರ್ನಾಟಕ ರೋಲರ್ ಸ್ಕೇಟಿಂಗ್ ಅಸೋಸಿಯೇಷನ್ ನ ಗಣ್ಯರು ಉಪಸ್ಥಿತಿ ಇದ್ದರು.
KRSA ಪ್ರಧಾನ ಕಾರ್ಯದರ್ಶಿ ಇಂದುದರ್,, ಹಾಕಿ ಕೋಚ್ ಅರ್ಜುನ್ ಭೂಪಾಲ್, ಸ್ಪೀಡ್ ಕೋಚ್ ರವೀಶ್ ರಾವ್ ರ ಉಪಸ್ಥಿತಿಯಲ್ಲಿ ಆಟಗಾರರು, ಪೋಷಕರಿಂದ ಗರ್ಲ್ಸ್ ಜ್ಯೂನಿಯರ್ಸ್ ತಂಡಕ್ಕೆ ಕೆಐಎನಲಿ ಭವ್ಯ ಸ್ವಾಗತ ಕೋರಿದೆ.