ಬೆಂಗಳೂರು: ಸರ್ಕಾರ ಇನ್ನೂ ಕಲೆಕ್ಷನ್ ನಿಲ್ಲಿಸಿಲ್ಲ. ವರ್ಗಾವಣೆ ದಂಧೆ ಕೂಡ ನಿಲ್ಲಿಸಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ MLC ರವಿಕುಮಾರ್ ಕಿಡಿಕಾರಿದ್ದಾರೆ
ನಗರದಲ್ಲಿ ಮಾತನಾಡಿದ ಅವರು, KEA ನಡೆಸುತ್ತಿರೋ FDA ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ. ಕೆಲವೆಡೆ ಒಂದು ಗಂಟೆ ಹೆಚ್ಚುವರಿ ಪರೀಕ್ಷೆಗೆ ಅವಕಾಶ ನೀಡಿದ್ದಾರೆ. 9 ಜನ ಬಂಧನ ಮಾಡಲಾಗಿದೆ. ಆರ್.ಡಿ ಪಾಟೀಲ್ ಅವರನ್ನು ಯಾಕೆ ಇನ್ನೂ ಬಂಧನ ಆಗಿಲ್ಲ ಎಂದು ಪ್ರಶ್ನೆ ಮಾಡಿದರು.
ಸರ್ಕಾರದ ಹಸ್ತಕ್ಷೇಪ ಇದರಲ್ಲಿ ಇದೆ. ಕೂಡಲೇ ಇದನ್ನ ತನಿಖೆ ನಡೆಸಬೇಕು. ಆರ್ ಡಿ ಪಾಟೀಲ್ ಬಂಧನ ಆಗಬೇಕು. ಹಾಗಾಗಿ ಯಾದಗಿರಿ, ಕಲ್ಬುರ್ಗಿಯಲ್ಲಿ ಹೋರಾಟ ಮಾಡಲಾಗುವುದು. ಬುಧವಾರ ಪ್ರತಿಭಟನೆ ನಡೆಯಲಿದೆ ಎಂದು ಹೇಳಿದರು.