ಬೆಂಗಳೂರು: ಬೆಳ್ಳಂಬೆಳಗ್ಗೆ ಇಲ್ಲಿನ ವಿವಿಧ ಆಭರಣ ಮಳಿಗೆಗಳ (ಜ್ಯುವೆಲರಿ ಶಾಪ್) (Jewellery Shop) ಮೇಲೆ ಐಟಿ ಅಧಿಕಾರಿಗಳು (IT Raid) ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.
ಮಂಗಳೂರಿನ (Mangaluru) ಕದ್ರಿ ಬಳಿಯ ಶಿವಭಾಗ್ನ ಆಭರಣ ಮಳಿಗೆ ಮೇಲೆ ದಾಳಿ ನಡೆಸಿರುವ IT ಅಧಿಕಾರಿಗಳು ತೀವ್ರ ಶೋಧ ನಡೆಸಿದ್ದಾರೆ. ಐದಾರು ಮಂದಿ ಅಧಿಕಾರಿಗಳು ಬಿಲ್ಲಿಂಗ್ ವಿವರ, ಚಿನ್ನದ ವ್ಯಾಪಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ
ಈ ಸಂದರ್ಭದಲ್ಲಿ ಸುಭಾಷ್ ಕಾಮತ್ ಹಾಗೂ ಮಹೇಶ್ ಕಾಮತ್ ಮಾಲೀಕತ್ವದಲ್ಲಿ ರಾಜ್ಯದಲ್ಲಿ 14 ಹಾಗೂ ಗೋವಾದಲ್ಲಿ ಒಂದು ಆಭರಣ ಜ್ಯುವೆಲ್ಲರಿ ಮಳಿಗೆಗಳಿರುವುದು ಕಂಡುಬಂದಿದೆ