ಶೇಂಗಾ ಬೀಜಗಳು ಅಥವಾ ಕಡಲೆ ಬೀಜಗಳು ಎಂದರೆ ಎಲ್ಲರಿಗೂ ಪ್ರಿಯ. ಬಡವರ ಬಾದಾಮಿ ಎಂದು ಕೂಡ ಇವುಗಳನ್ನು ಕರೆಯಲಾಗುತ್ತದೆ. ನಾವೆ ಲ್ಲರೂ ಇಷ್ಟಪಟ್ಟು ಕಡಲೆ ಬೀಜಗಳ ಉತ್ಪನ್ನಗಳನ್ನು ಸವಿಯುತ್ತೇವೆ. ಕಡಲೆಕಾಯಿ ಎಣ್ಣೆ ಕೂಡ ಲಿಸ್ಟ್ ನಲ್ಲಿ ಇರುತ್ತದೆ. ಹಾಗಾದ್ರೆ ನಾವೆಲ್ಲರೂ ಸುಮ್ಮನೆ ಕಡಲೆ ಬೀಜ ತಿನ್ನುತ್ತಿದ್ದಿವಾ ಎಂಬ ಪ್ರಶ್ನೆ ನಮ್ಮನ್ನು ಕಾಡುತ್ತದೆ. ಖಂಡಿತ ಇಲ್ಲ. ಅದರಿಂದ ಹಲವಾರು ಪ್ರಯೋಜನಗಳು ನಮಗೆ ಸಿಗುತ್ತವೆ.
ಕಡಲೆ ಬೀಜದಲ್ಲಿ ಸಿಗುವಂತಹ ಪೌಷ್ಠಿಕಾಂಶಗಳು
- ವಿಟಮಿನ್
ಬಿ1, ವಿಟಮಿನ್ ಬಿ2, ವಿಟಮಿನ್ ಬಿ6, ನಯಾಸಿನ್, ಫೋಲೆಟ್, ಪೊಟ್ಯಾಶಿಯಂ, ಸೋಡಿಯಂ, ಒಳ್ಳೆಯ ಕೊಲೆಸ್ಟ್ರಾಲ್, ಹೃದಯಕ್ಕೆ ಸಹಕಾರಿಯಾದ ಒಳ್ಳೆಯ ಕೊಬ್ಬಿನ ಅಂಶ, ಪ್ರೋಟೀನ್ ಅಂಶ, ನಾರಿನ ಅಂಶ,
- ಕಾರ್ಬೋಹೈಡ್ರೇಟ್ ಅಂಶ, ಕ್ಯಾಲೋರಿಗಳು, ಸಕ್ಕರೆ ಅಂಶ, ಕಬ್ಬಿಣ, ಮೆಗ್ನೀಷಿಯಂ, ಕ್ಯಾಲ್ಸಿಯಂ ಮತ್ತು ಫಾಸ್ಪರಸ್. ಕಡಲೆ ಬೀಜಗಳನ್ನು ನೆನೆಸಿ ಸೇವನೆ ಮಾಡುವುದರಿಂದ ಉಂಟಾಗುವ ಆರೋಗ್ಯದ ಲಾಭಗಳು
ದೇಹದಲ್ಲಿ ರಕ್ತ ಸಂಚಾರ ಹೆಚ್ಚಿಸುತ್ತದೆ
- ಕಡಲೆ ಬೀಜಗಳಲ್ಲಿ ಹೃದಯಕ್ಕೆ ಸಹಕಾರಿಯಾದ ಕೆಲವೊಂದು ಅಂಶಗಳು ಕಂಡು ಬರುತ್ತವೆ ಎಂಬುದು ತಿಳಿದಿದೆ. ಹೀಗಾಗಿ ಹೃದಯವನ್ನು ಮತ್ತು ಹೃದಯ ರಕ್ತನಾಳಗಳನ್ನು ಕಡಲೆ ಬೀಜಗಳು ಆರೋಗ್ಯಕರವಾಗಿ ಕಾಪಾಡುತ್ತವೆ.
- ಸಾಧಾರಣವಾಗಿ ಹಸಿ ಕಡಲೆ ಬೀಜ ಅಥವಾ ಹುರಿದು ತಿನ್ನುವುದಕ್ಕಿಂತ ಕಡಲೆ ಬೀಜಗಳನ್ನು ನೆನೆಸಿ ಆಗಾಗ ನಿಯಮಿತವಾಗಿ ಸೇವನೆ ಮಾಡುವುದರಿಂದ ಆರೋಗ್ಯದ ಲಾಭಗಳು ಜಾಸ್ತಿ.
- ಹೃದಯಕ್ಕೆ ಸಂಬಂಧಪಟ್ಟಂತೆ ನೋಡುವುದಾದರೆ ರಕ್ತನಾಳಗಳಲ್ಲಿ ರಕ್ತಸಂಚಾರವನ್ನು ಹೆಚ್ಚು ಮಾಡುವ ಗುಣ ಕಡಲೇ ಬೀಜಗಳಲ್ಲಿ ಕಂಡು ಬರುತ್ತದೆ. ಹೀಗಾಗಿ ಇಡೀ ದೇಹದ ತುಂಬಾ ಅತ್ಯುತ್ತಮ ಪ್ರಮಾಣದ ರಕ್ತ ಸಂಚಾರ ಉಂಟಾಗುವಂತೆ ಮಾಡುತ್ತದೆ.
ಸೊಂಟ ನೋವಿಗೆ ಒಳ್ಳೆಯ ಪರಿಹಾರ
- ಇತ್ತೀಚಿನ ಜೀವನ ಶೈಲಿಯಲ್ಲಿ ಆಗಾಗ ಸೊಂಟ ನೋವು ಬರುವುದು, ತಲೆ ನೋವು ಬರುವುದು ಸಾಮಾನ್ಯ. ಏಕೆಂದರೆ ನಮ್ಮ ಆರೋಗ್ಯ ಸ್ಥಿತಿ ಆ ರೀತಿಯಲ್ಲಿ ಬದಲಾಗಿಹೋಗಿದೆ.
- ಯಾವುದೇ ಆರೋಗ್ಯ ಸಮಸ್ಯೆ ಉಂಟಾದರೂ ಕೂಡಾ ನೇರವಾಗಿ ನಾವು ರಾಸಾಯನಿಕಯುಕ್ತ ಔಷಧಿಗಳನ್ನು ತೆಗೆದುಕೊಳ್ಳಲು ಮುಂದಾಗುತ್ತೇವೆ.
- ಆದರೆ ನಿಸರ್ಗದತ್ತವಾಗಿ ಬಂದಿರುವ ಆರೋಗ್ಯ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಬೇಕು ಎಂದು ಆಲೋಚಿಸಿ ನೋಡಿದರೆ ಮಾತ್ರೆ, ಔಷಧಿಗಳಿಗಿಂತ ಮನೆಮದ್ದುಗಳು ಹತ್ತುಪಟ್ಟು ವಾಸಿ ಎನಿಸುತ್ತದೆ.
- ನಮ್ಮ ಹಿರಿಯರು ಕೂಡ ಈ ಹಿಂದೆ ಸೊಂಟ ನೋವು ಬಂದಾಗ ಬೆಲ್ಲ ಮತ್ತು ನೆನೆಸಿದ ಕಡಲೆ ಬೀಜಗಳನ್ನು ಸ್ವಲ್ಪ ಪ್ರಮಾಣದಲ್ಲಿ ತಿಂದು ಪರಿಹಾರ ಮಾಡಿಕೊಳ್ಳುತ್ತಿದ್ದರು ಎಂಬುದು ತಿಳಿದು ಬಂದಿದೆ.
- ಆರೋಗ್ಯ ತಜ್ಞರು ಹೇಳುವ ಹಾಗೆ ಸೊಂಟ ನೋವಿನ ವಿಚಾರದಲ್ಲಿ ನೆನೆಸಿದ ಕಡಲೆ ಬೀಜಗಳ ಪಾತ್ರವನ್ನು ಎಂದಿಗೂ ಮರೆಯಲಾಗುವುದಿಲ್ಲ.
ಕ್ಯಾನ್ಸರ್ ಸಮಸ್ಯೆ ಅಭಿವೃದ್ಧಿಯಾಗುವ ಸಾಧ್ಯತೆ ಇರುವುದಿಲ್ಲ
- ದೇಹದಲ್ಲಿ ಆರೋಗ್ಯಕರ ಜೀವ ಕೋಶಗಳು ತಮ್ಮ ಕಾರ್ಯ ಚಟುವಟಿಕೆಯಲ್ಲಿ ಬದಲಾವಣೆ ಕಂಡಾಗ ಮಾರಕ ಕ್ಯಾನ್ಸರ್ ಜೀವ ಕೋಶಗಳ ರೀತಿಯಲ್ಲಿ ಬದಲಾಗುತ್ತದೆ.
- ದಿನ ಕಳೆದಂತೆ ಜೀವ ಕೋಶಗಳು ಗೆಡ್ಡೆಗಳ ರೂಪ ಪಡೆದುಕೊಳ್ಳುತ್ತದೆ. ಮಹಿಳೆಯರ ಸ್ತನ ಕ್ಯಾನ್ಸರ್ ಸಮಸ್ಯೆಗೆ ಕೂಡ ಹೆಚ್ಚು ಕಡಿಮೆ ಇದೇ ರೀತಿಯ ಪ್ರಕ್ರಿಯೆ ನಡೆಯುತ್ತದೆ.
- ಆದರೆ ಈ ಸಮಸ್ಯೆಗೆ ಉತ್ತಮ ಪರಿಹಾರ ನೆನೆಸಿದ ಕಡಲೆ ಬೀಜಗಳಲ್ಲಿ ಕಂಡುಬರುತ್ತದೆ. ಸಂಶೋಧಕರು ಹೇಳುವಂತೆ ವಾರದಲ್ಲಿ ಕನಿಷ್ಠ ಮೂರು ಬಾರಿ ನೆನೆಸಿದ ಕಡಲೆ ಬೀಜಗಳನ್ನು ಸೇವನೆ ಮಾಡುವುದರಿಂದ ಕ್ಯಾನ್ಸರ್ ಸಮಸ್ಯೆ ಶೇಕಡಾ 58% ಬಗೆಹರಿಯುತ್ತದೆ.
ದೇಹದ ತೂಕ ತಗ್ಗಿಸಿಕೊಳ್ಳಲು ಸಹಕಾರಿ
- ಮೊದಲೇ ಹೇಳಿದಂತೆ ಕಡಲೇ ಬೀಜಗಳಲ್ಲಿ ಅಚ್ಚುಕಟ್ಟಾದ ಪ್ರೊಟೀನ್ ಅಂಶ, ಕೊಬ್ಬಿನ ಅಂಶ ಮತ್ತು ನಾರಿನ ಅಂಶ ಸಿಗುತ್ತದೆ. ನಮ್ಮ ದೇಹದ ಆರೋಗ್ಯಕ್ಕೆ ಈ ಅಂಶಗಳು ತುಂಬಾ ಸಹಕಾರಿ.
- ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ವ್ಯಾಯಾಮದಲ್ಲಿ ನಿರತರಾಗಿರುವ ಜನರು ತಮ್ಮ ದೇಹದಲ್ಲಿ ಯಾವುದೇ ಶಕ್ತಿ ಹಾಗೂ ಚೈತನ್ಯವನ್ನು ಕಳೆದುಕೊಳ್ಳದಂತೆ ದೇಹದಲ್ಲಿನ ಕೊಬ್ಬಿನ ಅಂಶವನ್ನು ಕರಗಿಸಬೇಕು ಎಂದರೆ ವ್ಯಾಯಾಮದ ಮುಂಚೆ ನೆನೆಸಿದ ಕಡಲೆ ಬೀಜಗಳನ್ನು ಸೇವನೆ ಮಾಡುವ ಅಭ್ಯಾಸ ಇಟ್ಟುಕೊಳ್ಳಬೇಕು.
- ಇದು ತುಂಬಾ ಸಮಯದವರೆಗೆ ದೇಹದಲ್ಲಿನ ಮೆಟಬೋಲಿಸಂ ಪ್ರಕ್ರಿಯೆಯನ್ನು ಉತ್ತೇಜಿಸಿ ಹೊಟ್ಟೆ ಹಸಿವು ಉಂಟಾಗದಂತೆ ನೋಡಿಕೊಳ್ಳುತ್ತದೆ. ಇದರ ಜೊತೆಗೆ ಅಪಾರ ಪ್ರಮಾಣದಲ್ಲಿ ಅನಾರೋಗ್ಯಕರ ಆಹಾರ ಸೇವನೆ ಮಾಡಿ ಆರೋಗ್ಯವನ್ನು ಹಾಳು ಮಾಡಿಕೊಳ್ಳದಂತೆ ಕಾಪಾಡುತ್ತದೆ.
ನಿಮ್ಮ ಜೀರ್ಣ ಶಕ್ತಿ ಹೆಚ್ಚಾಗುತ್ತದೆ
- ಕರುಳಿನ ಭಾಗದ ಉತ್ತಮ ಚಲನೆಗೆ ಅನುಕೂಲವಾಗುವಂತೆ ನೆನೆಸಿದ ಕಡಲೆ ಬೀಜಗಳು ನಮ್ಮ ಆಹಾರ ಪದ್ಧತಿಯಲ್ಲಿ ಕೆಲಸ ಮಾಡುತ್ತವೆ.
- ಏಕೆಂದರೆ ಅವುಗಳಲ್ಲಿ ನಾರಿನ ಅಂಶದ ಪ್ರಮಾಣ ಹೆಚ್ಚಾಗಿರುವುದರಿಂದ ಇರಿಟೇಬಲ್ ಬೋವಲ್ ಸಿಂಡ್ರೋಮ್ ಮತ್ತು ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿರುವ ಪ್ರತಿಯೊಬ್ಬರಿಗೂ ಸುಲಭವಾದ ಪರಿಹಾರ ಇವುಗಳಿಂದ ಸಿಗುತ್ತದೆ ಎಂದು ಹೇಳಬಹುದು.
- ಸಾಧ್ಯವಾದರೆ ಪ್ರತಿ ದಿನ ಆರರಿಂದ ಏಳು ಕಡಲೆ ಬೀಜಗಳನ್ನು ನೀರಿನಲ್ಲಿ ನೆನೆಹಾಕಿ ರಾತ್ರಿ ಮಲಗುವ ಮುಂಚೆ ಸೇವನೆ ಮಾಡಿ ಮಲಗುವುದು ಒಳ್ಳೆಯದು.