ಬೆಂಗಳೂರು: ಅವರಿಬ್ಬರೂ ಕೂಡ ಪರಿಚಯಸ್ಥರೇ ಹಣದ ವಿಚಾರವಾಗಿ ನಡೆದ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿತು ಹಿರಿಯರ ಸಮ್ಮುಖದಲ್ಲಿ ಬಗೆ ಹರಿಸಿಕೊಳ್ಳೋಣ ಅಂತ ಮೀಟಿಂಗ್ ಮಾಡಿದ್ರು , ರಾಜಿ ಆಗೋಣ ಬಾ ಕರೆದು ಕೊಂದು ಆಕ್ಸಿಡೆಂಟ್ ಕಥೆ ಕಟಿದ್ರು ಮುಂದೆ ಏನಾಯ್ತು ನೋಡಿ. ಈ ಸೀನ್ ನೋಡಿದ್ರೆ ಯಾವೋದೋ ತೆಲು ಆಕ್ಷನ್ ಸಿನಿಮಾ ನೆನಪಾಗುತ್ತೆ. ಸ್ಕಾರ್ಪಿಯೋ ಕಾರ್ ನಲ್ಲಿ ವ್ಯಕ್ತಿಯನ್ನ ಅಟ್ಟಾಡಿಸಿ ಕಾರ್ ನಿಂದ ಗುದ್ದಿ ನಂತರ ಕಾರನ್ನ ಮೇಲೆ ಹತ್ತಿಸಿ ಕೊಲೆ ಮಾಡಿರೋ ಭೀಕ ದೃಶ್ಯ. ಕಳೆದ ತಿಂಗಳು ಪುಲಕೇಶಿನಗರ ಠಾಣೆಯಲ್ಲಿ ನಡೆದಿದ್ದ ಭೀಕರ ಕೊಲೆ ದೃಶ್ಯ ಇದು. ಹಳೇ ಕೇಸ್ ರಾಜೀಗೆ ಅಂತ ಕರೆಸಿದ್ರು. ರಾಜೀ ವೇಳೆ ಕೇಸ್ ವಾಪಸ್ ಗೆ ಒಪ್ಪಲಿಲ್ಲ ಅಂತ ಸಿಟ್ಟಿಗೆದ್ದು,ಸಿನಿಮೀಯ ಶೈಲಿಯಲ್ಲಿ ಕೊಲೆಮಾಡಿ ಆಕ್ಸಿಡೆಂಟ್ ಎಂದು ಬಿಂಬಿಸಿದ್ದ ಇಬ್ಬರು ಆರೋಪಿಗಳನ್ನ ಪುಲಕೇಶಿನಗರ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಎಸ್.ಕೆ.ಗಾರ್ಡನ್ ನಿವಾಸಿ ಸಯ್ಯದ್ ಆಸ್ಗರ್ ಕೊಲೆಯಾಗಿದ್ದು, ಘಟನೆಯಲ್ಲಿ ಆಸ್ಗರ್ ಸ್ನೇಹಿತ ಮುಜಾಯಿದ್ ಎಂಬುವರು ಹಲ್ಲೆಗೊಳಗಾಗಿದ್ದು ಈತ ನೀಡಿದ ದೂರಿನ ಮೇರೆಗೆ ನವಾಜ್ ಹಾಗೂ ಅಮಿನ್ ನ ಬಂಧಿಸಿದ್ದಾರೆ. ಸೆಕೆಂಡ್ ಹ್ಯಾಂಡ್ ಕಾರು ಮಾರಾಟ ಮಾಡುತ್ತಿದ್ದ ಆಸ್ಗರ್ ಬಳಿ ಕಳೆದ ಎಂಟು ತಿಂಗಳ ಹಿಂದೆ ಎರಡು ಕಾರುಗಳನ್ನ ಪರಿಚಯಸ್ಥರಾಗಿದ್ದ ಅಮಿನ್ ಗೆ 4 ಲಕ್ಷ ಮೌಲ್ಯದ ಕಾರು ಮಾರಾಟ ಮಾಡಿದ್ದ. ಆದರೆ ಹಣವನ್ನ ಅಮಿತ್ ನೀಡಿರಲಿಲ್ಲ. ಹಲವು ತಿಂಗಳಿಂದ ಸಬೂಬು ನೀಡುತ್ತಾ ಬಂದಿದ್ದ ಅಮಿತ್ ನನ್ನ 20 ದಿನಗಳ ಹಿಂದೆ ಹಿರಿಯರ ಸಮ್ಮುಖದಲ್ಲಿ ಆಸ್ಗರ್ ಹಣ ನೀಡವುದಾಗಿ ಅಮಿನ್ ಒಪ್ಪಿಕೊಂಡಿದ್ದ. ಇದಾದ ಕೆಲವೇ ದಿನಗಳ ಅಂತರದಲ್ಲೇ ಎಸ್.ಕೆ.ಗಾರ್ಡನ್ ಬಳಿ ಮುಜಾಯಿದ್ ನನ್ನ ಗುರಿಯಾಗಿಸಿ ಬಿಯರ್ ಬಾಟೆಲ್ ನಿಂದ ಹಲ್ಲೆ ಮಾಡಿದ್ದರು. ಈ ಸಂಬಂಧ ಜೆ.ಸಿ.ನಗರ ಪೊಲೀಸ್ ಠಾಣೆಯಲ್ಲಿ ತಮ್ಮ ಮೇಲೆ ಹಲ್ಲೆ ಮಾಡಿರುವುದಾಗಿ ಮುಜಾಯಿದ್ ದೂರು ನೀಡಿದ್ದ.
ಇನ್ನು ಪೊಲೀಸರು ಸಹ ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಈ ಮಧ್ಯೆ ಆಸ್ಗರ್ ಗೆ ಪ್ರಕರಣ ಹಿಂಪಡೆಯಲು ಒತ್ತಾಯಿಸಿದ್ದರು. ಮಾತುಕತೆಗಾಗಿ ಆಸ್ಗರ್ ಹಾಗೂ ಮಜಾಯಿದ್ ನನ್ನ ಕರೆಯಿಸಿಕೊಂಡಿದ್ದರು. ಶತಾಯಗತಾಯ ಕೇಸ್ ಹಿಂಪಡೆದುಕೊಳ್ಳುವುದಿಲ್ಲ ಆರೋಪಿಗಳಿಗೆ ಖಡಕ್ ತಿಳಿಸಿದ್ದರು. ಅಕ್ರೋಶಗೊಂಡ ಅಮಿನ್ ಸ್ಕಾರ್ಪಿಯೊ ಕಾರಿನಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಆಸ್ಗರ್ ಹಾಗೂ ಮುಜಾಯಿದ್ ಮೇಲೆ ಉದ್ದೇಶಪೂರ್ವಕವಾಗಿ ಕಾರು ಹತ್ತಿಸಿದ್ದ. ಘಟನೆಯಲ್ಲಿ ಮುಜಾಯಿದ್ ಹಾಗೂ ಆಸ್ಗರ್ ಗಾಯಗೊಂಡಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಆಸ್ಗರ್ ಮೃತಪಟ್ಟಿದ್ದಾರೆ. ಘಟನೆ ಕಾರಣರಾದ ಅಮಿತ್ , ಕೃತ್ಯವೆಸಗಲು ಸಹಕರಿಸಿದ್ದ ನವಾಜ್ ನನ್ನ ಪೊಲೀಸರು ಇಗಾಗ್ಲೆ ಬಂಧಿಸಿದ್ದಾರೆ. ಒಟ್ಟಿನಲ್ಲಿ ಕೊಲೆ ಮಾಡಿ ಆಕ್ಸಿಡೆಂಟ್ ಎಂದು ಬಿಂಬಿಸಲು ಹೊರಟ ಆರೋಪಿಗಳು ಈಗ ಜೈಲು ಪಾಲಾಗಿದ್ದಾರೆ. ಇತ್ತ ಮನೆ ಮಗನನ್ನು ಕಳೆದುಕೊಂಡ ಪೋಷಕರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ.