ಬೆಂಗಳೂರು : ವಾಣಿಜ್ಯ ಮಹಾವಿದ್ಯಾಲಯದಲ್ಲಿ 68ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಾಹಿತಿಗಳಾದ ಡಾ. ಆರ್ ಬಿ ಚಿಲುಮಿ ಹಾಗೂ ಕಲಾ,ವಿಜ್ಞಾನ, ಅಂಜುಮನ್ ಕನ್ನಡವನ್ನು ವಿಭಜಿಸುವುದಕ್ಕಿಂತ ಕೂಡಿಸುವ ಕೆಲಸ ತುರ್ತಾಗಿ ಆಗಬೇಕಿದೆ.
ಕನ್ನಡಕ್ಕೆ ಗೌರವ ಮತ್ತು ಗರ್ವ ಎರಡೂ ಸಿಕ್ಕಾಗ ಮಾತ್ರ ಕನ್ನಡದ ಬಗ್ಗೆ ಸಹಜವಾಗಿಯೇ ಆತ್ಮಾಭಿಮಾನ ಜಾಗೃತವಾಗುತ್ತದೆ. ರಾಜಕೀಯ ನಾಯಕರ ಬಾಯಿ ಮಾತಿನ ಆಶ್ವಾಸನೆ ಮತ್ತು ಭರವಸೆಗಳನ್ನು ಬದಿಗಿಟ್ಟು, ನಿಜವಾಗಿಯೂ ಆಂತರ್ಯದಲ್ಲಿ ಕನ್ನಡ ವ್ಯಕ್ತಿ ಮತ್ತು ವ್ಯಕ್ತಿತ್ವಗಳು ಕನ್ನಡದ ಕೈಂಕರ್ಯಕ್ಕೆ ಮುಂದಾಗಬೇಕು, ನೈಜ ಅಭಿಮಾನದ ಕನ್ನಡ ಕಾರ್ಯಕರ್ತರ ಪಡೆ ಸಿದ್ಧವಾಗಬೇಕು ಎಂದು ತಿಳಿಸಿಕೊಟ್ಟಿದ್ದಾರೆ.
ನಂತರ ವಿದ್ಯಾರ್ಥಿ ಜೀವನದಿಂದ ವೃತ್ತಿ ಜೀವನದ ಇಲ್ಲಿಯವರೆಗೂ ಕನ್ನಡವೇ ನನ್ನ ನಿತ್ಯದ ಉಸಿರು. ನನ್ನ ಜೀವನದಲ್ಲಿ ಮಾತುಕತೆ, ಕೃತಿ, ಕಾರ್ಯ ಎಲ್ಲವೂ ಕನ್ನಡದಲ್ಲೇ ನಡೆಯತ್ತಿರುವುದರಿಂದ, ಅದರ ಮೇಲೇ ನಿಂತಿರುವುದರಿಂದ ಕನ್ನಡವನ್ನಾಗಲಿ ಅಥವಾ ಕರ್ನಾಟಕವನ್ನಾಗಲಿ ನನ್ನ ಜೀವನದಿಂದ ಹೊರಗೆ ಕಲ್ಪಿಸಿಕೊಳ್ಳುವೂ ಕೂಡ ಅಸಾಧ್ಯ ಎಂದರು.
ನಂತರ ಮಾತನಾಡಿದ ಪ್ರಾಚಾರ್ಯರರಾದ ಡಾ.ಎನ್.ಎಮ್ಮ.ಮಕಾನದಾರ ಇಂದು ಕನ್ನಡ ಮತ್ತು ಕರ್ನಾಟಕದ ಅಸ್ವಿತ್ವಕ್ಕೆ ಅದರದ್ದೇ ಆದ ಸವಾಲುಗಳಿವೆ. ನಮ್ಮ ದೈನಂದಿನ ಬದುಕು ದಿನದಿಂದ ದಿನಕ್ಕೆ ಕಂಗ್ಲಿಷ್ ಮಯವಾಗುತ್ತಿದ್ದು, ಇದರಿಂದ ಮುಂದಿನ ಪೀಳಿಗೆಯನ್ನು ಹೇಗೆ ಪಾರು ಮಾಡಬೇಕು ಎಂಬುದೇ ನಮ್ಮ ಮುಂದಿರುವ ದೊಡ್ಡ ಪ್ರಶ್ನೆ ಎಂದರು.
ಈ ಇದೆ ವೇಳೆ ಕಾರ್ಯಕ್ರಮದಲ್ಲಿ ಆಯ್.ಕ್ಯೂ.ಎ.ಸಿ ಸಂಯೋಜಕರು ಡಾ. ಎನ್.ಬಿ.ನಲತವಾಡ ಜಮಖಾನ ಚೇರಮನ್ ಡಾ.ಎಸ್.ಬಳ್ಳಾರಿ ಡಾ. ಆಯ್.ಎ.ಮುಲ್ಲಾ ಹಾಗೂ ಕಾರ್ಯಕ್ರಮದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ಎಸ್.ಎಸ್.ಅದೋನಿ ಉಪಸ್ಥಿತರಿದ್ದರು.