ಬೆಂಗಳೂರು: ಕಳೆದ ತಿಂಗಳು ಏಳನೇ ತಾರೀಖು ಮಹಾರಾಣಿ ಕಾಲೇಜ್ ಕ್ಯಾಂಪಾಸ್ ನಲ್ಲಿ ಕಾರ್ ಅಪಘಾತಕ್ಕೀಡಾಗಿದ್ದ ವಿದ್ಯಾರ್ಥಿ ನಿ ಅಶ್ವಿನಿ ಚೇತರಿಸಿಕೊಳ್ಳುತ್ತಿದ್ದಾಳೆ. ಆದ್ರೆ ಆಕ್ಸಿಡೆಂಟ್ ಆಗಿದ್ದ ದಿನ ಟ್ರೀಟ್ಮೆಂಟ್ನ ಸಂಪೂರ್ಣ ಜವಾಬ್ದಾರಿ ನಮ್ಮದೆ ಎಂದಿದ್ದ ವಿಸಿ ಮೇಡಮ್ ಇವತ್ತು ಇನ್ಮುಂದೆ ಇಲ್ಲಿಗೆ ಬರಬೇಡಿ ಅಂತ್ತಿದ್ದಾರಂತೆ. ಏನ್ಮಾಡಬೇಕು ಅಂತ ತಲೆಯ ಮೇಲೆ ಕೈ ಹೊತ್ತು ಕುಳಿತ್ತಿದ್ದಾರೆ.
ಕಳೆದ ತಿಂಗಳು ಏಳನೆ ತಾರೀಖು ಮಹಾರಾಣಿ ಕಾಲೇಜು ಕ್ಯಾ.ಪಸ್ ನಲ್ಲಿ ಇಂಗ್ಲೀಷ್ ಪ್ರೊಫೆಸರ್ ನಾಗರಾಜ್ ವೇಗವಾಗಿ ಬಂದು ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ನಾಲ್ವರಿಗೆ ಆಕ್ಸಿಡೆಂಟ್ ಮಾಡಿದ್ದ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅಶ್ವಿನಿ ಗೆ ಸೆಂತ್ ಮಾರ್ಥಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಟ್ಟು ಹೆಚ್ಚಿನ ಚಿಕಿತ್ಸೆ ಗಾಗಿ ಜೈನ್ ಆಸ್ಪತ್ರೆಗೆ ಶಿಪ್ಟ್ ಮಾಡಲಾಗಿತ್ತು. ಟ್ರೀಟ್ಮೆಂಟೆ ಗೆ ಬೇಕಾದ ಸಂಪೂರ್ಣ ವೆಚ್ಚವನ್ನು ಕಾಲೇಜಿನ ಕಡೆಯಿಂದ ಭರಿಸುತ್ತೇಂದು ವಿಸಿ ಗೋಮತಿ ಭರವಸೆ ಕೊಟ್ಟಿದ್ದರು.
ಇಪ್ಪತು ದಿನಗಳಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆದು, ಅಪರೇಷನ್ ನಂತರ ಜನರಲ್ ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ ಇದುವರೆಗೆ ಹನ್ನೆರಡು ಲಕ್ಷಕ್ಕೂ ಅಧಿಕ ಹಣ ಖರ್ಚಾಗಿದ್ದು ಕೇವಲ ಏಳರಿಂದ ಎಂಟು ಲಕ್ಷ ಕೊಟ್ಟಿದ್ದಾರಂತೆ ಇನ್ನೂ ಟ್ರೀಟ್ ಮೆಂಟ್ ಅವಶ್ಯಕತೆ ಯಿದ್ದು ಅಶ್ವಿನಿ ಪೋಷಕರು ಕೇಳಲು ಹೋದ್ರೆ ಇನ್ಮುಂದೆ ಇಲ್ಲಿಗೆ ಬರಬೇಡಿ ಏನ್ ಬೇಕೋ ಮಾಡಿಕೊಳ್ಳಿ ಎಂದು ವಿಸಿ ಗೋಮತಿ ಯವರು ಆವಾಜ್ ಹಾಕಿದ್ದಾರಂತೆ ಇನ್ನೂ ಅಪಘಾತ ಮಾಡಿದ್ದ ಪ್ರೊಫೆಸರ್ ನಾಗರಾಜ್ ಕೂಡ ಕಾಲ್ ರಿಸಿವ್ ಮಾಡ್ತಿಲ್ಲವಂತೆ, ಇದರಿಂದ ಮುಂದೆ ಏನ್ಮಾಡಬೇಕೋ ದೋಚದೇ ಕುಳಿತ್ತಿದ್ದಾರೆ.
ಚಿಕಿತ್ಸೆ ಪಡೆದು ಮನೆಗೆ ಬಂದ್ರು ಕೂಡ ಮುಂದೆ ಜೀವನ ಮಾಡಲು ಕಷ್ಟವಾಗುತ್ತೆ.ಈಗಾಗಲೇ ಕಾಲುಗಳು ಕೂಡ ಸ್ವಾಧಿನ ಕಳೆದುಕೊಂಡಿವೆ. ಮುಂದಿನ ಭವಿಷ್ಯಕ್ಕಾಗಿ ಸರ್ಕಾರ ಏನಾದರೂ ಸಹಾಯ ಮಾಡಲಿ ನಮ್ಮದು ಬಡ ಕುಟುಂಬ ಅಂತ ಮನವಿ ಮಾಡಿಕೊಂಡಿದ್ದಾರೆ.ಇನ್ನಾದ್ರು ಈ ವಿದ್ಯಾರ್ಥಿ ನಿಯ ಕಡೆ ಗಮನ ಕೊಟ್ಟು ಟ್ರೀಟ್ ಮೆಂಟ್ ಗೆ , ಜೀವನಕ್ಕೆ ಸಹಾಯ ಮಾಡಲಿ ಅನ್ನೋದು ನಮ್ಮ ಒತ್ತಾಯ.