ಜೈಪುರ: ಇಸ್ರೇಲ್- ಹಮಾಸ್ ಯುದ್ಧ (Israel, Hamas War) ಹಾಗೂ ರಾಜಸ್ಥಾನದಲ್ಲಿ ನಡೆಯುತ್ತಿರುವ ಬಿಜೆಪಿ ಮತ್ತು ಕಾಂಗ್ರೆಸ್ (BJP- Congress) ನಡುವೆ ನಡೆಯುತ್ತಿರುವ ಫೈಟ್ ಕುರಿತು ಸಿಎಂ ಯೋಗಿ ಆದಿತ್ಯನಾಥ್ ಹೇಳಿಕೆಯೊಂದನ್ನು ನೀಡಿ ದ್ದಾರೆ. ರಾಜಸ್ಥಾನದ (Rajasthan) ಅಲ್ವಾರ್ ನಲ್ಲಿ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಗಾಜಾದಲ್ಲಿ ತಾಲಿಬಾನ್ (Taliban) ಮನಸ್ಥಿತಿಯನ್ನು ಹೇಗೆ ಹತ್ತಿಕ್ಕಲಾಗುತ್ತಿದೆ ಎಂಬುದನ್ನು ನೀವು ನೋಡುತ್ತಿದ್ದೀರಾ? ಗುರಿಯನ್ನು ಹೊಡೆದು ಅದನ್ನು ನಿಖರವಾಗಿ ಪುಡಿಮಾಡುತ್ತಿದ್ದಾರೆ ಎಂದು ಹೇಳಿದರು.
ಅಲ್ಲದೆ ಇದೇ ವೇಳೆ ತಾಲಿಬಾನಿಗಳಿಗೆ ಬಜರಂಗ ಬಲಿಯ ಗದೆಯೇ ಪರಿಹಾರ ಎಂದು ತಿಳಿಸಿದರು. ರಾಜಸ್ಥಾನ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿ, ಅರಾಜಕತೆ, ಗೂಂಡಾಗಿರಿ ಮತ್ತು ಭಯೋತ್ಪಾದನೆ ಸಮಾಜಕ್ಕೆ ಶಾಪವಾಗಿದೆ. ರಾಜಕೀಯವು ಅವರಲ್ಲಿ ಸಿಕ್ಕಿಹಾಕಿಕೊಂಡಾಗ ಅದು ಸುಸಂಸ್ಕೃತ ಸಮಾಜದ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಿದರು.