ಇರಾನ್: ಇಸ್ರೇಲ್ ದೇಶಕ್ಕೆ ತೈಲ, ಆಹಾರ ಸೇರಿದಂತೆ ಎಲ್ಲಾ ವಸ್ತುಗಳ ರಫ್ತು ನಿಲ್ಲಿಸಿ ಎಂದು ಮುಸ್ಲಿಂ ರಾಷ್ಟ್ರಗಳಿಗೆ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಆಗ್ರಹಿಸಿದ್ದಾರೆ. ಅಷ್ಟೇ ಅಲ್ಲ ಈ ಕೂಡಲೇ ಪ್ಯಾಲಿಸ್ತೀನ್ ದೇಶದ ಭಾಗವಾಗಿರುವ ಗಾಜಾ ಪಟ್ಟಿ ಮೇಲೆ ಇಸ್ರೇಲ್ ವಾಯು ಪಡೆ ನಡೆಸುತ್ತಿರುವ ಬಾಂಬ್ ದಾಳಿ ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇಸ್ರೇಲ್ ದೇಶವು ಗಾಜಾ ಮೇಲೆ ನಿರಂತರ ಬಾಂಬ್ ದಾಳಿ ನಡೆಸುತ್ತಿದೆ. ಇದು ಈ ಕೂಡಲೇ ನಿಲ್ಲಬೇಕು. ಯಹೂದಿ ರಾಷ್ಟ್ರಕ್ಕೆ ಮುಸ್ಲಿಂ ದೇಶಗಳಿಂದ ರಫ್ತಾಗುತ್ತಿರುವ ಪೆಟ್ರೋಲಿಯಂ ತೈಲ ಉತ್ಪನ್ನಗಳು ಹಾಗೂ ಆಹಾರ ಉತ್ಪನ್ನಗಳ ಸರಬರಾಜು ನಿಲ್ಲಬೇಕು ಎಂದು ಅಯತೊಲ್ಲಾ ಅಲಿ ಖಮೇನಿ ಆಗ್ರಹಿಸಿದ್ದಾರೆ. ಇರಾನ್ನ ಸರ್ಕಾರಿ ಮಾಧ್ಯಮದಲ್ಲಿ ಖಮೇನಿ ಭಾಷಣ ಪ್ರಸಾರವಾಗಿದೆ. ಈ ಭಾಷಣದಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ವಿಶ್ವದೆಲ್ಲೆಡೆಯ ಇಸ್ಲಾಂ ರಾಷ್ಟ್ರಗಳಿಗೆ ಕರೆ ನೀಡಿದ್ದಾರೆ.