ಇದೀಗ ಚಳಿಯ ವಾತಾವರಣ ಹೆಚ್ಚಿರುವ ಕಾಲವಾದ್ದರಿಂದ, ನೆಗಡಿ, ಗಂಟಲುನೋವು ಸಾಮಾನ್ಯವಾಗಿ ಕಂಡುಬರುತ್ತದೆ. ಈ ಸಂದರ್ಭ ನೀವು ಆರೋಗ್ಯ ಹಾಗೂ ದೇಹವನ್ನು ಸಮತೋಲನದಲ್ಲಿಟ್ಟುಕೊಳ್ಳಬೇಕೆಂದರೆ ಉತ್ತಮ ಆಹಾರಾಭ್ಯಸವನ್ನು ಮೈಗೂಡಿಸಿಕೊಳ್ಳುವುದೂ ಅಗತ್ಯ. ನಾವಿಂದು ಚಹಾ ಅಥವಾ ಕಾಫಿ ಬದಲಿಗೆ ಸವಿಯಬಹುದಾದ ಆರೋಗ್ಯಕರ ಕಷಾಯ ಮಾಡುವುದು ಹೇಗೆಂದು ಹೇಳಿಕೊಡುತ್ತೇವೆ. ನೆಗಡಿ ಮಾತ್ರವಲ್ಲದೇ ಜೀರ್ಣಕ್ರಿಯೆ ಒಳ್ಳೆಯ ಮದ್ದು! ಒಮ್ಮೆ ಟ್ರೈ ಮಾಡಿ!
ಬೇಕಾಗುವ ಪದಾರ್ಥಗಳು:
ಕಷಾಯ ಪುಡಿ ತಯಾರಿಸಲು:
ಕೊತ್ತಂಬರಿ ಬೀಜ – 1 ಕಪ್
ಜೀರಿಗೆ – ಅರ್ಧ ಕಪ್
ಸೋಂಪು – 3 ಟೀಸ್ಪೂನ್
ಮೆಂತ್ಯ – 2 ಟೀಸ್ಪೂನ್
ಕರಿ ಮೆಣಸು – 2 ಟೀಸ್ಪೂನ್
ಲವಂಗ – 10
ಏಲಕ್ಕಿ – 5
ಜಾಯಿಕಾಯಿ – 1
ಅರಿಶಿನ – 2 ಟೀಸ್ಪೂನ್
ಒಣ ಶುಂಠಿ ಪುಡಿ – 2 ಟೀಸ್ಪೂನ್
ಕಷಾಯ ಮಾಡಲು:
ನೀರು – 1 ಕಪ್
ಹಾಲು – 1 ಕಪ್
ಕಷಾಯ ಪುಡಿ – 1-2 ಟೀಸ್ಪೂನ್
ಬೆಲ್ಲ – ಸ್ವಾದಕ್ಕನುಸಾರ