ನವದೆಹಲಿ: ಹಲವು ಮುನ್ನೆಚ್ಚರಿಕೆ ಕ್ರಮಗಳ ನಡುವೆಯೂ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿದ್ದು, ಗಾಳಿಯ ಗುಣಮಟ್ಟದಲ್ಲಿ ಭಾರೀ ಕುಸಿತ ಕಂಡು ಬಂದಿದೆ. ಹವಾಮಾನ ಸಂಸ್ಥೆ aqicn.org ಪ್ರಕಾರ ದೆಹಲಿಯ ಆನಂದ್ ವಿಹಾರ್ನಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) 999 ರಷ್ಟಿದ್ದು, ಹಲವು ಪ್ರದೇಶಗಳಲ್ಲಿ 500 ಅನ್ನು ದಾಟಿದೆ.
ಕೃಷಿ ಬೆಂಕಿ ಮತ್ತು ಪ್ರತಿಕೂಲ ಹವಾಮಾನ, ಗಾಳಿಯ ವೇಗ ಕಡಿಮೆಯಾಗುವ ಹಿನ್ನೆಲೆ ದೆಹಲಿಯಲ್ಲಿ ಮುಂದಿನ 15-20 ದಿನಗಳ ಕಾಲ ತೀವ್ರ ಪ್ರಮಾಣದಲ್ಲಿ ವಾಯು ಮಾಲಿನ್ಯ ಕಂಡು ಬರಲಿದೆ ಎಂದು ಎಚ್ಚರಿಸಲಾಗಿತ್ತು. ವರದಿ ಬೆನ್ನಲ್ಲೇ ದೆಹಲಿಯಲ್ಲಿ ಕಲುಷಿತ ವಾತಾವರಣ ನಿರ್ಮಾಣವಾಗಿದ್ದು, ಜನರು ಉಸಿರಾಡಲು ಕಷ್ಟಪಡುತ್ತಿದ್ದಾರೆ.