ಬೆಂಗಳೂರು: ಸಚಿವ ಸತೀಶ್ ಜಾರಕಿಹೊಳಿ, ಡಿಸಿಎಂ ಡಿಕೆ ಶಿವಕುಮಾರ್ ನಡುವೆ ಬೆಳಗಾವಿ ರಾಜಕಾರಣದ ವಿಚಾರವಾಗಿ ಮುಸುಕಿನ ಗುದ್ದಾಟ ನಡೆಯುತ್ತಿರೋದು ಎಲ್ಲರಿಗೂ ಗೊತ್ತಿರೋ ವಿಚಾರವೇ. ಡಿಕೆಶಿ ವಿರುದ್ಧ ಜಾರಕಿಹೊಳಿ ಪ್ರತ್ಯೇಕವಾಗಿ ಶಾಸಕರ ಬಣವನ್ನ ಸೃಷ್ಟಿ ಮಾಡಿಕೊಳ್ತಾ ಮೈಸೂರು, ದುಬೈ ಟ್ರಿಫ್ ಅನ್ನೋ ದಾಳ ಉರುಳುಸ್ತಿದ್ರು. ಇಬ್ಬರ ಶೀಥಲ ಸಮರಕ್ಕೆ ಮುಲಾಮು ಹಚ್ಚೋ ಕೆಲಸವನ್ನ ಕೈ ಹೈಕಮಾಂಡ್ ಒಳಗೊಳಗೇ ಮಾಡ್ತಿತ್ತು ಈ ಮಧ್ಯೆ ದಿಢೀರ್ ಅಂತ ಡಿಕೆಶಿ ಜಾರಕಿಹೊಳಿ ಮನೆಗೆ ಭೇಟಿ ಕೊಟ್ಟು ರಾಜಕೀಯ ಊಹಾಪೋಹಗಳಿಗೆ ರೆಕ್ಕೆ ಪುಕ್ಕ ಕಟ್ಟಿದ್ದಾರೆ..
ಬೆಳಗಾವಿ ಜಿಲ್ಲೆ ರಾಜಕಾರಣ ಅಂದ್ರೆ ಜಾರಕಿಹೊಳಿ ಬ್ರದರ್ಸ್, ಜಾರಕಿಹೊಳಿ ಬ್ರದರ್ಸ್ ಅಂದ್ರೆ ಬೆಳಗಾವಿ ರಾಜಕಾರಣ ಅನ್ನೋ ಮಾತಿದೆ. ಹೀಗಿರುವಾಗ ಇವರ ನಡುವೆ ಡಿಸಿಎಂ ಡಿಕೆಶಿವಕುಮಾರ್ ಬೆಳಗಾವಿ ರಾಜಕಾರಣದಲ್ಲಿ ಕೈ ಹಾಕಿ ಜಾರಕಿಹೊಳಿ ಬ್ರದರ್ಸ್ ನಿದ್ದೆಗೆಡಿಸಿದ್ರು. ಇದೇ ಕಾರಣಕ್ಕೆ ಮುನಿಸಿಕೊಂಡು ಸಮ್ಮಿಶ್ರ ಸರ್ಕಾರವನ್ನ ಪಥನ ಗೊಳಿಸಿ ಬಿಜೆಪಿಏ ಸೇರ್ಪಡೆ ಆಗಿದ್ರು ರಮೇಶ್ ಜಾರಕಿ ಹೊಳಿ. ಇದೀಗ ಅದೇ ಸಂದರ್ಭ ಸತೀಶ್ ಜಾರಕಿಹೊಳಿಗೂ ಎದುರಾಗಿದ್ದು ಡಿಕೆಶಿ ವಿರುದ್ಧ ಸತೀಶ್ ಬಹಿರಂಗವಾಗೇ ಮಾತನಾಡಿದ್ರು. ಈ ಇಬ್ಬರು ಪ್ರಬಲ ನಾಯಕರ ವಾರ್ ನಿಂದ ಎಚ್ಚೆತ್ತ ಕಾಂಗ್ರೆಸ್ ಹೈಕಮಾಂಡ್ ಇವರಿಬ್ಬರ ಕೋಲ್ಡ್ ವಾರ್ ಗೆ ಬ್ರೇಕ್ ಹಾಕಲು ಮುಂದಾಗಿದೆ…
ಹೌದು ಸತೀಶ್ ಜಾರಕಿಹೊಳಿ ಇತ್ತೀಚಿಗೆ ಡಿಕೆ ಶಿವಕುಮಾರ್ ವಿರುದ್ಧ ಅಸಮಧಾನ ಹೊರ ಹಾಕ್ತಾ ಪ್ರತ್ಯೇಕ ಬಣ ಕಟ್ಟುತ್ತಿದ್ರು. ಡಿಕೆಶಿವಕುಮಾರ್ ಬೆಳಗಾವಿ ರಾಜಕಾರಣದಲ್ಲಿ ಭಾರಿ ಹಸ್ತಕ್ಷೇಪ ಮಾಡಿದ್ದಾರೆ ಎಂದು 4-5 ಭಾರೀ ಬಹಿರಂಗವಾಗಿಯೇ ಗುಡಿಗಿದ್ರು. ಈ ಹಿನ್ನಲೆ ಅವರದೇ ಒಂದು ಶಾಸಕರ ಬಣವನ್ನು ಕಟ್ಟಿಕೊಂಡು ವಿದೇಶ ಪ್ರವಾಸಕ್ಕೂ ತಯಾರಿ ನಡಿಸಿದ್ರು . ಈ ವಿಚಾರ ಕಾಂಗ್ರೆಸ್ ಹೈಕಮಾಂಡ್ ಗೆ ತಿಳಿಯುತ್ತಿದ್ದಂತೆ ವಿದೇಶ ಪ್ರವಾಸವನ್ನು ರದ್ದು ಪಡಿಸಿದ್ರು. ನಂತರ ಸತೀಶ್ ಜಾರಕಿ ಹೊಳಿ ಸಮಾಧಾನ ಪಡಿಸಲು ಸಿಎಂ ಡಿಸಿಎಂ ಗೆ ಸೂಚನೆ ಕೊಟ್ರು. ಈ ಹಿನ್ನೆಲೆಯಲ್ಲಿ ಉಭಯ ನಾಯಕರ ವಾರ್ ಗೆ ಬ್ರೇಕ್ ಹಾಕಲು ಸ್ವತಃ ಡಿಸಿಎಂ ಡಿಕೆಶಿಯೇ ಮುಂದಾಗಿರುವಂತೆ ಕಾಣ್ತಿದೆ. ಇದಕ್ಕೆ ಪುಷ್ಟಿ ಎಂಬಂದೆ ಇಂದು ಹೈಕಮಾಂಡ್ ಭೇಟಿಗೆ ದೆಹಲಿಗೆ ತೆರಳುವ ಮುನ್ನ ಡಿಕೆಶಿ ಬೆಳ್ಳಂಬೆಳಿಗ್ಗೆ ಸಚಿವ ಜಾರಕಿಹೊಳಿ ಮನೆಗೆ ಭೇಟಿ ಕೊಟ್ಟಿದ್ದು….
ಬೆಳಂಬೆಳಿಗ್ಗೆ ಸತೀಶ್ ಜಾರಕಿಹೊಳಿ ಅವರ ರೇಸ್ ಕೋರ್ಸ್ ನ ಸರ್ಕಾರಿ ನಿವಾಸಕ್ಕೆ ಬಂದ ಡಿಸಿಎಂ ಡಿಕೆ ಶಿವಕುಮಾರ್ ಸತೀಶ್ ಜೊತೆ ಪ್ರತ್ಯೇಕವಾಗಿ ಸುಮಾರು 15 ನಿಮಿಷಗಳ ಕಾಲ ಚರ್ಚೆ ಮಾಡಿದ್ದಾರೆ.. ಹೈಕಮಾಂಡ್ ನಾಯಕರು ಹೇಳಿರುವಂತ ಕೆಲವು ವಿಚಾರಗಳನ್ನ ಜಾರಕಿ ಹೊಳಿ ಮುಂದೆ ಡಿಕೆಶಿ ಇಟ್ಟಿದ್ದಾರೆಂದು ತಿಳಿದು ಬಂದಿದೆ. ಭೇಟಿ ಕುರಿತು ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ ರಾಜಕಾರಣದ ಕೇಲವು ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಜಿಲ್ಲಾಧ್ಯಕ್ಷರು, ಕಾರ್ಯಾಧ್ಯಕ್ಷರ ಬದಲಾವಣೆ ಕುರಿತು ಚರ್ಚಿಸಿದ್ದಾರೆ ಎಂದ್ರು….
ಒಟ್ನಲ್ಲಿ ಇಂದು ಡಿಸಿಎಂ ಡಿಕೆ ಶಿವಕುಮಾರ್ ಸತೀಶ್ ಜಾರಕಿ ಹೊಳಿ ಭೇಟಿ ಮಾಡಿದ್ದು ರಾಜಕೀಯವಾಗಿ ಸಾಕಷ್ಟು ಪ್ರಶ್ನೇಗಳು, ಊಹಾಪೋಹಗಳಿಗೆ ಎಡೆಮಾಡಿಕೊಟ್ಟಿದೆ. ಜೊತೆಗೆ ಸಿಎಂ ಆಕಾಂಕ್ಷೀ ಆಗಿರುವ ಡಿಕೆಶಿವಕುಮಾರ್ ಗೆ ಸತೀಶ್ ಜಾರಕಿ ಹೊಳಿ ಅಡ್ಡಗಾವಲು ಆಗ್ತಾಯಿದ್ರು ಎಂಬುದು ಡಿಕೆಶಿ ಲೆಕ್ಕಾಚಾರ ಆಗಿದೆ. ಅದರಲ್ಲೂ ಹೈಕಮಾಂಡ್ ಯಾವುದೇ ಬಣ ಬಡಿದಾಟ ಉದ್ಭವಿಸಬಾರದು ಮುಂದೆ ಲೋಕಸಭೆ ಚುನಾವಣೆಯಿದೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿ ಹೋಗಿ ಎಂದು ಸೂಚನೆ ನೀಡಿರೋದ್ರಿಂದ. ಸದ್ಯ ಪರಿಸ್ಥಿತಿಯನ್ನು ತಣ್ಣಗಾಗಿಸುವ ಕೆಲಸ ಮಾಡಿದ್ದಾರೆ ಕೆಪಿಸಿಸಿ ಅಧ್ಯಕ್ಷರು, ಮುಂದೆ ಬೆಳಗಾವಿ ಪಾಲಿಟಿಕ್ಸ್ ಯಾವ ಸ್ವರೂಪ ಪಡೆಯುತ್ತೆ ಅನ್ನೋದೇ ಎಲ್ಲರ ಕುತೂಹಲವಾಗಿದೆ..