ದೃಷ್ಟಿ ಸುಧಾರಣೆಗಾಗಿ ವ್ಯಾಪಕ ಪೋಷಕಾಂಶ-ಭರಿತ ಆಹಾರಗಳನ್ನು ತಿನ್ನುವುದು ಅತ್ಯುತ್ತಮ. ಉತ್ತಮ ಆಹಾರ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ವಿಟಮಿನ್ ಎ, ಸಿ, ಮತ್ತು ಇ, ಸತು ಮತ್ತು ಸೆಲೆನಿಯಮ್ನಂತಹ ಅಗತ್ಯ ಪೋಷಕಾಂಶಗಳು, ಕ್ಯಾರೊಟಿನಾಯ್ಡ್ಗಳಾದ ಲುಟೀನ್ ಮತ್ತು ಜಿಯಾಕ್ಸಾಂಥಿನ್ ಜೊತೆಗೆ ವಯಸ್ಸಿಗೆ ಸಂಬಂಧಿಸಿದ ಕಣ್ಣಿನ ಅಸ್ವಸ್ಥತೆಗಳಿಂದ ರಕ್ಷಿಸುತ್ತದೆ. ಮುಖ್ಯವಾಗಿ ಸೊಪ್ಪು, ಬೀಜಗಳು, ಸಮುದ್ರಾಹಾರ ಅಂದರೆ ಮೀನು, ಏಡಿ ಮತ್ತು ಹಣ್ಣು ಮತ್ತು ತರಕಾರಿಗಳನ್ನು ತಿನ್ನುವ ಮೂಲಕ ನೀವು ಮೇಲೆ ತಿಳಿಸಿದ ಎಲ್ಲಾ ಪೋಷಕಾಂಶಗಳನ್ನು ಪಡೆಯಬಹುದು.
ನಿರ್ಜಲೀಕರಣವು ಒಣ ಕಣ್ಣುಗಳು, ಕಿರಿಕಿರಿ ಮತ್ತು ದೇಹದಲ್ಲಿ ಬಳಲಿಕೆಗೆ ಕಾರಣವಾಗಬಹುದು. ಕಣ್ಣುಗಳನ್ನು ನಿರ್ಜಲೀಕರಣದಿಂದ ತಪ್ಪಿಸಲು ದಿನವಿಡೀ ಸಾಕಷ್ಟು ನೀರು ಮತ್ತು ಇತರ ದ್ರವಾಹಾರಗಳನ್ನು ಸೇವಿಸಬೇಕು. ಕುಡಿಯುವ ನೀರಿನ ಜೊತೆಗೆ, ಸೌತೆಕಾಯಿ, ಕಲ್ಲಂಗಡಿಗಳಂತಹ ಆಹಾರ ಪದಾರ್ಥಗಳು ನಿಮ್ಮ ಕಣ್ಣುಗಳನ್ನು ನಿರ್ಜಲೀಕರಣ ಸಮಸ್ಯೆಯನ್ನು ದೂರ ಮಾಡುತ್ತವೆ.
ನಿಮ್ಮ ಕಣ್ಣುಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಕಣ್ಣಿನ ಸೋಂಕನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಕಣ್ಣಿನ ಸಂಬಂಧಿತ ಸಮಸ್ಯೆಗಳನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಕಡಿಮೆ ಮಾಡುತ್ತದೆ. ನಿಮ್ಮ ಕೈಗಳನ್ನು ಆಗಾಗ್ಗೆ ತೊಳೆಯುವ ಮೂಲಕ ಮತ್ತು ಕಣ್ಣುಗಳನ್ನು ಸ್ಪರ್ಶಿಸುವುದನ್ನು ತಪ್ಪಿಸುವ ಮೂಲಕ ಅಪಾಯಕಾರಿ ಬ್ಯಾಕ್ಟೀರಿಯಾದ ಹರಡುವಿಕೆಯನ್ನು ನೀವು ನಿಲ್ಲಿಸಬಹುದು. ಅಲ್ಲದೆ, ಕಾಂಟ್ಯಾಕ್ಟ್ ಲೆನ್ಸ್ಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮತ್ತು ಅವುಗಳನ್ನು ಕ್ಲೀನ್ ಕೇಸ್ನಲ್ಲಿ ಸಂಗ್ರಹಿಸುವುದು ಕಿರಿಕಿರಿ ಮತ್ತು ಸೋಂಕುಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ.
ಸಾಕಷ್ಟು ನಿದ್ರೆ ಮಾಡಿ
ಕಣ್ಣಿನ ಆರೋಗ್ಯಕ್ಕೆ ಸಾಕಷ್ಟು ನಿದ್ರೆ ಮುಖ್ಯವಾಗಿದೆ. ಏಕೆಂದರೆ ಇದು ಕಣ್ಣುಗಳಿಗೆ ವಿಶ್ರಾಂತಿ ಮತ್ತು ದೇಹದ ಪುನರ್ಯೌವನಗೊಳಿಸುವಿಕೆಗೆ ಇದು ಅನುವು ಮಾಡಿಕೊಡುತ್ತದೆ. ನಿದ್ರಾಹೀನತೆಯು ಕಣ್ಣಿನ ಆಯಾಸ, ದಣಿವು ಮತ್ತು ಒಣ ಕಣ್ಣುಗಳಿಗೆ ಕಾರಣವಾಗಬಹುದು. ಅತ್ಯುತ್ತಮ ಕಣ್ಣಿನ ಆರೋಗ್ಯಕ್ಕಾಗಿ ನೀವು ಪ್ರತಿ ರಾತ್ರಿ 7-8 ಗಂಟೆಗಳ ನಿದ್ದೆ ಮಾಡಬೇಕಾಗುತ್ತದೆ.
ಕಣ್ಣುಗಳ ವ್ಯಾಯಾಮ
ಕಣ್ಣಿನ ವ್ಯಾಯಾಮಗಳು ಕಣ್ಣಿನ ಸ್ನಾಯುಗಳನ್ನು ಬಲಪಡಿಸುತ್ತದೆ. ಕಣ್ಣಿನ ಆಯಾಸವನ್ನು ನಿರ್ಬಂದಿಸಿ ಕಣ್ಣಿಗೆ ರಕ್ತ ಸಂಚಾರ ಸರಾಗಗೊಳಿಸುತ್ತದೆ. ದೀರ್ಘಾವಧಿಯಲ್ಲಿ ದೃಷ್ಟಿ ಸುಧಾರಿಸುತ್ತದೆ. ದೂರದ ವಸ್ತುಗಳ ಮೇಲೆ ಕೇಂದ್ರೀಕರಿಸುವುದು ಅಥವಾ ಕಣ್ಣಿನ ಯೋಗ ಮಾಡುವುದು ಕಣ್ಣಿನ ವ್ಯಾಯಾಮಗಳ ಉದಾಹರಣೆಗಳಾಗಿವೆ, ಅದು ಕಣ್ಣಿನ ಸಮನ್ವಯವನ್ನು ಸುಧಾರಿಸಲು, ಆಯಾಸವನ್ನು ಕಡಿಮೆ ಮಾಡಲು ಮತ್ತು ವಿಶ್ರಾಂತಿಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.