ಕಲಬುರಗಿ:- ಇಲ್ಲಿ ನಡೆದ KEA ಪರೀಕ್ಷೆ ಅಕ್ರಮ ಪ್ರಕರಣದ ಮತ್ತಷ್ಟು ಆರೋಪಿಗಳನ್ನ ಪತ್ತೆ ಮಾಡಲು ನಾಲ್ಕು ವಿಶೇಷ ತನಿಖಾ ತಂಡಗಳನ್ನ ರಚಿಸಲಾಗಿದೆ.
ಖುದ್ದು ಪೋಲೀಸ್ ಕಮೀಷನರ್ ಆರ್ ಚೇತನ್ ಆದೇಶ ಹೊರಡಿಸಿದ್ದು ಎಸಿಪಿ ಹಾಗು ಪೋಲೀಸ್ ಇನ್ಸಪೆಕ್ಟರ್ ನೇತ್ರತ್ವದ ತಂಡಕ್ಕೆ ಆರೋಪಿಗಳ ಬಂಧನ ಮಾಡುವ ಕುರಿತಂತೆ ಜವಾಬ್ದಾರಿ ನೀಡಲಾಗಿದೆ. ಪ್ರಕರಣದಲ್ಲಿ ಕಿಂಗ್ ಪಿನ್ RD ಪಾಟೀಲ್ ಸೇರಿದಂತೆ ಇನ್ನೂ ಹಲವರು ಕೈಗೆ ಸಿಗದೇ ನಾಪತ್ತೆಯಾಗಿದ್ದಾರೆ.
ಹೀಗಾಗಿ ಸರ್ಕಾರಕ್ಕೆ ಮುಜುಗರ ಉಂಟು ಮಾಡಿರುವ ಪರೀಕ್ಷಾ ಅಕ್ರಮ ಪ್ರಕರಣ ತನಿಖಾ ತಂಡಕ್ಕೆ ಇದೀಗ ಮತ್ತಷ್ಟು ಚಾಲೆಂಜ್ ಆದಂತಿದೆ..