ಲಕ್ನೋ: ಉತ್ತರ ಪ್ರದೇಶದ ಅಲಿಗಢ (Aligarh) ನಗರದ ಹೆಸರು ಹರಿಗಢ(Harigarh) ಎಂದು ಬದಲಾಗುತ್ತಾ ಹೀಗೊಂದು ಪ್ರಶ್ನೆ ಈಗ ಎದ್ದಿದೆ. ಅಲಿಗಢ ಮಹಾನಗರ ಪಾಲಿಕೆ (Aligarh Municipal Corporation) ಕೈಗೊಂಡ ನಿರ್ಧಾರದಿಂದ ಈ ಪ್ರಶ್ನೆ ಈಗ ಎದ್ದಿದೆ. ಅಲಿಗಢ ಹೆಸರಿನ ಬದಲು ಹರಿಗಢ ಹೆಸರನ್ನು ನಾಮಕರಣ ಮಾಡಲು ಪಾಲಿಕೆ ನಿರ್ಣಯವನ್ನು ಪಾಸ್ ಮಾಡಿದೆ.
ಬಿಜೆಪಿಯ (BJP) ಪಾಲಿಕೆ ಸದಸ್ಯ ಸಂಜಯ್ ಪಂಡಿತ್ ಮಂಡಿಸಿದ ಪ್ರಸ್ತಾಪವನ್ನು ಪಾಲಿಕೆ ಒಪ್ಪಿಗೆ ಸೂಚಿಸಿದೆ. ಪಾಲಿಕೆಯಲ್ಲಿ ನಿರ್ಧಾರ ಕೈಗೊಂಡ ಮಾತ್ರಕ್ಕೆ ಹೆಸರು ಬದಲಾಗುವುದಿಲ್ಲ. ಇದು ಮೊದಲ ಹೆಜ್ಜೆಯಾಗಿದ್ದು ರಾಜ್ಯ ಸರ್ಕಾರ ಹೆಸರು ಬದಲಾವಣೆಗೆ ಒಪ್ಪಿಗೆ ನೀಡಿದ ಬಳಿಕವಷ್ಟೇ ಹೆಸರು ಅಧಿಕೃತವಾಗಿ ಬದಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಮೇಯರ್ ಪ್ರಶಾಂತ್ ಸಿಂಘಾಲ್, ಸಂಜಯ್ ಪಂಡಿತ್ ಮಂಡಿಸಿದ ಪ್ರಸ್ತಾಪದ ಬಗ್ಗೆ ಸಭೆ ನಡೆಯಿತು. ಈ ಪ್ರಸ್ತಾಪಕ್ಕೆ ಎಲ್ಲಾ ಸದಸ್ಯರು ಬೆಂಬಲ ವ್ಯಕ್ತಪಡಿಸಿದರು. ಈ ನಿರ್ಣಯವನ್ನು ನಾವು ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಡುತ್ತೇವೆ. ಸರ್ಕಾರ ನಮ್ಮ ಮನವಿಯನ್ನು ಪುರಸ್ಕರಿಸಿ ಹರಿಗಢ ಹೆಸರನ್ನು ಇಡಲು ಒಪ್ಪಿಗೆ ಸೂಚಿಸಬಹುದು ಎಂಬ ನಂಬಿಕೆಯಿದೆ ಎಂದು ತಿಳಿಸಿದರು.