ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಯಾವುದೇ ಭಯ ಭೀತಿ ಇಲ್ಲದೆ ನಡುಬೀದಿಯಲ್ಲಿ ಅಟ್ಟಾಡಿಸಿ ಕೊಚ್ಚಿ ಕೊಲೆ ಮಾಡೋದು ಕಾಮನ್ ಆಗ್ತಿದೆ.. ಸಣ್ಣ ಪುಟ್ಟ ಕಾರಣಕ್ಕೂ ಜೀವ ತೆಗೆಯುವಂತಹ ಕೃತ್ಯಗಳು ನಡೆಯುತ್ತಿದೆ. ಇಂಥದ್ದೇ ಕಾರಣಕ್ಕೆ ನಡೆದ ಎರಡು ಭೀಕರ ಹತ್ಯೆ ಕುರಿತ ಡಿಟೇಲ್ಸ್ ಇಲ್ಲಿದೆ..
ಹೆಲ್ಮೆಟ್ ಜೀವರಕ್ಷಕ.. ಅದೇ ಹೆಲ್ಮೇಟ್ ನಿಂದಲೇ ಜೀವವನ್ನು ತೆಗೆಯಬಹುದು.. ಈ ದೃಶ್ಯ ನೀವು ನೋಡಿದ್ರೆ ಖಂಡಿತಾ ನಡುಕವನ್ನ ಹುಟ್ಟಿಸುತ್ತೆ..
ಅಂದಹಾಗೆ ಈ ಘಟನೆ ನಡೆದಿರೋದು ಲಿಂಗರಾಜಪುರದಲ್ಲಿ. ಏರಿಯಾದಲ್ಲಿ ಡಿಜೆ ಸಾಂಗ್ ವಿಚಾರದಲ್ಲಿ ಪ್ರವೀಣ್ ಎಂಬಾತನನ್ನು ಹೆಲ್ಮೆಟ್ ನಿಂದ ಹೊಡೆದು ಹೊಡೆದು ಕೊಲ್ಲಲಾಗಿದೆ.. ಪ್ರವೀಣ್ ಸ್ನೇಹಿತನೇ ಅಗಿದ್ದ ಸುಂದರ್ ಎಂಬಾತನ ಗ್ಯಾಂಗ್ ಈ ಕೃತ್ಯ ಎಸಗಿದೆ. ಹೆಲ್ಮೇಟ್ ನಿಂದ ಹಲ್ಲೆ ನಡೆಸಿ ಕೊಲ್ಲುವ ದೃಶ್ಯವನ್ನು ಸ್ಥಳಿಯರು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ್ದಾರೆ.. ಈ ವೇಳೆ ಎಷ್ಟೇ ಚೀರಿದ್ರು ಆರೋಪಿಗಳು ಕೊಂದೇ ಎಸ್ಕೇಪ್ ಆಗಿದ್ದಾರೆ. ಸದ್ಯ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೋಣನಕುಂಟೆ ರೌಡಿಶೀಟರ್ ಆಗಿರುವ ಸಹಾದೇವ ಮೇಲೆ ಕೊಲೆ , ಕೊಲೆ ಯತ್ನ ಸುಲಿಗೆ ,ಬೆದರಿಕೆಯಂತಹ ಹಲವು ಪ್ರಲರಣಗಳಿವೆ . ಹಲವು ಗ್ಯಾಂಗ್ ಗಳ ಜೊತೆ ಗುರುತಿಸಿಕೊಂಡಿದ್ದ. ಬಡ್ಡಿಂಗ್ ರೌಡಿಗಳು ಸೇರಿ ಹಲವು ಗ್ಯಾಂಗ್ ಗಳ ಜೊತೆ ದ್ವೇಷ ಕಟ್ಟಿಕೊಂಡಿದ್ದ . ನೆನ್ನೆ ರಾತ್ರಿ ವೇಳೆ ತನ್ನ ಪತ್ನಿ ಸೌಮ್ಯಳಿಗೆ ಸಿಗರೇಟ್ ತರಲು ಹೋಗ್ತಿನಿ ಎಂದು ಮನೆಯಿಂದ ಹೊರಹೋಗಿದ್ದ. ಚುಂಚಘಟ್ಟ ಮುಖ್ಯ ರಸ್ತೆಯ ಬಳಿ ಇರುವ ಸಿಗರೇಟ್ ಅಂಗಡಿಯಲ್ಲಿ ಸಿಗರೇಟ್ ತೆಗೆದುಕೊಂಡು ಸೇದುತ್ತಿದ್ದವನ ಬಳಿ ಬೈಕ್ ನಲ್ಲಿ ನಾಲ್ಕೈದು ಜನ ಬಂದಿದ್ರು. ಸಹಾದೇವ ಬಳಿ ರೌಡಿಶೀಟರ್ ಕುಳ್ಳ ಹರೀಶ ಎಂಬಾತನ ಬಗ್ಗೆ ಕೇಳಿದ್ದಾರೆ.
ಈ ವೇಳೆ ಸಹಾದೇವ ಹಾಗು ಆ ಗ್ಯಾಂಗ್ ನಡುವೆ ಕಿರಿಕ್ ನಡೆದಿದೆ. ಈ ವೇಳೆ ಸಿಟ್ಟಿಗೆದ್ದ ಸಹಾದೇವ ಅಲ್ಲೇ ಇದ್ದ ಎಗ್ ರೈಸ್ ಮಾಡುವ ದೊಡ್ಡ ಸೌಟಿನಿಂದ ಹಲ್ಲೆ ನಡೆಸಿದ್ದ. ಇದರಿಂದ ಕೋಪಗೊಂಡ ಐದೂ ಜನರು ಪೂರ್ವ ನಿಯೋಜಿತ ಎಂಬಂತೆ ತಾವು ತಂದಿದ್ದ ಬಡಿಗೆಗಳಿಂದ ತಲೆಗೆ ನೇರವಾಗಿ ಟಾರ್ಗೆ್ಟ್ ಮಾಡಿ ಕೊಂದು ಹಾಕಿದ್ದರು. ದುರಂತ ಅಂದ್ರೆ ನೆನ್ನೆ ಬೆಳಗ್ಗೆಯಷ್ಟೆ ಸಿಸಿಬಿ ಪೊಲೀಸರು ಪ್ರತಿಯೊಬ್ಬ ರೌಡಿ ಹಾಗು ಅಪರಾಧ ಹಿನ್ನಲೆಯುಳ್ಳವರ ಮನೆಗೆ ತೆರಳಿ ವಾರ್ನಿಂಗ್ ನೀಡಿದ್ರು. ಆದೆಲ್ಲಾದಕ್ಕೂ ಕ್ಯಾರೇ ಎನ್ನದ ರೌಡಿಗಳು ನಡು ರಸ್ತೆಯಲ್ಲಿ ಕೃತ್ಯಗಳನ್ನ ಮುಂದುವರೆಸಿದ್ದಾರೆ.
ಸದ್ಯ ಬಾಣಸವಾಡಿ ಮತ್ತು ಪುಟ್ಟೇನಹಳ್ಳಿ ಪೊಲೀಸರಿಗೆ ಹಂತಕರು ಯಾರು ಎಂಬುದ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿದ್ದು ಈಗಾಗಲೆ ವಿಶೇಷ ತಂಡವನ್ನ ರಚನೆ ಮಾಡಲಾಗಿದೆ . ಅದೇನಾದ್ರು ನಡುರಸ್ತೆ ನಿರ್ಭೀತಿಯಿಂದ ಹತ್ಯೆ ಮಾಡೋ ಹಂತಕರಿಗೆ ನಡುಕ ಹುಟ್ಟಿಸೋ ಕೆಲಸ ಪೊಲೀಸರು ಮಾಡಬೇಕಿದೆ.