ಬೆಂಗಳೂರು: ಅವರದ್ದು ಬಡತನದಲ್ಲೂ ಸುಂದರ ಸಂಸಾರ ಸಾಗಿಸಿತ್ತಿದ್ದ ಕುಟುಂಬ.. ಬಾಳ ಬಂಡಿ ಸಾಗಿಸಲು ಪತ್ನಿಯ ಕೆಲಸಕ್ಕೆ ಸೇರಿ ದುಡಿಯುತ್ತಿದ್ದಳು. ಆದರೆ ಆಕೆ ಜೀವಕ್ಕೆ ತನ್ನ ಸುಂದರ ಕೇಶರಾಶಿಯೇ ಕುತ್ತು ತಂದಿದೆ.. ಅರೇ ಕೇಶರಾಶಿಯ ಪ್ರಾಣ ಕಂಟಕವಾಗಿದ್ದೇಗೆ ಅನ್ನೋದನ್ನ ಹೇಳ್ತೀವಿ ಈ ಸ್ಟೋರಿ ನೋಡಿ.
ಹೆಣ್ಣಿನ ಸೌಂದರ್ಯಕ್ಕೆ ಕೇಶ ಮೆರುಗನ್ನು ನೀಡುತ್ತೆ.. ಆದರೆ ಇಲ್ಲೊಬ್ಬಳ ಬಾಳಿಗೆ ಕೇಶವೆ ಸಾವು ತಂದಿದೆ.. ಅಂದಹಾಗೆ ಈಕೆ ಹೆಸರು ಶ್ವೇತಾ.. ವಯಸ್ಸು 33 ವರ್ಷ.. ಮೂಲತಃ ಕನಕಪುರದ ಕೆಂಗುಂಟೆಯವಳು. ಮದುವೆಯಾದ ಬಳಿಕ ಸಿಲಿಕಾನ್ ಸಿಟಿಯ ಮಲ್ಲತ್ತಹಳ್ಳಿಗೆ ಬಂದು ನೆಲೆಸಿದ್ದಳು.. ಬಾಳ ಬಂಡಿ ಸಾಗಿಸಲು ನೆಲಗದರನಹಳ್ಳಿಯ ಶ್ರೀ ಪೇಂಟ್ಸ್ ಅಂಡ್ ಕೆಮಿಕಲ್ಸ್ ಕಂಪನಿಗೆ ಸೇರಿದ್ದಳು. ಈಕೆ ಎಂದಿನಂತೆ ಕೆಲಸ ನಿರ್ವಹಿಸುತ್ತಿದ್ದಳು.. ಪೆಯಿಂಟ್ ಮಿಕ್ಸ್ ಮಾಡುವ ಯಂತ್ರ ಬಳಸಿ ಕೆಲಸ ಮಾಡುತ್ತಿದ್ದಳು ಅಷ್ಟೇ ತನ್ನ ಕೂದಲನ್ನು ಮೇಲತ್ತಿ ಕಟ್ಟದೇ ಪೇಯಿಂಟ್ ಮಿಕ್ಸ್ ಪರಿಶೀಲಿಸಲು ಮುಂದೆ ಬಗ್ಗಿದ್ದಾಳೆ ಆಕೆಯ ಕೂದಲನ್ನು ಯಂತ್ರ ಸೆಳೆದುಕೊಂಡು ಕುತ್ತಿಗೆಯನ್ನೇ ತಿರುಗಿಸಿದೆ.. ಇದ್ರಿಂದ ತೀವ್ರ ಸ್ವರೂಪದ ಗಾಯಗೊಂಡ ಶ್ವೇತ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.
ಇನ್ನು ಶ್ರೀ ಪೇಂಟ್ಸ್ ಅಂಡ್ ಕೆಮಿಕಲ್ ಕಾರ್ಖಾನೆಯಲ್ಲಿ ಸೂಕ್ತ ಸುರಕ್ಷತ ಕ್ರಮ , ತಲೆಯ ಕವಚ ಸೇರಿದಂತೆ ಯಾವುದೇ ಸೇಫ್ಟಿ ಉಪಕರಣ ನೀಡಿರಲಿಲ್ಲ ಎಂದು ತಿಳಿದು ಬಂದಿದೆ. ಶ್ವೇತಾ ಸಾವಿಗೆ ಮಾಲೀಕರ ನಿರ್ಲಕ್ಷ್ಯ ಕಾರಣ ಎನ್ನಲಾಗಿದ್ದು ಶ್ವೇತಾರ ಪತಿ ಪೀಣ್ಯ ಪೊಲೀಸರಿಗೆ ಶ್ರೀ ಪೇಂಟ್ಸ್ ಮತ್ತು ಕೆಮಿಕಲ್ಸ್ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ..
ಸದ್ಯ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮಾಲೀಕನಿಗಾಗಿ ಹುಡುಕಾಟ ನಡೆಸಿದ್ದಾರೆ. ಅದೇನಾದ್ರು ಕೆಲಸ ಮಾಡುವ ಸ್ಥಳದಲ್ಲಿ ಸೂಕ್ತ ಸುರಕ್ಷತಾ ಕ್ರಮವಿಲ್ಲದಿದ್ದರೂ ತಾನೇ ಸ್ವಲ್ವ ಎಚ್ಚರವಹಿಸಿ ಕೇಶವನ್ನು ಕಟ್ಟಿದ್ದರೆ ಶ್ವೇತಾ ಪ್ರಾಣ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ.