ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಧಾರಕಾರ ಮಳೆ ಹಳ್ಳದಂತದ ರಸ್ತೆಗಳು ಮಹಾನಗರ ಪಾಲಿಕೆ ವಿರುದ್ದ ಜನರ ಆಕ್ರೋಶ…
ಸಿಲಿಕಾನ್ ಸಿಟಿ ಬೆಂಗಳೂರಿನ ಸಹಕಾರ ನಗರ ಯಲಹಂಕ ಕೋಗಿಲು ಕ್ರಾಸ್ ಬಳಿ ಧಾರಕಾರ ಮಳೆ ಸುರಿದಿದ್ದು ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಸಾಕಷ್ಟು ಆವಾಂತರ ಸೃಷ್ಟಿಸಿದೆ. ಇಲ್ಲಿನ ಪ್ರಮುಖ ರಸ್ತೆಗಳೆಲ್ಲವು ಹಳ್ಳಗಳಂತಗಿದ್ದು ಜನರು ರಸ್ತೆಯಲ್ಲಿ ಓಡಾಡಲು ಪರದಾಡುವ ಪರಿಸ್ಥಿತಿ ಉಂಟಾಗಿತ್ತು,..
ಇನ್ನೂ ಸರಿಯಾದ ಸಮಯದಲ್ಲಿ ಬಿಬಿಎಂಪಿ ಆಧಿಕಾರಿಗಳು ಬಂದು ಕಾರ್ಯನಿರ್ವಯಿಸದಿದ್ದರಿಂದ ಜನರು ನಡುರಸ್ತೆಯಲ್ಲಿ ಸಿಲುಕಿಕೊಂಢು ಪರದಾಡುವ ಪರಿಸ್ಥಿತಿ ಉಂಟಾಯಿತು ರಸ್ತೆ ಕಾಣದೆ ಕಪೌಂಡ್ ಜಿಗಿದು ರಸ್ತೆ ದಾಟುವ ಪರಿಸ್ಥಿತಿ ಉಂಟಾಗಿತ್ತು ಅಂತ ಪಾಲಿಕೆ ಆಧಿಕಾರಿಗಳ ವಿರುದ್ದು ಜನರು ಆಕ್ರೋಶ ವ್ಯಕ್ತಪಡಿಸಿದರು.
ಇನ್ನೂ ರಾಜಕಾಲುವೆ ಒತ್ತುವರಿ ತೆರವು ಮಾಡಿದ್ದಾರೆ ಈ ಪರಿಸ್ಥಿತಿ ನಮಗೆ ಬರುತ್ತಿರಲಿಲ್ಲ, ಪ್ರತಿ ಭಾರಿ ಚುನಾವಣೆ ಸಂದರ್ಭದಲ್ಲಿ ಇಲ್ಲಿನ ಸ್ಥಳಿಯ ಶಾಸಕರು ಸಮಸ್ಯೆ ಬಗೆಹರಿಸುವುದಾಗಿ ಆಶ್ವಾಸನೆ ನೀಡುತ್ತಾರೆ ಅದರೆ ಚುನಾವಣೆ ಮುಗಿದ ಮೇಲೆ ಈ ಕಡೆ ತಲೆನೂ ಹಾಕುವುದಿಲ್ಲ ಈ ಕೊಡುಲೇ ಶಾಸಕರು ಸ್ಥಳಕ್ಕೆ ಬರಬೇಕು ಸಮಸ್ಯೆಯನ್ನು ಬಗೆಹರಿಸಬೇಕು ಪ್ರತಿಬಾರಿಯು ಮಳೆ ಬಂದಾಗಲು ನಾವು ಇದೇ ತೊಂದರೆಯನ್ನು ಅನುಭವಿಸಬೇಕು ಅಂತ ಸ್ಥಳೀಯ ಶಾಸಕರ ವಿರುದ್ದು ಜನರು ಆಕ್ರೋಶ ವ್ಯಕ್ತಪಡಿಸಿದರು
ಒಟ್ಟಿನಲ್ಲಿ ಮಹಾನಗರ ಪಾಲಿಕೆಯ ಆಧಿಕಾರಿಗಳ ನಿರ್ಲಕ್ಷದಿಂದಾಗಿ ಪ್ರತಿಭಾರಿಯು ಮಳೆಬಂದಾಗ ಜನರು ಪರದಾಡುವ ಪರಿಸ್ಥಿತಿ ಉಂಟಾಗಿದೆ..