ವಾಷಿಂಗ್ಟನ್: ಅಮೆರಿಕದ (America) ಯುದ್ಧ ವಿಮಾನಗಳು ನಡೆಸಿದ ದಾಳಿಯಿಂದಾಗಿ ಸಿರಿಯಾದಲ್ಲಿ (Syria) ಇರಾನ್ (Iran) ಬೆಂಬಲಿತ ಗುಂಪುಗಳೊಂದಿಗೆ ಸಂಬಂಧ ಹೊಂದಿದ್ದ 9 ಮಂದಿ ಹತ್ಯೆಯಾಗಿದ್ದಾರೆ. ಅಮೆರಿಕ ಸಿಬ್ಬಂದಿ ಮೇಲಿನ ದಾಳಿಗೆ ಕೌಂಟರ್ ಆಗಿ ಅಮೆರಿಕ ಯುದ್ಧ ವಿಮಾನಗಳು (US Airstrick) ಪೂರ್ವ ಸಿರಿಯಾದಲ್ಲಿ ಇರಾನ್ಗೆ ಸಂಬಂಧಿಸಿದ ಶಸ್ತ್ರಾಸ್ತ್ರ ಸಂಗ್ರಹಣಾ ಘಟಕದ ಮೇಲೆ ದಾಳಿ ನಡೆಸಿದೆ.
ದಾಳಿಯಲ್ಲಿ 9 ಮಂದಿ ಹತ್ಯೆಯಾಗಿದ್ದಾರೆ ಎಂದು ಯುಎಸ್ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಹೇಳಿದ್ದಾರೆ. ಸಿರಿಯಾದಲ್ಲಿ ಒಂದು ಸ್ಥಳವನ್ನು ಅಮೆರಿಕ ಗುರಿಯಾಗಿಸಿಕೊಂಡಿದೆ. ಇಸ್ರೇಲ್-ಹಮಾಸ್ ಹೋರಾಟವನ್ನು ಪ್ರಾದೇಶಿಕ ಯುದ್ಧವಾಗಿ ಪರಿವರ್ತಿಸುವುದರಿಂದ ಇರಾನ್ ಮತ್ತು ಅದರ ಪ್ರಾಕ್ಸಿಗಳನ್ನು ತಡೆಯಲು ಯುನೈಟೆಡ್ ಸ್ಟೇಟ್ಸ್ ಪ್ರಯತ್ನಿಸುತ್ತಿದೆ.
ಆದರೆ ಪುನರಾವರ್ತಿತ ದಾಳಿಗಳು ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವಿನ ಸಂಘರ್ಷಕ್ಕೆ ಅಪಾಯವನ್ನುಂಟು ಮಾಡುತ್ತವೆ. ಯುಎಸ್ ಮಿಲಿಟರಿ ಪಡೆಗಳು ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್ಜಿಸಿ) ಮತ್ತು ಅಂಗಸಂಸ್ಥೆ ಗುಂಪುಗಳು ಬಳಸುತ್ತಿದ್ದ ಪೂರ್ವ ಸಿರಿಯಾದ ಸೌಲಭ್ಯದ ಮೇಲೆ ಸ್ವಯಂ-ರಕ್ಷಣಾ ದಾಳಿಯನ್ನು ನಡೆಸಿತು. ಈ ದಾಳಿಯನ್ನು ಎರಡು ಯುಎಸ್ ಎಫ್ -15 ಗಳು ಶಸ್ತ್ರಾಸ್ತ್ರ ಸಂಗ್ರಹಣಾ ಸೌಲಭ್ಯದ ವಿರುದ್ಧ ನಡೆಸಿತು” ಎಂದು ಆಸ್ಟಿನ್ ತಿಳಿಸಿದ್ದಾರೆ.