ಇದೇ ಮೊದಲ ಬಾರಿಗೆ ‘ಬಿಗ್ ಬಾಸ್ ಕನ್ನಡ’ ಇತಿಹಾಸದಲ್ಲಿ ಏಕಕಾಲಕ್ಕೆ ಇಬ್ಬರು ಕಳಪೆ ಪಟ್ಟ ಪಡೆದು ಜೈಲಿಗೆ ತೆರಳಿರುವ ಘಟನೆ ದೋಡ್ಮನೆಯಲ್ಲಿ ನಡೆದಿದೆ.
ಬಿಗ್ ಬಾಸ್ ಕನ್ನಡ ಸೀಸನ್ 10ರ ಐದನೇ ವಾರದ ಬೆಸ್ಟ್ ಪರ್ಫಾಮರ್ ಆಗಿ ಡ್ರೋನ್ ಪ್ರತಾಪ್ ಆಯ್ಕೆಯಾಗಿದ್ದಾರೆ. ಇನ್ನೂ ಕಳಪೆ ಪಟ್ಟ ಇಶಾನಿ ಮತ್ತು ನೀತು ಪಾಲಾಗಿದ್ದು,ಇಬ್ಬರೂ ಜೈಲಿಗೆ ಒಟ್ಟಿಗೆ ತೆರಳಿದ್ದಾರೆ.
ಗಂಧದ ಗುಡಿ ತಂಡದ ಕ್ಯಾಪ್ಟನ್ ಆಗಿದ ಡ್ರೋನ್ ಪ್ರತಾಪ್ ತಂಡವನ್ನ ಒಗ್ಗೂಡಿಸಿದ ರೀತಿ, ನಾಮಿನೇಷನ್ ಅಸ್ತ್ರವನ್ನ ಬಳಸಿದ ರೀತಿ, ಉಸ್ತುವಾರಿ ವೇಳೆ ಡ್ರೋನ್ ಪ್ರತಾಪ್ ಫೇರ್ ಆಗಿ ಆಟವಾಡಿದ ರೀತಿ ಇತರೆ ಸ್ಪರ್ಧಿಗಳಿಗೆ ಇಷ್ಟವಾಗಿದೆ. ಹೀಗಾಗಿ ಡ್ರೋನ್ ಪ್ರತಾಪ್ ಅವರಿಗೆ ‘ಬೆಸ್ಟ್ ಪರ್ಫಾಮೆನ್ಸ್’ ಮೆಡಲ್ ಲಭಿಸಿದೆ.
ಡ್ರೋನ್ ಪ್ರತಾಪ್ಗೆ ಸ್ನೇಹಿತ್, ಕಾರ್ತಿಕ್, ವರ್ತೂರು ಸಂತೋಷ್, ನೀತು, ಮೈಕಲ್ ವೋಟ್ ಹಾಕಿದರು. ಅತಿ ಹೆಚ್ಚು ಮತಗಳನ್ನ ಪಡೆದ ಡ್ರೋನ್ ಪ್ರತಾಪ್ ‘ಉತ್ತಮ’ ಪಟ್ಟ ಪಡೆದರು.