ದಾವಣಗೆರೆ: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಬಿವೈ ವಿಜಯೇಂದ್ರ ಆಯ್ಕೆ ಹಿನ್ನಲೆ ಬಿಜೆಪಿಯಲ್ಲಿ ಕರೆಂಟ್ ಪಾಸ್ ಆಗಿದ್ದು, ಹೊಸ ಹುಮ್ಮಸ್ಸು, ಸಂಚಲನ ಮೂಡಿದೆ ಎಂದು ದಾವಣಗೆರೆಯಲ್ಲಿ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2016ರಲ್ಲಿ ಯುಗಾದಿಗೆ ರಾಜ್ಯಾಧ್ಯಕ್ಷರಾಗಿ ಬಿಎಸ್ ವೈಗೆ ಬಂಪರ್ ಕೊಡುಗೆ ಸಿಕ್ಕಿತ್ತು. ದೀಪಾವಳಿಗೆ ಬಿವೈ ವಿಜಯೇಂದ್ರಗೆ ಬಂಪರ್ ಸಿಕ್ಕಿದೆ.. ವಿಜಯೇಂದ್ರ ಸಂಘಟನಾ ಚತುರ ಆದ್ದರಿಂದ ಎಲ್ಲರು ವಿಜಯೇಂದ್ರ ಒಳ್ಳೆಯ ಆಯ್ಕೆಯಾಗಿದೆ ಎಂದಿದ್ದಾರೆ.. ಚಿಕ್ಕ ವಯಸ್ಸಿನಲ್ಲಿ ಮಹತ್ತರ ಜವಾಬ್ದಾರಿ ಸಿಕ್ಕಿದೆ ಎಂದರು.
ಕುಟುಂಬ ರಾಜಕಾರಣ ಎಂದು ಕಾಂಗ್ರೆಸ್ನ ಸಚಿವ ಪ್ರಿಯಾಂಕ್ ಖರ್ಗೆ ಟೀಕೆ ಮಾಡ್ತಾರೆ. ಅವರಿಗೆ ಟೀಕೆ ಮಾಡುವ ನೈತಿಕ ಹಕ್ಕು ಇಲ್ಲ.ನೆಹರೂರವರಿಂದ ಹಿಡಿದು ರಾಹುಲ್ ಗಾಂಧಿವರೆಗೂ ಕುಟುಂಬ ರಾಜಕಾರಣ ಮಾಡುತ್ತಿದ್ದಾರೆ. ವಿಜಯೇಂದ್ರ ಪಕ್ಷದಲ್ಲಿ ಹಲವು ಜವಾಬ್ದಾರಿ ವಹಿಸಿಕೊಂಡು ಬಂದಿದ್ದಾರೆ. ಬಿಜೆಪಿ ಗೆಲ್ಲಲು ಸಾಧ್ಯವಾಗದ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸಿಕೊಂಡು ಬಂದವರು. ಯಡಿಯೂರಪ್ಪ ಪುತ್ರ ಎಂದು ಅವರಿಗೆ ಕೊಟ್ಟಿಲ್ಲ, ಅವರ ಸಾಮರ್ಥ್ಯ ನೋಡಿ ಕೊಟ್ಟಿದ್ದಾರೆ. ಮಲ್ಲಿಕಾರ್ಜುನ್ ಖರ್ಗೆ ಎಂದು ನಿಮಗೆ ಸಚಿವ ಸ್ಥಾನ ನೀಡಿದ್ದಾರೆ ಅಷ್ಟೇ ಎಂದರು.