ಟೆಲ್ಅವಿವ್: ಗಾಜಾ ಆಸ್ಪತ್ರೆಯಲ್ಲಿ (Gaza Hospital) ಸರಿಸುಮಾರು 1,000 ಜನರನ್ನು ಮತ್ತು ರೋಗಿಗಳನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡ ಹಮಾಸ್ ನ ಹಿರಿಯ ಕಮಾಂಡರ್ನನ್ನು ವೈಮಾನಿಕ ದಾಳಿಯಲ್ಲಿ ಹತ್ಯೆ ಮಾಡಿರುವುದಾಗಿ ಇಸ್ರೇಲ್ ಮಿಲಿಟರಿ (Israel Military) ಹೇಳಿದೆ.
ಈ ಸಂಬಂಧ ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಎನ್ನ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿದೆ. ಅಹ್ಮದ್ ಸಿಯಾಮ್ ( Ahmed Siam) ಎಂಬಾತ ಹಮಾಸ್ ನ ನಾಸೆರ್ ರಾಡ್ವಾನ್ ಕಂಪನಿಯಲ್ಲಿ ಕಮಾಂಡರ್ ಆಗಿದ್ದ. ಈತ ದಾಳಿಗಳಲ್ಲಿ ನಾಗರಿಕರನ್ನು ಮಾನವ ಗುರಾಣಿಗಳಾಗಿ ಬಳಸಿಕೊಂಡಿದ್ದಾನೆ ಎಂದು ಪೋಸ್ಟ್ ಮಾಡಿದೆ.
ಕಳೆದ ತಿಂಗಳು ಗಾಜಾದಲ್ಲಿನ ಹಮಾಸ್ ವಿರುದ್ಧ ತನ್ನ ನೆಲದ ಕಾರ್ಯಾಚರಣೆಯನ್ನು ವಿಸ್ತರಿಸಿದ ನಂತರ, ಪ್ಯಾಲಿಸ್ತೀನಿ ಗುಂಪು ಯಹೂದಿ ರಾಷ್ಟ್ರದ ಮೇಲೆ ದೊಡ್ಡ ದಾಳಿಯನ್ನು ಪ್ರಾರಂಭಿಸಿದಾಗ ಅಕ್ಟೋಬರ್ 7 ರ ದಾಳಿಯಲ್ಲಿ ಭಾಗಿಯಾಗಿದ್ದ ಹಲವಾರು ಹಮಾಸ್ ಕಾರ್ಯಕರ್ತರನ್ನು ಇಸ್ರೇಲ್ ಪಡೆಗಳು ಕೊಂದಿವೆ. ಈ ಯುದ್ಧದಲ್ಲಿ ಇಸ್ರೇಲ್ನಲ್ಲಿ ಸುಮಾರು 1,200 ಜನರನ್ನು ಕೊಂದರೆ, ಗಾಜಾದಲ್ಲಿ 10,000 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ.