ಮುಂಜಾನೆ ಅಥವಾ ಸಂಜೆ ಟೀ ಬ್ರೇಕ್ನಲ್ಲಿ ಸವಿಯಲು ಕುರುಕಲು ತಿಂಡಿ ಇಲ್ಲವೆಂದರೆ ಏನೋ ಮಿಸ್ ಆದಂತೆ ಎನಿಸುತ್ತದೆ. ಪ್ರತಿ ಬಾರಿ ಅಂಗಡಿಗಳಿಂದ ಬಿಸ್ಕತ್ತು ಅಥವಾ ತಿಂಡಿಗಳನ್ನು ತರೋದಕ್ಕಿಂತ ನೀವೇ ನಿಮ್ಮ ಕೈಯಾರೆ ಮಾಡಿ ಚಹಾ ಜೊತೆ ಸವಿದರೆ ಅದರ ಅನುಭವ ವಿಭಿನ್ನ ಎನಿಸುತ್ತದೆ. ನೀವು ಕೂಡಾ ಗೋಡಂಬಿ ಬಟರ್ ಕುಕೀಸ್ ನಿಮ್ಮ ಕೈಯಾರೆ ಮಾಡಿ ಟೀ ಬ್ರೇಕ್ನಲ್ಲಿ ಆನಂದಿಸಿ.
ಬೇಕಾಗುವ ಪದಾರ್ಥಗಳು:
ಹುರಿದ ಗೋಡಂಬಿ – 2 ಕಪ್
ಬೆಚ್ಚಗಿನ ನೀರು – 2 ಕಪ್
ನೀರು – ಕಾಲು ಕಪ್
ತೆಂಗಿನ ಎಣ್ಣೆ – ಕಾಲು ಕಪ್
ಸಕ್ಕರೆ – ಅರ್ಧ ಕಪ್
ಮೊಟ್ಟೆ – 2
ಬೇಕಿಂಗ್ ಪೌಡರ್ – 1 ಟೀಸ್ಪೂನ್
ಚಾಕೋಚಿಪ್ಸ್ – 1 ಕಪ್
ಮಾಡುವ ವಿಧಾನ:
* ಮೊದಲಿಗೆ ಹುರಿದ ಗೋಡಂಬಿಯನ್ನು ಬೆಚ್ಚಗಿನ ನೀರಿನಲ್ಲಿ 15 ನಿಮಿಷಗಳ ಕಾಲ ನೆನೆಸಿ ಇಡಿ.
* ಓವನ್ ಅನ್ನು ಪೂರ್ವಭಾವಿಯಾಗಿ ಕಾಯಿಸಿ ಬೇಕಿಂಗ್ ಶೀಟ್ಗೆ ಬಟರ್ ಪೇಪರ್ ಅನ್ನು ಜೋಡಿಸಿ ಇಟ್ಟಿರಿ.
* ಈಗ ನೆನೆಸಿದ ಗೋಡಂಬಿಯನ್ನು ಎಲೆಕ್ಟ್ರಿಕ್ ಬ್ಲೆಂಡರ್ನಲ್ಲಿ ಹಾಕಿ ನೀರು ಹಾಗೂ ತೆಂಗಿನ ಎಣ್ಣೆಯನ್ನು ಸೇರಿಸಿ ಪುಡಿ ಮಾಡಿಕೊಳ್ಳಿ.
* ಈಗ ದೊಡ್ಡ ಬಟ್ಟಲಿನಲ್ಲಿ ಗೋಡಂಬಿ ಮಿಶ್ರಣ, ಸಕ್ಕರೆ, ಮೊಟ್ಟೆ, ಬೇಕಿಂಗ್ ಪೌಡರ್ ಮತ್ತು ಉಪ್ಪನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
* ಈಗ ಬೇಕಿಂಗ್ ಶೀಟ್ನಲ್ಲಿ ಒಂದೊಂದೇ ಟೀಸ್ಪೂನ್ ಮಿಶ್ರಣವನ್ನು ದೂರ ದೂರದಲ್ಲಿ ಬಿಡಿ. ಸ್ವಲ್ಪ ಚಪ್ಪಟೆಯಾಗಲು ಅದರ ಮೇಲೆ ಮೆತ್ತಗೆ ಒತ್ತಿಕೊಳ್ಳಿ.
* ಅವುಗಳ ಮೇಲೆ ಚಾಕ್ಲೇಟ್ ಚಿಪ್ ಅನ್ನು ಹರಡಿ.
* ಈಗ ಬೇಕಿಂಗ್ ಶೀಟ್ ಅನ್ನು ಓವನ್ ಅಲ್ಲಿ ಇಟ್ಟು 25-30 ನಿಮಿಷಗಳ ವರೆಗೆ ಬೇಯಿಸಿಕೊಳ್ಳಿ.
* ನಂತರ ಅದನ್ನು ಓವನ್ನಿಂದ ತೆಗೆದು ಸಂಪೂರ್ಣ ತಣ್ಣಗಾಗಲು ಬಿಡಿ.
* ಇದೀಗ ಗೋಡಂಬಿ ಬಟರ್ ಕುಕೀಸ್ ತಯಾರಾಗಿದ್ದು, ಸವಿಯಲು ಸಿದ್ಧವಾಗಿದೆ.