ಇಂಗ್ಲೆಂಡ್: ಫಿಟ್ನೆಸ್ ಉತ್ಸಾಹಿಯಾಗಿದ್ದ ಇಂಗ್ಲೆಂಡ್ ಮೂಲದ ಮುಖ್ಯ ವ್ಯವಸ್ಥಾಪಕ ಅಧಿಕಾರಿ 42 ವರ್ಷದ ಪಾಲ್ ವಾಫಮ್ ಇತ್ತೀಚೆಗೆ ತಮ್ಮ ಬೆಳಗಿನ ವಾಕಿಂಗ್ ವೇಳೆ ಹೃದಯಾಘಾತಕ್ಕೆ ತುತ್ತಾಗಿದ್ದಾರೆ. ಚುರುಕಿನ ಜೀವನಶೈಲಿ ಹಹಾಗೂ ಅಪಾಯಕಾರಿ ಅಂಶಗಳ ಕೊರತೆಯ ಹೊರತಾಗಿಯೂ ಹಾಕಿ ವೇಲ್ಸ್ ಕಂಪನಿಯ ಸಿಇಒ ಆಗಿದ್ದ ವಾಫಮ್ಗೆ ಇತ್ತೀಚೆಗೆ ಬೆಳಗಿನ ಜಾವದ ಜಾಗಿಂಗ್ ವೇಳೆ ತೀವ್ರ ಎದೆನೋವಿಗೆ ಒಳಗಾಗಿ ರಸ್ತೆಯಲ್ಲಿಯೇ ಕುಸಿದು ಬಿದ್ದಿದ್ದರು.
ಕೈಗಳು ಹಾಗೂ ಮೊಣಕಾಲನ್ನು ರಸ್ತೆಯಲ್ಲಿ ಊರಿ ನೋವಿನಂದ ಎದೆ ಹಿಡಿದುಕೊಂಡಿದ್ದರು. ಈ ಹಂತದಲ್ಲಿ ತಕ್ಷಣವೇ ಅವರಿಗೆ ತಾವು ಕಟ್ಟಿದ್ದ ಸ್ಮಾರ್ಟ್ವಾಚ್ ನೆನಪಾಗಿದೆ. ಅದರಿಂದಲೇ ಪತ್ನಿ ಲೌರಾಗೆ ಕರೆ ಮಾಡಿದ್ದಾರೆ. ಬಳಿಕ ವಾಫಮ್ರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ವಫಮ್ ಅವರ ಅಪಧಮನಿಗಳಲ್ಲಿ ಸಂಪೂರ್ಣ ಬ್ಲಾಕ್ ಇದ್ದ ಕಾರಣದಿಂದ ಹೃದಯಾಘಾತಕ್ಕೆ ಒಳಗಾಗಿದ್ದರು ಎಂದು ವೈದ್ಯರು ತಿಳಿಸಿದ್ದಾರೆ.
ವೈದ್ಯಕೀಯ ಸಿಬ್ಬಂದಿ ತುರ್ತು ಆಂಜಿಯೋಪ್ಲ್ಯಾಸ್ಟಿಯನ್ನು ನಡೆಸಿ ಬ್ಲಾಕ್ ಆಗಿದ್ದ ಅಪಧಮನಿಯನ್ನು ಸರಿ ಮಾಡಿದ್ದಾರೆ, ಇದರಿಂದ ವಾಪಾಮ್ನ ಹೃದಯಕ್ಕೆ ರಕ್ತದ ಹರಿವನ್ನು ಪುನಃಸ್ಥಾಪಿಸಿದರು. ಹೆಚ್ಚುವರಿಯಾಗಿ, ಅಪಧಮನಿಯನ್ನು ತೆರೆದಿಡಲು ಮತ್ತು ಭವಿಷ್ಯದ ಅಡೆತಡೆಗಳನ್ನು ತಡೆಯಲು ಸ್ಟೆಂಟ್ ಅನ್ನು ಸೇರಿಸಲಾಗಿದೆ. ಈ ಹಂತದಲ್ಲಿ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡ ಪರಿಸ್ಥಿತಿ ಕೂಡ ಉದ್ಭವವಾಯಿತು. ಪಲ್ಮನರಿ ಎಡಿಮಾ ಪರಿಸ್ಥಿತಿಗೆ ತುತ್ತಾದ ವಾಫಮ್ ಅವರ ಸ್ಥಿತಿ ಮತ್ತಷ್ಟು ಜಟಿಲವಾಗಿತ್ತು.