ಬೆಂಗಳೂರು: ಎಲ್ಲೆಂದರಲ್ಲಿ ಆಧಾರ್, ಪಾನ್ ಕಾರ್ಡ್ ಕೊಡುವ ಜನರೇ ಎಚ್ಚರ ಈ ಸ್ಟೋರಿ ನೋಡಿದ್ರೆ ಗೊತ್ತಾಗುತ್ತೆ ನಿಮಗೆ ನೀವು ಪ್ಯಾನ್ ಆಧಾರ್ ಕಾರ್ಡ್ ಕೊಟ್ರೆ ಏನಾಗುತ್ತೆ ಅಂತಾ ನಾವು ಹೇಳುತ್ತೇವೆ ಕೇಳಿ
ಎಲ್ಲೆಂದರಲ್ಲಿ ಆಧಾರ್, ಪಾನ್ ಕಾರ್ಡ್ ಕೊಡುವ ಜನರೇ ಎಚ್ಚರನಿಮ್ಮ ದಾಖಲೆಗಳಲ್ಲಿ ರೆಡಿಯಾಗುತ್ತೆ ಬೇನಾಮಿ ಬ್ಯಾಂಕ್ ಖಾತೆಗಳು. ನಿಮ್ಮ ಹೆಸರಲ್ಲಿ ಬ್ಯಾಂಕ್ ಖಾತೆ, ಬೇರೆಯವರ ವಹಿವಾಟು. ಬೆಂಗಳೂರಿನಲ್ಲಿ ಬೃಹತ್ ಬೇನಾಮಿ ಬ್ಯಾಂಕ್ ಖಾತೆ ಸೃಷ್ಟಿಸುವ ಜಾಲ ಪತ್ತೆ
ಸಮೀರ್, ಮಹಮ್ಮದ್ ಹಸನ್, ಮಹಮ್ಮದ್ ಇರ್ಫಾನ್, ಅಮೂಲ್ ಬಾಬು.ತಂಝೀಲ್ , ಮಂಜುನಾಥ ಬಂಧಿತ ಅರೋಪಿಗಳು ಬೃಹತ್ ಜಾಲವನ್ನ ಭೇದಿಸಿದ ಸಿಸಿಬಿ ಸೈಬರ್ ಕ್ರೈಮ್ ಪೊಲೀಸರು.
ಸಾರ್ವಜನಿಕರ ಕೆವೈಸಿ ಪಡೆದು ಬ್ಯಾಂಕ್ ಖಾತೆ ತೆರದು ವಹಿವಾಟು.ಐದರಿಂದ ಹತ್ತು ಸಾವಿರ ಕೊಟ್ಟು ಕೆವೈಸಿ ಪಡೆಯೋ ಅಸಾಮಿಗಳು.ಆಧಾರ್, ಪಾನ್ ಕಾರ್ಡ್ ಮತ್ತು ಒಂದು ಸಹಿಗೆ ಹತ್ತು ಸಾವಿರ ರೇಟ್ ಪಿಕ್ಸ್.ಪ್ರತಿ ಡಾಕ್ಯುಮೆಂಟ್ ಗೆ ಹೊಸ ಸಿಮ್ ಬಳಸಿ ಖಾತೆ ಓಪನ್.
ನಂತರ ನಿಮ್ಮ ಹೆಸರಿನಲ್ಲೆ ಓಪನ್ ಆಗುತ್ತೆ ಬ್ಯಾಂಕ್ ಖಾತೆ.ನಿಮ್ಮ ಹೆಸರಲ್ಲಿ ಬ್ಯಾಂಕ್ ಖಾತೆ ಇದ್ರು, ನೀವು ಬಳಸೋ ಆಗಿಲ್ಲ.ಅದ್ರೂ ನಿಮ್ಮ ಖಾತೆಯಲ್ಲಿ ನಡೆಯುತ್ತೆ ಕೋಟ್ಯಂತರ ರೂಪಾಯಿ ವಹಿವಾಟು.ವಿದೇಶದಲ್ಲಿ ಕುಳಿತು ಬೆಂಗಳೂರಿನಲ್ಲಿ ಬೇನಾಮಿ ಖಾತೆ ತೆರೆದು ವಹಿವಾಟು.
ಸಿಸಿಬಿ ಸೈಬರ್ ಕ್ರೈಮ್ ಪೊಲೀಸರಿಂದ ಬೃಹತ್ ಬೇನಾಮಿ ಖಾತೆ ಜಾಲ ಬೆಳಕಿಗೆ.ಬೇನಾಮಿ ಖಾತೆ ಸೃಷ್ಟಿಸಿ ವಹಿವಾಟು ನಡೆಸುತ್ತಿದ್ದ ಐವರ ಬಂಧನ.ಕೇರಳ ಮೂಲದ ಐವರು ಆರೋಪಿಗಳನ್ನ ಬಂಧಿಸಿದ ಪೊಲೀಸರು.
ಬಂಧಿತರಿಂದ 150ಕ್ಕು ಹೆಚ್ಚು ಬೇನಾಮಿ ಖಾತೆಗಳ ನಿರ್ವಹಣೆ.150ಕ್ಕು ಹೆಚ್ಚು ಖಾತೆಗಳನ್ನ ಫ್ರೀಜ್ ಮಾಡಿದ ಸೈಬರ್ ಕ್ರೈಮ್ ಪೊಲೀಸರು.ಫ್ರೀಜ್ ಆದ ಅಕೌಂಟ್ ಗಳಲ್ಲಿ ಕೋಟ್ಯಂತರ ರೂಪಾಯಿ ವಹಿವಾಟು.ಬಂಧಿತರಿಗೆ ದುಬೈನಲ್ಲಿ ಕುಳಿತು ಸೂಚನೆ ಕೊಡ್ತಿದ್ದ ಕಿಂಗ್ ಪಿನ್.
ಕಿಂಗ್ ಪಿನ್ ಸೂಚನೆ ಮೇರೆಗೆ ಬೇನಾಮಿ ಖಾತೆಗಳನ್ನ ತೆರೆದು ವಹಿವಾಟು.ಖಾತೆಗಳನ್ನ ತೆರೆದು ದುಬೈನಲ್ಲಿರೋ ವ್ಯಕ್ತಿಗೆ ಮಾಹಿತಿ ರವಾನೆ. ಮತ್ತಿಕೆರೆಯಲ್ಲಿ ಮನೆ ಕಂ ಕಚೇರಿ ಮಾಡಿಕೊಂಡಿದ್ದ ಅಸಾಮಿಗಳು.
ಇತ್ತೀಚಿಗೆ ಮಂಜೇಶ್ ಎಂಬಾತ ತನ್ನ ಸ್ನೇಹಿತನ ಜೊತೆ ಮತ್ತಿಕೆರೆ ಮನೆಗೆ ಹೋಗಿದ್ದ.ಈ ವೇಳೆ ಆಧಾರ್, ಪಾನ್ ಕಾರ್ಡ್ ನೀಡಿದ್ದ ಮಂಜೇಶ್ ಸ್ನೇಹಿತ.ಹತ್ತು ಸಾವಿರ ಕೊಡ್ತಾರೆ ನಿನ್ನ ದಾಖಲೆಗಳನ್ನ ಕೊಡುವಂತೆ ಮಂಜೇಶ್ ಗೆ ಹೇಳಿದ್ದ.ಆದ್ರೆ ಸ್ಥಳದಲ್ಲಿ ದಾಖಲೆಗಳ ರಾಶಿ, ಬ್ಯಾಂಕ್ ಪುಸ್ತಕಗಳನ್ನ ನೋಡಿ ಅನುಮಾನಗೊಂಡಿದ್ದ ಮಂಜೇಶ್.
ನಂತರ ಈ ಬಗ್ಗೆ ಸಿಸಿಬಿ ಸೈಬರ್ ಕ್ರೈಮ್ ಪೊಲೀಸರಿಗೆ ಮಾಹಿತಿ ನೀಡಿದ್ದ ಮಂಜೇಶ್. ದೂರು ಪಡೆದು ಬೃಹತ್ ಜಾಲ ಭೇದಿಸಿದ ಸೈಬರ್ ಕ್ರೈಮ್ ಪೊಲೀಸರು