ಬೆಂಗಳೂರು:– ಮಾರ್ಷಲ್ ಗಳ ಸೇವೆಯನ್ನು ಸ್ಥಗಿತಗೊಳಿಸಬೇಕೆಂದು ಡಿಸಿಎಂ ಡಿಕೆಶಿವಕುಮಾರ್ ಅವರಿಗೆ ಎನ್ ಆರ್ ರಮೇಶ್ ಪತ್ರ ಬರೆದಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಮಾರ್ಷಲ್ ಸೇವೆ ಸ್ಥಗಿತಗೊಳಿಸಿಬೇಕು. 198 ವಾರ್ಡ್ ಗಳಲ್ಲಿ ತ್ಯಾಜ್ಯ ವಿಂಗಡಣೆ ಕಾರ್ಯವನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಲು, ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಹಾಕುವವರಿಗೆ ದಂಡ ವಿಧಿಸಲು, 2017 ರಲ್ಲಿ ಪ್ರತೀ ವಾರ್ಡ್ ಗೆ ಒಬ್ಬರಂತೆ ನಿವೃತ್ತ ಸೈನಿಕರು ಅಥವಾ NCC ತರಬೇತಿ ಪೂರ್ಣಗೊಳಿಸಿರುವವರನ್ನು ಮಾರ್ಷಲ್ ಗಳ ಹೆಸರಿನಲ್ಲಿ ನಿಯೋಜಿಸಿಕೊಳ್ಳುವ ಕಾರ್ಯಕ್ಕೆ ಅಂದಿನ ರಾಜ್ಯ ಸರ್ಕಾರವು ಚಾಲನೆ ನೀಡಿತ್ತಲ್ಲದೇ ಈ ಕಾರ್ಯವನ್ನು ಕಾರ್ಯರೂಪಕ್ಕೆ ತರುವ ಹೊಣೆಯನ್ನು Department of Sainik welfare & Re – settlement ” ಇಲಾಖೆಗೆ ವಹಿಸಲಾಗಿತ್ತು.
ಅದಾದ ನಂತರ – ವಾರ್ಡ್ ಮಟ್ಟದ ಮಾರ್ಷಲ್ ಗಳು, MSGP ಘಟಕ, ಪಾಲಿಕೆ ಕಛೇರಿಗಳು, Wireless Operators, ಪ್ರಹರಿ ದಳ, ಕೆ.ಆರ್. ಮಾರ್ಕೆಟ್, ರಸೆಲ್ ಮಾರ್ಕೆಟ್, ಮಡಿವಾಳ ಮಾರ್ಕೆಟ್, ಕಲಾಸಿಪಾಳ್ಯ ಮಾರ್ಕೆಟ್ ಮತ್ತು ಭೂಭರ್ತಿ ಕೇಂದ್ರಗಳಲ್ಲಿ ಒಟ್ಟು 384 ಮಂದಿ ಮಾರ್ಷಲ್ ಗಳು ಇಂದಿರಾ ಕ್ಯಾಂಟೀನ್ ಗಳು, 07 ತ್ಯಾಜ್ಯ ಸಂಸ್ಕರಣಾ ಘಟಕಗಳು, ಜಯನಗರ ವಾಣಿಜ್ಯ ಸಂಕೀರ್ಣ ಮತ್ತು ಬೆಳ್ಳಂದೂರು ಕೆರೆ, ವರ್ತೂರು ಕೆರೆಗಳಲ್ಲಿ ಒಟ್ಟು 366 ಮಂದಿ ಸೇರಿದಂತೆ ಒಟ್ಟಾರೆಯಾಗಿ 750 ಮಂದಿ ಮಾರ್ಷಲ್ ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬ ಮಾಹಿತಿಯನ್ನು ಅಧಿಕಾರಿಗಳು ನೀಡಿದ್ದಾರೆ.
ಈ ಪೈಕಿ 18 ಮಂದಿ JCO, 09 ಮಂದಿ Additional Ward Supervisor ಗಳೂ ಸಹ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರೆಲ್ಲರಿಗೂ ಅತ್ಯುನ್ನತ ಅಧಿಕಾರಿಯಾಗಿ Chief Marshal Officer ಒಬ್ಬರು ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಮಾರ್ಷಲ್ ಗಳ ಸೇವೆಗೆಂದು ಪಾಲಿಕೆಯು ಒಟ್ಟಾರೆ ₹. 157,19,64,264/- ಬೃಹತ್ ಮೊತ್ತದ ಸಾರ್ವಜನಿಕ ತೆರಿಗೆ ಹಣವನ್ನು ಅನವಶ್ಯಕವಾಗಿ ವೆಚ್ಛ ಮಾಡಿದೆ !! ಮನೆ – ಮನೆಗಳಿಂದ ತ್ಯಾಜ್ಯ ಸಂಗ್ರಹದ ಹಂತದಲ್ಲಿ ತ್ಯಾಜ್ಯ ವಿಂಗಡಣೆ ಕಾರ್ಯ, ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಹಾಕುವವರಿಗೆ ದಂಡ ವಿಧಿಸುವ ಕಾರ್ಯ ಮತ್ತು ಟಿಪ್ಪರ್ ಆಟೋಗಳ ಹಾಜರಾತಿ ಬಗ್ಗೆ ನಿಗಾವಹಿಸುವ ಕಾರ್ಯಗಳಿಗೆಂದು. ಇಷ್ಟು ದೊಡ್ಡ ಪ್ರಮಾಣದಲ್ಲಿ ಮಾರ್ಷಲ್ ಗಳನ್ನು ನಿಯೋಜನೆ ಮಾಡಿಕೊಂಡು ಆರೂವರೆ ವರ್ಷಗಳೇ ಕಳೆದಿದ್ದರೂ ಸಹ, ಈವರೆಗೆ ಮೇಲೆ ತಿಳಿಸಿರುವ ಕಾರ್ಯಗಳಲ್ಲಿ ಶೇ. 25% ರಷ್ಟು ಸಫಲತೆಯನ್ನೂ ಸಹ ಪಾಲಿಕೆಯು ಕಂಡಿಲ್ಲ.
• 198 ವಾರ್ಡ್ ಗಳಲ್ಲಿನ ತ್ಯಾಜ್ಯ ವಿಂಗಡಣಾ ಕಾರ್ಯದ ಪ್ರಗತಿ ಶೇ. 35% ರಷ್ಟು ಮಾತ್ರವೇ ಸಾಧಿಸಲಾಗಿದೆ !!!
• ಉದ್ಯಾನ ನಗರಿ ಬೆಂಗಳೂರಿನ ಬೀದಿ ಬೀದಿಗಳಲ್ಲಿ ಕಸದ ರಾಶಿಗಳು ಬಿದ್ದಿರುವ ದೃಶ್ಯಗಳು ಸರ್ವೇ ಸಾಮಾನ್ಯವಾಗಿದೆ.
• ಸುಮಾರು 156 ಕ್ಕೂ ಹೆಚ್ಚು ವಾರ್ಡ್ ಗಳಲ್ಲಿ ನಿಗದಿತ ಟಿಪ್ಪರ್ ಆಟೋರಿಕ್ಷಾಗಳಿಗಿಂತಲೂ ಶೇ. 40% ರಷ್ಟು ಆಟೋಗಳ ಹಾಜರಾತಿಯೇ ಇಲ್ಲದಿದ್ದರೂ ಸಹ ಪೂರ್ಣ ಪ್ರಮಾಣದ ಹಣ ಪಾವತಿ ಮಾಡಲಾಗುತ್ತಿದೆ.
• ಬೆಳ್ಳಂದೂರು ಮತ್ತು ವರ್ತೂರು ಕೆರೆಗಳಲ್ಲಿ 42 ಮಂದಿ ಮಾರ್ಷಲ್ ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬ ಸುಳ್ಳು ಮಾಹಿತಿ ನೀಡಲಾಗಿದೆ.
ಈ ರೀತಿ ಎಲ್ಲಾ ಹಂತಗಳಲ್ಲೂ ಅತ್ಯಂತ ವಿಫಲತೆಯನ್ನು ಕಂಡಿರುವ “ಮಾರ್ಷಲ್ ಗಳ ನಿಯೋಜನೆ ಕಾರ್ಯ”ದಿಂದಾಗಿ ಪಾಲಿಕೆಯು ಪ್ರತೀ ವರ್ಷ ಸುಮಾರು 25 ಕೋಟಿ ರೂಪಾಯಿಗಳಷ್ಟು ಬೃಹತ್ ಮೊತ್ತವನ್ನು ಅನವಶ್ಯಕವಾಗಿ ದುಂದು ವೆಚ್ಛ ಮಾಡುತ್ತಿದೆ ಎಂದು ರಮೇಶ್ ಹೇಳಿದ್ದಾರೆ.