ಬೆಂಗಳೂರು:- ಪೆನ್ಡ್ರೈನ್ ಕುರಿತು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಸತ್ಯವನ್ನ ಬಿಚ್ಚಿಟ್ಟಿದ್ದಾರೆ.
ಪೆನ್ಡ್ರೈವ್ ತೋರಿಸಿದಾಗ ಅಣ್ಣ ನಿನ್ನ ಋಣದಲ್ಲಿದ್ದೇವೆ ನಿಮ್ಮಿಂದ ಬೆಳೆದಿದ್ದೇವೆ ಅಣ್ಣಾ ಅಂತ ಯಾಕೆ ಹೇಳಿದ್ರು? ಪೆನ್ಡ್ರೈವ್ನಲ್ಲಿ ನಂದು ಇದಿಯಾ ಅಂತ ನಿದ್ದೆಗೆಟ್ರಲಾ, ಯಾಕೆ ನಿದ್ರೆಗೆಟ್ಟರು ನಿಮ್ಮ ಮಂತ್ರಿಗಳು, ಯಾಕೆ ನನ್ನ ಬಳಿ ಬಂದರು. ಹಾವು ಬಿಡದೆ ಇಷ್ಟೆಲ್ಲಾ ನಿದ್ದೆಗೆಟ್ಟಿದ್ದೀರಿ, ಹಾವೇ ಇದೆ ಅಂದಿದ್ದಕ್ಕೆ ಇಷ್ಟು ಬೆಚ್ಚಿ ಹೋಗಿದಿರಲ್ಲಾ, ಹಾವು ಬಿಟ್ಟರೆ ಏನಾಗ್ತಿರಾ ನೀವು? ಟೈಂ ಬರುತ್ತೆ ರಿಲೀಸ್ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.
ಕುಮಾರಸ್ವಾಮಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ, ಅವರಿಗೆ ಹೆದರಲ್ಲ ಎಂಬ ಡಿಸಿಎಂ ಡಿಕೆಶಿ ಹೇಳಿಕೆ ವಿಚಾರವಾಗಿ ಮಾತನಾಡಿ, ಇವರ ದುಡ್ಡಿಗೆ, ಇವರ ಪೊಗರಿಗೆ ನಾನು ಇದಕ್ಕೆ ಹೆದರುತ್ತೇನಾ? ಇವರ ರೌಡಿಸಂಗೆ ನಾನು ಹೆದರುತ್ತೇನಾ, ನಾನು ಅದಕ್ಕೇನು ಹೆದರುವವನಲ್ಲ, ಅದ್ಯಾವನೋ ಬಂದು ಕರೆಂಟ್ ಕನೆಕ್ಷನ್ ಕೊಟ್ಟಿದ್ದಾನೆ, ನಾನು ನಿಂತುಕೊಂಡು ಹಾಕ್ಸಿದ್ದೀನಾ. ಎಲ್ಲ ಹೇಳಿದ್ರು ಯಾರು ಕನೆಕ್ಷನ್ ಕೊಟ್ಟವ್ನೆ ಅವನ ಮೇಲೆ ಆಯಕ್ಷನ್ ತೆಗೊಳಲಿ ಅಂತ. ನಾನು ಆ ಕೆಲಸ ಮಾಡಿದ್ನಾ, ಓಪನ್ ಆಗಿ ಧೈರ್ಯವಾಗಿ ಹೇಳಿದೆ. ನನ್ನ ಮನೇಲಿ ಆಗಿದೆ, ಯಾವನೋ ಮಾಡಿರುವ ತಪ್ಪಿರಬಹುದು, ನಾನೇ ವಿಷಾಧ ವ್ಯಕ್ತಪಡಿಸಿದ್ದೇನೆ ಎಂದು ಹೇಳಿದ್ದೆ ಎಂದರು
ಪಾಪ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಹೇಳಿ ಮನೆಗೆ ಕಳ್ಸಿದ್ರು. ಕೇಸ್ ಹಾಕಬೇಕು ಅಂತ ಕಳ್ಸಿದ್ರು ಇದಕ್ಕೆ ನಾನು ಹೆದರುತ್ತೇನಾ? ಆಗಿರುವ ತಪ್ಪು ನಾನೇ ಒಪ್ಪಿಕೊಳ್ಳುತ್ತೇನೆ ಅಂತ ಹೇಳ್ದೆ. 71 ಯೂನಿಟ್ಗೆ ಎರಡು ಸಾವಿರ ಆಗಿದೆ, 68 ಸಾವಿರ ಕಟ್ಟಿ ಅಂತ ಬಿಲ್ ಕಳ್ಸಿದ್ರು, ಅದನ್ನು ಕಟ್ಟಿದ್ದೀನಿ. ನಾನು ಕೇಸ್ ಹಾಕುತ್ತಿದ್ದೇನೆ, ನನ್ನ ಪರಿಸ್ಥಿತಿನೆ ಈ ರೀತಿ ಆದರೆ, ಈ ರೀತಿಯ ಪ್ರಕರಣಕ್ಕೆ ಒಳಗಾದರೆ ಜನಸಾಮಾನ್ಯರ ಪರಿಸ್ಥಿತಿ ಏನು ಎಂದು ಪ್ರಶ್ನಿಸಿದರು.