ಬೆಂಗಳೂರು:- ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಪೊಸ್ಟರ್ ಅಂಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಕಚೇರಿಗೆ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.
ಮತ್ತೆ ಜೆಪಿ ಭವನ ಕಚೇರಿಗೆ ಪೋಸ್ಟರ್ ಅಂಟಿಸುವ ಸಾಧ್ಯತೆ ಇರುವುದ ಹಿನ್ನೆಲೆ, ತಡರಾತ್ರಿ ಎರಡು ಹೊಯ್ಸಳ ವಾಹನಗಳಿಂದ ಪೊಲೀಸ್ ಭದ್ರತೆ ಮಾಡಲಾಗಿದೆ.
14 ರಂದು ಹೆಚ್ಡಿಕೆ ವಿರುದ್ಧ ಪೋಸ್ಟರ್ ಅಂಟಿಸಲಾಗಿತ್ತು. ಕರೆಂಟ್ ಕಳ್ಳತನ ಪ್ರಕರಣ ಸಂಬಂಧ ಹೆಚ್ಡಿಕೆ ವಿರುದ್ಧ ಅವಹೇಳನಕಾರಿ ಪೋಸ್ಟರ್ ಅಂಟಿಸಲಾಗಿತ್ತು. ಬಳಿಕ ನಿನ್ನೆ ಸಂಜೆ ಕೂಡ ಶೇಷಾದ್ರಿಪುರಂ, ರಾಜಾಜಿನಗರ ರಸ್ತೆಗಳಲ್ಲಿ ಪೆನ್ ಡ್ರೈವ್ ಬ್ರದರ್ ಎಂಬ ಬರಹ ಇತ್ತು. ಕಿಡಿಗೇಡಿಗಳು ವ್ಯಂಗ್ಯ ಚಿತ್ರದ ಅವಹೇಳನಕಾರಿ ಪೋಸ್ಟರ್ ಅಂಟಿಸಿದ್ದರು.
ಈ ಹಿನ್ನೆಲೆ ಜೆಡಿಎಸ್ ಕಚೇರಿಗೆ ಪೊಲೀಸರು ಭದ್ರತೆ ಒದಗಿಸಿದ್ದರು.