ಬೆಂಗಳೂರು:- ಡಿಸಿಎಂ ಡಿ.ಕೆ.ಶಿವಕುಮಾರ್ ಕೇಸ್ ನಲ್ಲಿ ಅನುಮತಿ ವಾಪಸ್ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ಸ್ವಜನ ಪಕ್ಷಪಾತ ಅಲ್ಲ ಇದು. ದರೋಡೆಕೋರನ್ನ ರಕ್ಷಣೆ ಮಾಡೋಕೆ ಇರುವ ಸರ್ಕಾರ ಇದು. ಅಮೇಲೆ ಮಾತಾಡ್ತೀನಿ. ಕೋರ್ಟ್ ನಲ್ಲಿ ಇರುವುದರಿಂದ ಜಾಸ್ತಿ ಮಾತಾಡೋದು ಬೇಡ.
ಮರ್ಯಾದೆ ಇದ್ದರೆ ಹೆದರುತ್ತಾರೆ. ಮರ್ಯಾದೆ ಇಲ್ಲದವರಿಗೆ ಕೋರ್ಟ್ ನಲ್ಲಿ ಇದ್ದರೇನು? ಯಾವುದರಲ್ಲಿ ಇದ್ದರೇನು? ಯಾವುದನ್ನು ಬೇಕಾದರು ಕೊಂಡುಕೊಳ್ಳಬಹುದು ಎಂಬ ದುರಹಂಕಾರದಲ್ಲಿ ಇದ್ದಾರೆ ಎಂದು ಸರ್ಕಾರ ಡಿಕೆಶಿ ವಿರುದ್ಧ ಕೇಸ್ ವಾಪಸ್ ಪಡೆದಿದಕ್ಕೆ ಹೆಚ್ಡಿಕೆ ಕಿಡಿಕಾರಿದ್ದಾರೆ.