ಬೆಂಗಳೂರು: ಇತ್ತೀಚೆಗೆ ರಾಜ್ಯ ರಾಜಧಾನಿಯಲ್ಲಿ ವಂಚನೆ ಮಾಡುವವರ ಸಂಖ್ಯೆ ಹೆಚ್ಚಾಗಿದ್ದು ಒಂದು ಚೂರು ಯಾಮಾರಿದ್ರೆ ಸಾಕು ಕೋಟಿ ಕೋಟಿ ಗುಳುಂ ಮಾಡಿ ಬಿಡುತ್ತಾರೆ.
ಹಾಗೆ ರಾಜ್ಯ ರಾಜಧಾನಿಯಲ್ಲಿ GST ಅಧಿಕಾರಿ ಹೆಸರಲ್ಲಿ ಕೋಟಿ ಕೋಟಿ ದೋಖಾ ಮಾಡಿರುವ ಘಟನೆ ಪತ್ತೆಯಾಗಿದ್ದು ಕೋಟಿ ಕೋಟಿ ದೋಖಾ ಹಾಕುತ್ತಿದ್ದ ಯೂಸುಫ್ ಎಂಬಾತನ ವಿರುದ್ದ FIR ದಾಖಲಾಗಿದೆ.
ಬಿಜೆಪಿ ನಾಯಕರು ಗೊತ್ತು, ಇನ್ ಕಮ್ ಟ್ಯಾಕ್ಸ್ ಆಫೀಸರ್ ಗಳು ಗೊತ್ತು ಏನೇ ಡೀಲ್ ಇದ್ರು ಕ್ಲಿಯರ್ ಮಾಡ್ತೀನಿ ಅಂತ ಕೋಟ್ಯಾಂತರ ಹಣ ಪಡೆದು ವಂಚನೆ ಮಾಡಿರುವ ಯೂಸೂಫ್
ಯೂಸುಫ್ ವಿರುದ್ದ ಬೆಂಗಳೂರಿನ ಎರಡು ಪೊಲೀಸ್ ಠಾಣೆಯಲ್ಲಿ ವಂಚನೆ ಕೇಸ್ ದಾಖಲಾಗಿದ್ದು ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲೇ ಎರಡು ಪ್ರತ್ಯೇಕ FIR ದಾಖಲಾಗಿದೆ
GST ಅಧಿಕಾರಿ ಹೆಸರಲ್ಲಿ ವಂಚನೆ ಮಾಡಿದ್ದ ಒಂದು ಕೇಸ್ , ಬ್ಯಾಂಕ್ ನಲ್ಲಿ ಲೋನ್ ಕೊಡಿಸೋದಾಗಿ 2.4 ಕೋಟಿ ವಂಚನೆ ಮಾಡಿದ್ದ ಮತ್ತೊಂದು ಕೇಸ್
ಬಿಜೆಪಿ ಹೈಕಮಾಂಡ್ ಗೊತ್ತು, ಮಾಜಿ ಸಿಎಂ ಗೊತ್ತು ಅಂತ ಬಿಸಿನೇಸ್ ಮ್ಯಾನ್ ಗಳಿಗೆ ವಂಚನೆ ದುಬೈ ನಲ್ಲಿ ಬಿಸಿನೇಸ್ ಇರೋದಾಗಿ ಹೇಳಿ ಲೋನ್ ಕೊಡಿಸೋದಾಗಿ ಆಫರ್ ಮಾಡುತ್ತಿದ್ದ
ಲೋನ್ ಬೇಕು ಅಂತ ಡಾಕ್ಯುಮೆಂಟ್ ಕೊಟ್ರೇ ಈತನೇ ಮತ್ತಷ್ಟು ದಾಖಲೆ ಕ್ರಿಯೇಟ್ ಮಾಡಿ ಬೇರೆಯವರ ದಾಖಲೆ ಮೇಲೆ ಲೋನ್ ಪಡೆಯುತ್ತಿದ್ದ ಹತ್ತಕ್ಕೂ ಹೆಚ್ಚು ಜನರಿಗೆ ಕೋಟ್ಯಾಂತರ ರೂಪಾಯಿ ವಂಚನೆ ಮಾಡಿರುವ ಯೂಸಫ್