ಬೆಂಗಳೂರು: ಕೇರಳದ ಪ್ರಸಿದ್ಧ ಯಾತ್ರಾ ಸ್ಥಳ ಶಬರಿಮಲೆಗೆ ಅಯ್ಯಪ್ಪನ ದರ್ಶನಕ್ಕಾಗಿ ತೆರಳುವವರಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬೆಂಗಳೂರಿನಿಂದ ಬಸ್ ವ್ಯವಸ್ಥೆ ಮಾಡಿದೆ.
ಡಿಸೆಂಬರ್ 1 ರಿಂದ ಶಬರಿಮಲೆಗೆ ವೋಲ್ವೋ ಬಸ್ ಸಂಚರಿಸಲಿದೆ. ವೋಲ್ವೊ ಬಸ್ನ ಟಿಕೆಟ್ ದರ, ಮಾರ್ಗ, ಸಂಚಾರದ ವೇಳಾಪಟ್ಟಿಯ ಕುರಿತು ಕೆಎಸ್ಆರ್ಟಿಸಿ ಮಾಹಿತಿ ನೀಡಿದೆ.
ವಯಸ್ಕರಿಗೆ ಬೆಂಗಳೂರಿಂದ ಶಬರಿಮಲೆಗೆ 1600 ರೂಪಾಯಿ ದರ ನಿಗದಿ ಮಾಡಲಾಗಿದೆ. ಶಾಂತಿನಗರ ಬಸ್ ನಿಲ್ದಾಣದಿಂದ ಮಧ್ಯಾಹ್ನ 1.50 ಕ್ಕೆ ಹೊರಡಲಿರುವ ವೋಲ್ವೋ ಬಸ್ ಮರುದಿನ ಬೆಳಿಗ್ಗೆ 6.45 ಕ್ಕೆ ಪಂಪಾ ತಲುಪಲಿದೆ. ಅಂದು ಸಂಜೆ ಮತ್ತೆ ಪಂಪಾದಿಂದ ಹೊರಟು ಮರುದಿನ ಬೆಳಿಗ್ಗೆ 10 ಗಂಟೆಗೆ ಬೆಂಗಳೂರು ತಲುಪಲಿದೆ.
ಶಬರಿಮಲೆ ಬಸ್ಗೆ ಟಿಕೆಟ್ ಬುಕಿಂಗ್ ಹೇಗೆ?
ಕೆಎಸ್ಆರ್ಟಿಸಿ ಅಧಿಕೃತ ವೆಬ್ಸೈಟ್ (www.ksrtc.in) ಮೂಲಕ ಅಥವಾ ರಾಜ್ಯದಾದ್ಯಂತ ಪ್ರಮುಖ ಬಸ್ ಡಿಪೋಗಳಲ್ಲಿ ಕಾರ್ಯನಿರ್ವಹಿಸುವ ಕೆಎಸ್ಆರ್ಟಿಸಿ ಟಿಕೆಟ್ ಕೌಂಟರ್ಗಳಲ್ಲಿ ಟಿಕೆಟ್ ಕಾಯ್ದಿರಿಸುವಂತೆ ಸಂಸ್ಥೆಯು ಪ್ರಯಾಣಿಕರಿಗೆ ಸಲಹೆ ನೀಡಿದೆ.
ಕೆಎಸ್ಆರ್ಟಿಸಿ ಪ್ಯಾಸೆಂಜರ್ ಅಡ್ವೈಸರಿಯಲ್ಲಿರುವ ಮಾಹಿತಿ ಪ್ರಕಾರ, ಕರ್ನಾಟಕ ರಾಜ್ಯದಾದ್ಯಂತ ಮತ್ತು ನೆರೆಯ ರಾಜ್ಯಗಳ ಪ್ರಮುಖ ಕಡೆಗಳಲ್ಲಿ ಒಟ್ಟು 707 ಟಿಕೆಟ್ ಕೌಂಟರ್ಗಳು ಕಾರ್ಯನಿರ್ವಹಿಸುತ್ತಿವೆ.