ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಕೆಲಸ ಅರಸೋ ಯುವಕ ಯುವತಿಯರೇ ಎಚ್ಚರ ತಲೆ ಎತ್ತಿದೆ ಕೆಲಸ ಕೊಡ್ತೀವಿ ಅಂತಾ ವಂಚಿಸುವ ಜಾಲ ನೀವೇನಾದ್ರೂ ಅಪ್ಪಿ ತಪ್ಪಿ ಯಾವುದೋ ಕಂಪನಿ ಹೆಸರು ಹೇಳಿದ್ರೂ ಸೇರಿಕೊಂಡ್ರೆ ಹಣವೆಲ್ಲಾ ಗೋತ. ಇಲ್ಲಿದೆ ನೋಡಿ ಇಂಟ್ರಸ್ಟಿಂಗ್ ಸ್ಟೋರಿ!
ಹೀಗೆ ಬರೋಬ್ಬರಿ ಒಂದೂ ಸಾವಿರಕ್ಕೂ ಹೆಚ್ಚು ಯುವಕ ಯುವತಿಯರನ್ನೇ ಟಾರ್ಗೆಟ್ ಮಾಡಿ ವಂಚಿಸುವ ಟೀಂ. ಆಂಧ್ರ ಮೂಲದ ವಿದ್ಯಾವಂತರೇ ಇವರ ಟಾರ್ಗೆಟ್ ಆಗಿದ್ದು ಒಬ್ಬೊಬ್ಬರಿಂದ ಲಕ್ಷ ಲಕ್ಷ ಹಣ ಪಡೆದು ವಂಚನೆ
ಪವನ್ ಕುಮಾರ್ ಕೊಲ್ಲಿ ಮತ್ತು ತಂಡದಿಂದ ವಂಚನೆ 20 ಕೋಟಿಗೂ ಅಧಿಕ ಹಣ ವಸೂಲಿ ಮಾಡಿದೆ ಈ ಟೀಂ ವೈಟ್ ಫೀಲ್ಡ್ ಪೊಲೀಸರಿಂದ ಆರೋಪಿ ಪವನ್ ಕುಮಾರ್ ಬಂಧನ
ಅಷ್ಟಕ್ಕೂ ಈ ಪವನ್ ಹೇಗೆ ವಂಚಿಸ್ತಿದ್ದ ಗೊತ್ತಾ?
ಹೈಫೈ ಟೆಕ್ ಪಾರ್ಕ್ ನಲ್ಲಿ ಕಚೇರಿ ಮಾಡ್ತಿದ್ದ ಐಟಿ ಕಂಪನಿ ಹೆಸರಲ್ಲಿ ಮಾಡ್ತಿದ್ದ ಮೋಸ ಪರಿಚಯಸ್ಥರ ಮೂಲಕ ನಿರುದ್ಯೋಗಿ ಯುವಕ,ಯುವತಿಯರಿಗೆ ಗಾಳ ಹಾಕಿ ನಮ್ಮ ಕಂಪನಿಯಲ್ಲಿ ಕೆಲಸ ಕೊಡ್ತೀನಿ ಅಂತ ಹೇಳುತ್ತಿದ್ದ,
SIMAKH TECHNOLOGY ಮತ್ತು MONTY CORPS ಎಂಬ ಕಂಪನಿ ತೆರೆದಿದ್ದ ವರ್ಷಕ್ಕೆ ಐದು ಲಕ್ಷ ಪ್ಯಾಕೆಜ್ ಕೊಡ್ತೀನಿ ಎಂದು ಆಮಿಷ ಒಡ್ಡುತ್ತಿದ್ದ ಅಷ್ಟೇ ಅಲ್ಲ ಬೇರೆ ಕಂಪನಿಯಲ್ಲಿಯೂ ಕೆಲಸ ಕೊಡಿಸೀದಾಗಿ ಡ್ರಾಮ ಕೂಡ ಮಾಡುತ್ತಿದ್ದನು.
ಅದಕ್ಕಾಗಿ ಒಬ್ಬೊಬ್ಬರಿಂದ ಒಂದರಿಂದ ಎರಡು ಲಕ್ಷದವರೆಗೆ ಸುಲಿಗೆ ಒಂದು ಸೆಕೆಂಡ್ ಹ್ಯಾಂಡ್ ಲ್ಯಾಪ್ ಟಾಪ್ ಕೊಟ್ಟು ಕೆಲಸಕ್ಕೆ ಸೇರಿಸ್ಕೊಳ್ತಿದ್ದ ಒಂದು ತಿಂಗಳ ಸಂಬಳ ಕೂಡ ನೀಡ್ತಿದ್ದ ಆಸಾಮಿ ಆ ಬಳಿಕ ಕಂಪನಿ ಕ್ಲೋಸ್ ಮಾಡಿ ಎಸ್ಕೇಪ್ ಹೀಗೆ ನಗರದ ಬೇರೆ ಬೇರೆ ಭಾಗಗಳಲ್ಲಿ ವಂಚನೆ ಮಾಡುತ್ತಿದ್ದ ಆಸಾಮಿ
ಈಗ ಹಣ ಕಳೆದುಕೊಂಡ ಯುವಕ,ಯುವತಿಯರು ಕಂಗಾಲು ದೆಹಲಿಯಲ್ಲಿ ತಲೆ ಮರೆಸಿಕೊಂಡಿದ್ದವನನ್ನ ಹಿಡಿದಿದ್ದೇ ರೋಚಕ ಸಾವಿರಕ್ಕೂ ಅಧಿಕ ಜನರ ವಂಚಿಸಿ ದೆಹಲಿಯಲ್ಲಿ ಕುಳಿತಿದ್ದ ಪವನ್ ಆತನನ್ನ ಬೆಂಗಳೂರಿಗೆ ಕರೆಸಿಕೊಳ್ಳಲು ಸಂತ್ರಸ್ಥರಿಂದಲೇ ಸ್ಕೆಚ್ ಮೂವತ್ತು ಜನರು ಕಂಪನಿ ಸೇರಿಕೊಳ್ಳಲು ಬಂದಿದ್ದಾರೆ ಹಣದ ಜೊತೆಗೆ ರೆಡಿ ಇದ್ದಾರೆ ಎಂದು ಬೆಂಗಳೂರಿಗೆ ಕರೆಸಿಕೊಂಡಿದ್ದ ನೊಂದವರು ಎದ್ನೋ ಬಿದ್ನೋ ಅಂತಾ ಓಡೋಡಿ ಬೆಂಗಳೂರಿಗೆ ವಿಮಾನದ ಮೂಲಕ ಆಗಮನ ಖಾಸಗಿ ಹೋಟೆಲ್ ನಲ್ಲಿ ಕರೆಸಿಕೊಂಡು ಲಾಕ್ನಂತರ ಆತನೆ 112ಗೆ ಕರೆ ಮಾಡಿದ್ದ ಪವನ್
ಸ್ಥಳಕ್ಕೆ ಹೋದ ಪೊಲೀಸರಿಗೆ ಗೊತ್ತಾಗಿತ್ತು ಅಸಲಿಯತ್ತು ವೈಟ್ ಫೀಲ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ ಸಂತ್ರಸ್ಥರು ಎಫ್ಐಆರ್ ದಾಖಲಿಸಿಕೊಂಡು ಆರೋಪಿ ಬಂಧಿಸಿ ಹೆಡೆಮುರಿ ಕಟ್ಟಿದ್ದಾರೆ!