ಬೆಂಗಳೂರು: ಶಕ್ತಿಯೋಜನೆಗಳಲ್ಲಿ ಒಂದಾದ ಮಹಿಳೆಯರಿಗೆ ಉಚಿತ ಬಸ್ ಸೇವೆಯನ್ನು ಮಹಿಳೆಯರು ದುರುಪಯೋಗ ಪಡಿಸಿಕೊಳ್ಳುತ್ತಿರು ಆರೋಪಗಳು ಕೇಳಿ ಬರುತ್ತಿದೆ.
ಕಾಂಗ್ರೆಸ್ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಮಹಿಳೆಯರಿಗೆ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಬಸ್ಗಳಲ್ಲಿ ರಾಜ್ಯಾದ್ಯಂತ ಉಚಿತ ಸಾರಿಗೆ ಸೇವೆಯನ್ನು ಮಹಿಳಾ ಪ್ರಯಾಣಿಕರು ದುರುಪಯೋಗಪಡಿಸಿಕೊಳ್ಳುತ್ತಿದ್ದು ಕಂಡೆಕ್ಟರ್ ಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಉಚಿತ ಬಸ್ ಸೇವೆಯ ಟಿಕೆಟ್ ಪಡೆಯುವಾಗ ಮಹಿಳಾ ಪ್ರಯಾಣಿಕರು ತಮ್ಮ ಆಧಾರ್ ಕಾರ್ಡ್ ಅಥವ ಇತರೇ ಗುರುತಿನ ಚೀಟಿಗಳನ್ನು ತೋರಿಸಿ ತಮಗೆ ಬೇಕಾದ ಸ್ಟಾಪ್ ಗಳಿಗೆ ಟಿಕೆಟ್ ಪಡೆಯುತ್ತಾರೆ. ಬಳಿಕ, ಮಾರ್ಗ ಮಧ್ಯದಲ್ಲೇ ಇಳಿದು ಹೋಗುತ್ತಿದ್ದಾರೆ, ಇಂಥ ಸಂದರ್ಭದಲ್ಲಿ ಟಿಕೆಟ್ ಚೆಕಿಂಗ್ ಅಧಿಕಾರಿಗಳು ಬಂದಾಗ ಮಹಿಳಾ ಪ್ರಯಾಣಿಕರಿಗೆ ನೀಡಿದ ಟಿಕೆಟ್ ನ ಲೆಕ್ಕದಲ್ಲಿ ವ್ಯತ್ಯಾಸಗಳು ಕಂಡುಬರುತ್ತಿದ್ದು, ಕಂಡೆಕ್ಟರ್ಗಳು ತಮಗೆ ಇಷ್ಟಬಂದಂತೆ ಟಿಕೆಟ್ ಗಳ ಹರಿಯುತ್ತಿದ್ದಾರೆ ಇದರಿಂದ ಸರ್ಕಾರಕ್ಕೆ ನಷ್ಟವನ್ನು ಉಂಟುಮಾಡುತ್ತಿದ್ದಾರೆ ಎನ್ನುವ ಆರೋಪಗಳು ಕಂಡೆಕ್ಟರ್ಗಳ ಹೊತ್ತುಗಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.