ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ವಾಹನ ಸವಾರರಿಗೆ ಗುಂಡಿಗಳು ಯಮಧೂತನಂತೆ ಕಾಡ್ತಿವೆ.ಈ ಕಿಲ್ಲರ್ ರಸ್ತೆ ಗುಂಡಿಗಳು ಜನರ ಜೀವ ಬಲಿ ಪಡೆಯುತ್ತಿವೆ.ಪದೇ ಪದೇ ಸಾವುಗಳು ಸಂಭವಿಸಿದರೂ ಬಿಬಿಎಂಪಿ ಕಣ್ಣು ತೆರೆಯುತ್ತಿಲ್ಲ.ಹೈಕೋರ್ಟ್ ಕಿವಿ ಹಿಂಡಿದರೂ ಪಾಲಿಕೆ ಆಡಳಿತ ವ್ಯವಸ್ಥೆ ಎಚ್ಚೆತ್ತುಕೊಂಡಿಲ್ಲ.ಹೀಗಾಗಿ ಯಥಾಪ್ರಕಾರ ಪಾಲಿಕೆ ಕುಂಭ ಕರ್ಣ ನಿದ್ರೆಗೆ ಜಾರಿದೆ. ಡಿಸಿಎಂ ಡಿಕೆ ಶಿವಕುಮಾರ್ ನವೆಂಬರ್ ತಿಂಗಳೊಳಗೆ ಗುಂಡಿ ಮುಚ್ಚಿ ಎಂದ್ರೂ ಪಾಲಿಕೆ ಮುಚ್ಚಿಲ್ಲ. ಇನ್ನೂ ಸಾಕಷ್ಟು ರಸ್ತೆಗಳಲ್ಲಿ ಬಲಿಯಾಗಿ ಕಾಯ್ತಿವೆ ಯಮಗುಂಡಿಗಳು. ಹಾಗಾದ್ರೆ ಇನ್ನೆರಡು ದಿನಗಳಲ್ಲಿ ಗುಂಡಿ ಮುಚ್ಚುತ್ತಾ ಪಾಲಿಕೆ ಬನ್ನಿ ಹೇಳ್ತೀವಿ.
ಸಿಲಿಕಾನ್ ಸಿಟಿ ಬೆಂಗಳೂರು ಅಕ್ಷರಶಃ ರಸ್ತೆ ಗುಂಡಿಗಳ ರಾಜಧಾನಿಯಾಗುತ್ತಿದೆಯಾ? ಎನ್ನುವ ಅನುಮಾನ ಮೂಡುತ್ತಿದೆ.ಅತಿಯಾದ ಮಳೆ ಹಾಗೂ ಪಾಲಿಕೆಯ ಅಸಮರ್ಪಕ ರಸ್ತೆ ನಿರ್ವಹಣೆ ಕಾರಣದಿಂದಾಗಿ ರಾಜಧಾನಿ ರಸ್ತೆಗಳೆಲ್ಲ ಗುಂಡಿಮಯವಾಗಿವೆ ಹೈಕೋರ್ಟ್ ಪದೇ ಪದೆ ಚಾಟಿ ಬೀಸಿದ್ದರೂ ಯಾವುದೇ ಉಪಯೋಗ ಆಗಿಲ್ಲ. ಕಳೆದ ಹತ್ತು ತಿಂಗಳಿನಲ್ಲಿ ಸಾವಿರಾರು ರಸ್ತೆ ಗುಂಡಿ ಮುಚ್ಚಿದ್ದರೂ ನಗರ ರಸ್ತೆಗಳು ಗುಂಡಿ ಮುಕ್ತವಾಗಿಲ್ಲ.
ನಗರದ ರಸ್ತೆ ಗುಂಡಿಗಳಿಗೆ ಒಂದು ವರ್ಷದ ಅವಧಿಯಲ್ಲೇ ಹತ್ತಾರು ಜನರನ್ನ ಬಲಿ ಪಡೆದುಕೊಂಡಿದೆ. ಆದ್ರೆ ಪಾಲಿಕೆ ಎಚ್ಚೆತ್ತುಕೊಂಡಿಲ್ಲ. ಡಿಸಿಎಂ ಹಾಗೂ ಬೆಂ ಗಳೂರು ನಗರಾಭಿವೃದ್ದಿ ಸಚಿವ ಡಿಕೆ ಶಿವಕುಮಾರ್ ನವೆಂಬರ್ ತಿಂಗಳೊಳಗೆ ರಸ್ತೆಯಲ್ಲಿ ಬಿದ್ದಿರೋ ಗುಂಡಿಗಳನ್ನ ಮುಚ್ಚಿ ಅಂತ ಪಾಲಿಕೆ ಅಧಿಕಾರಿಗಳಿಗೆ ಗಡುವು ನೀಡಿದ್ದಾರೆ. ಆದ್ರೆ ನವೆಂಬರ್ ತಿಂಗಳು ಮುಗಿಯೋಕೆ ಇನ್ನೂ ಎರಡನೇ ದಿನ ಇದ್ರೂ ನಗರದ ರಸ್ತೆಗಳಲ್ಲಿ ಗುಂಡಿಗಳು ಹಾಗೆ ಬಿದ್ದಿವೆ. ನಗರದೆಲ್ಲಡೆ ರಸ್ತೆ ಗುಂಡಿ ಬಿದ್ದಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.ಈ ನಡುವೆ ಇನ್ನೆಷ್ಟು ಬಲಿಯಾಗಬೇಕೋ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕ್ತಿದ್ದಾರೆ..
ಮಳೆಗಾಲದಲ್ಲೂ ತ್ವರಿತಗತಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ತಂತ್ರಜ್ಞಾನ ಲಭ್ಯವಿದೆ. ಆದರೆ, ಅದನ್ನು ಬಳಸಿಕೊಳ್ಳಲು ಬಿಬಿಎಂಪಿ ಮುಂದಾಗುತ್ತಿಲ್ಲ.ಹೀಗಾಗಿ ನಗರದೆಲ್ಲಡೆ ರಸ್ತೆ ಗುಂಡಿಗಳಿಗೆ ಜನ ಬಲಿಯಾಗ್ತಿದ್ದಾರೆ..ಆದ್ರೂ ಪಾಲಿಕೆ ರಸ್ತೆ ಗುಂಡಿ ಮುಚ್ಚುವ ಕಾರ್ಯಕ್ಕೆ ವೇಗ ನೀಡ್ತಿಲ್ಲ. ಇದು ಬೆಂಗಳೂರಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಒಟ್ಟಿನಲ್ಲಿ ಕಸದಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ರಾಜಧಾನಿ ಮಾರ್ಯದೆ ಹಾಳಾಗಿದೆ.ಬ್ರ್ಯಾಂಡ್ ಬೆಂಗಳೂರು ಮಾನ ಉಳಿಸೋ ಪ್ರಯತ್ನ ನಡೆಯುತ್ತಿಲ್ಲ..ಪಾಲಿಕೆ ಗುಂಡಿ ಮುಚ್ಚುತ್ತೇವೆ ಮುಚ್ಚತ್ತೇವೆ ಅಂತ ವಾಹನ ಸವಾರರ ಜೊತೆ ಚೆಲ್ಲಾಟ ಆಡ್ತಿದೆ. ಮಳೆಯಿಂದ ಗುಂಡಿಗಳು ಬಿದ್ದು ಹಲವು ಮಂದಿ ಪ್ರಾಣವನ್ನ ಕಳೆದುಕೊಂಡಿದ್ದಾರೆ ಆದರೂ ಎಚ್ಚೆತ್ತುಕೊಳ್ಳದ ಪಾಲಿಕೆ ಗುಂಡಿ ಮುಚ್ಚುವ ನೆಪದಲ್ಲಿ ಜನರ ಜೊತೆ ಚೆಲ್ಲಾಟ ಆಡ್ತಿರೋದು ದುರಂತವೇ ಸರಿ..