ಬೆಂಗಳೂರು: ಎರಡು ದಿನದ ಹಸುಗೂಸಿಗೆ ದೇಹ ಪೂರ್ತಿ ಜಿರಳೆಗಳು ಕಚ್ಚಿರುವ ಘಟನೆ ನಗರದ ವಾಣಿವಿಲಾಸ ಸರ್ಕಾರಿ ಆಸ್ಪತ್ರೆ ಯಲ್ಲಿ ನಡೆದಿದೆ. ಹೌದು ಬೆಂಗಳೂರಿನ ವಾಣಿವಿಲಾಸ ಸರ್ಕಾರಿ ಆಸ್ಪತ್ರೆ ಯಲ್ಲಿ ಅವ್ಯವಸ್ಥೆ ಎದುರಾಗಿದ್ದು,ಆಸ್ಪತ್ರೆ ವೈದ್ಯರು, ಸಿಬ್ಬಂದಿ ಎಡವಟ್ಟಿನಿಂದ ಜಿರಳೆ ಕಾಟಕ್ಕೆ ಮಕ್ಕಳು,
ಆಸ್ಪತ್ರೆಯಲ್ಲಿರುವ ಬಾಣಂತಿಯರು ಪರದಾಡಿದ್ದಾರೆ. 2 ದಿನದ ಹಿಂದೆ ಗಂಡು ಮಗುವಿಗೆ ಆಶಾರಾಣಿ ಜನ್ಮ ನೀಡಿದ್ದರು. ಬಾಣಂತಿ ವಾರ್ಡ್ನಲ್ಲಿ ಆಸ್ಪತ್ರೆಯ ಸಿಬ್ಬಂದಿ ಬೆಡ್ ಸ್ವಚ್ಛತೆ ಮಾಡಿಲ್ಲ. ಹೆರಿಗೆ ವಾರ್ಡ್ನಲ್ಲೂ ಸ್ವಚ್ಛತೆ ಇಲ್ಲದ್ದರಿಂದ ಜಿರಳೆ ಕಾಟ ಹೆಚ್ಚಿದೆ.